ಮಿರಿಮಿರಿ ಮಿಂಚುವ ಆಶಿಕಾ ಫೋಟೋಶೂಟ್; ಕನ್ನಡತಿಯ ಚೆಲುವಿಗೆ ಫ್ಯಾನ್ಸ್ ಫಿದಾ
ನಟಿ ಆಶಿಕಾ ರಂಗನಾಥ್ ಅವರು ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯಾಗಿದ್ದಾರೆ. ಅವರು ನಟಿಸಿದ ‘ಮದಗಜ’ ಸಿನಿಮಾ ಇತ್ತೀಚೆಗೆ 50ನೇ ದಿನ ಪೂರೈಸಿತು.
Updated on: Jan 23, 2022 | 5:21 PM

Avatara Purusha actress Ashika Ranganath shares new photos on Instagram

Avatara Purusha actress Ashika Ranganath shares new photos on Instagram

ಆಶಿಕಾ ರಂಗನಾಥ್ ನಟನೆಯ ಬಹುನಿರೀಕ್ಷಿತ ‘ರೇಮೋ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆ ಚಿತ್ರದಲ್ಲಿ ಅವರು ಇಶಾನ್ ಜೊತೆ ತೆರೆಹಂಚಿಕೊಂಡಿದ್ದಾರೆ. ‘ರೇಮೋ’ಗೆ ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ.

ಶರಣ್ ನಾಯಕತ್ವದ ‘ಅವತಾರ ಪುರುಷ’ ಚಿತ್ರಕ್ಕೂ ಆಶಿಕಾ ರಂಗನಾಥ್ ನಾಯಕಿ. ಸಿಂಪಲ್ ಸುನಿ ನಿರ್ದೇಶನದ ಆ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಿದೆ. ಕೊರೊನಾ ಕಾರಣದಿಂದ ರಿಲೀಸ್ ತಡವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ರಂಗನಾಥ್ ಆ್ಯಕ್ಟೀವ್ ಆಗಿರುತ್ತಾರೆ. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಸದ್ಯ 14 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಫೋಟೋಗಳ ಬಗ್ಗೆ ಆಶಿಕಾ ರಂಗನಾಥ್ ಅವರಿಗೆ ಕ್ರೇಜ್ ಇದೆ. ಆಗಾಗ ಅವರು ಬಗೆಬಗೆಯ ಫೋಟೋಶೂಟ್ ಮಾಡಿಸುತ್ತಾರೆ. ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
























