- Kannada News Photo gallery Bangalore Weather: again heavy rain in Bengaluru: Many roads are flooded, Karnataka news in kannada
ಬೆಂಗಳೂರಿನಲ್ಲಿ ಮತ್ತೆ ಮಳೆ: ಧಾರಾಕಾರ ಮಳೆಗೆ ಹಲವು ರಸ್ತೆಗಳು ಜಲಾವೃತ, ವಾಹನಗಳು ಮುಳುಗಡೆ
ಬಂಗಾಳಕೊಲ್ಲಿಯ ಟರ್ಫ್ ಎಫೆಕ್ಟ್ನಿಂದ ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನದಿಂದ ಮಳೆಯಾಗುತ್ತಿದೆ. ಕತ್ತಲಾಗ್ತಿದ್ದಂತೆ ಎಂಟ್ರಿಯಾಗುವ ವರುಣನ ಅಬ್ಬರಕ್ಕೆ ಸಿಲಿಕಾನ್ ಸಿಟಿಯಲ್ಲಿ ಹಲವು ಅವಾಂತರಗಳು ಅನಾವರಣವಾಗುತ್ತಿವೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಹಲವೆಡೆ ವಾಹನಗಳು ಮುಳುಗಿ ಹೋಗಿವೆ.
Updated on:Oct 05, 2024 | 9:22 PM

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನದಿಂದ ವರುಣನ ಎಂಟ್ರಿಯಾಗುತ್ತಿದೆ. ಸಂಜೆಯಾದರೆ ಸಾಕು ಧೋ ಅಂತಾ ಸುರಿಯುವ ಮಳೆಗೆ ಜನರು ಹೈರಾಣಾಗಿದ್ದಾರೆ. ಇದೀಗ ರಾತ್ರಿಯಾಗುತ್ತಿದ್ದಂತೆ ನಗರದಲ್ಲಿ ಗುಡುಗು ಸಹಿತ ಮತ್ತೆ ಧಾರಾಕಾರ ಮಳೆ ಆರಂಭವಾಗಿದೆ.

ಚಾಮರಾಜಪೇಟೆ, ಸಂಪಂಗಿರಾಮನಗರ, ಟೌನ್ ಹಾಲ್, ಲಾಲ್ ಬಾಗ್, ರಿಚ್ಮಂಡ್ ರಸ್ತೆ, ಜಯನಗರ, ಬನಶಂಕರಿ ಮತ್ತು ಕಾರ್ಪೋರೇಷನ್ ಸುತ್ತಮುತ್ತ ಧಾರಾಕಾರ ಮಳೆ ಆಗಿದೆ. ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ.

ರಾಜಾಜಿನಗರ ಸುತ್ತಮುತ್ತ ವರುಣಾರ್ಭಟ ಜೋರಾಗಿದ್ದು, ಮಳೆಗೆ ರಸ್ತೆಗಳು ಹೊಳೆಯಂತಾಗಿವೆ. ನೀರು ತುಂಬಿದ ರಸ್ತೆಯಲ್ಲೇ ವಾಹನ ಸವಾರರು ಸಂಚಾರ ಮಾಡುವ ಪರಿಸ್ಥತಿ ನಿರ್ಮಾಣವಾಗಿದೆ.

ಮಳೆ ನೀರು ಹೊರ ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಹೆದ್ದಾರಿಯ ನೀರಿನಲ್ಲಿ ಕಾರು, ಆಟೋ, ಬೈಕ್ಗಳು ಮುಳುಗಿವೆ.

ಮಳೆ ನೀರು ಹೊರ ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಹೆದ್ದಾರಿಯ ನೀರಿನಲ್ಲಿ ಕಾರು, ಆಟೋ, ಬೈಕ್ಗಳು ಮುಳುಗಿವೆ.

ಅತ್ತ ಸರ್ಜಾಪುರ ರಸ್ತೆಯಲ್ಲಿ ಇಡೀ ರಸ್ತೆ ಜಲಾವೃತವಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Published On - 9:17 pm, Sat, 5 October 24



