Updated on:Jan 19, 2023 | 12:01 PM
ಚಳಿಗಾಲವು ಮುಗಿಯತ್ತಾ ಬರುತ್ತಿದೆ, ಇಂತಹ ಸಮಯದಲ್ಲಿ ಆಹ್ಲಾದಕರ ವಾತಾವರಣವನ್ನು ಅನುಭವಿಸಲು ನೀವು ಬಯಸಿದರೆ ಈ ಪ್ರದೇಶಗಳಿಗೆ ಭೇಟಿ ನೀಡಿ. ಇದು ನೀವು ಫೆಬ್ರವರಿ ತಿಂಗಳ ಹವಮಾನದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.
ಉದಯಪುರ, ರಾಜಸ್ಥಾನ: ಫೆಬ್ರವರಿ ತಿಂಗಳಲ್ಲಿ ಸೂರ್ಯನ ಶಾಖವು ಕಡಿಮೆ ಇರುವುದರಿಂದ ಇಲ್ಲಿನ ಕೋಟೆಗಳು ಮತ್ತು ಅರಮನೆಗಳಿಗೆ ಭೇಟಿ ನೀಡುವುದು ಅತ್ಯಂತ ಆರಾಮದಾಯಕ ಅನುಭವವನ್ನು ನೀಡುತ್ತದೆ. ಈ ಸಮಯಲ್ಲಿ ತಾಪಮಾನವು 12 ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ.
ಡಿಯೋಮಾಲಿ, ಒರಿಸ್ಸಾ: ಓಡ್ರಾ ಬುಡಕಟ್ಟು ಜನಾ೦ಗಗಳ ತವರೂರಾಗಿದ್ದ ಒರಿಸ್ಸಾ ರಾಜ್ಯವು ಅಲ್ಲಿನ ಪುರಾತನ ವಾಸ್ತುಶಿಲ್ಪದಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಫೆಬ್ರವರಿ ತಿಂಗಳಲ್ಲಿ ಭೇಟಿ ನೀಡಲು ಉತ್ತಮ ತಾಣವಾಗಿದೆ.
ಕಸೌಲಿ, ಹಿಮಾಚಲ ಪ್ರದೇಶ: ಈ ಗಿರಿಧಾಮವನ್ನು ಕಣ್ತುಂಬಿಸಲು ಫೆಬ್ರವರಿ ಉತ್ತಮ ಸಮಯ. ಗಾಳಿಯಲ್ಲಿ ಸ್ವಲ್ಪ ಚಳಿ, ತಂಗಾಳಿಯುಳ್ಳ ಮುಂಜಾನೆ ದೃಶ್ಯ ಮತ್ತು ಸಂಜೆಯ ವಾತಾವರಣ ಸೂರ್ಯಾಸ್ತಗಳೊಂದಿಗೆ, ಕಸೌಲಿ ಒಂದು ಕನಸಿನ ತಾಣವಾಗಿದೆ.
ಶಿಲ್ಲಾಂಗ್, ಮೇಘಾಲಯ: ದೇಶದ ಈ ಭಾಗದಲ್ಲಿ ಮಾನ್ಸೂನ್ ಆರಂಭದಲ್ಲಿ ಪ್ರಾರಂಭವಾಗುತ್ತದೆ ಆದ್ದರಿಂದ ಈ ಸುಂದರವಾದ ಬೆಟ್ಟದ ತಾಣಕ್ಕೆ ಭೇಟಿ ನೀಡಲು ಫೆಬ್ರವರಿ ಸೂಕ್ತ ಸಮಯ. ನಿಮ್ಮವರೊಂದಿಗೆ ಒಂದು ಸುಂದರ ಕ್ಷಣಗಳನ್ನು ನೀವಿಲ್ಲಿ ಕಳೆಯಬಹುದು.
ಬೆಂಗಳೂರು, ಕರ್ನಾಟಕ: ಫೆಬ್ರವರಿ ತಿಂಗಳಲ್ಲಿ ಕಡಿಮೆ ಸೂರ್ಯನ ಶಾಖವಿರುವುದರಿಂದ ಬೆಂಗಳೂರಿನಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ನಂದಿ ಬೆಟ್ಟದಲ್ಲಿ ಮುಂಜಾನೆಯ ಸುಂದರ ವಾತಾವರಣವನ್ನು ಕಣ್ತುಂಬಿಸಿಕೊಳ್ಳಿ.
ದೆಹಲಿ: ಭಾರತದ ರಾಜಧಾನಿಗೆ ಭೇಟಿ ನೀಡಲು ಫೆಬ್ರವರಿ ಅತ್ಯುತ್ತಮ ಸಮಯವಾಗಿದೆ. ನೀವು ದೆಹಲಿಯ ಐತಿಹಾಸಿಕ ಸ್ಮಾರಕಗಳ ಭೇಟಿ, ಆಹಾರ ಸವಿಯಲು ಮತ್ತು ಶಾಪಿಂಗ್ ಮಾಡಲು ಬಯಸಿದರೆ, ಫೆಬ್ರವರಿ ಅತ್ಯುತ್ತಮ ಸಮಯ.
Published On - 12:01 pm, Thu, 19 January 23