ಬೀದರ್: ಸರ್ಕಾರಿ ಶಾಲೆ ಸುತ್ತಮುತ್ತ ತುಂಬಿದ ನೀರು, ಒಳಗಡೆ ಹೋಗಲಾಗದ್ದಕ್ಕೆ ಐದು ದಿನ ರಜೆ!

Edited By:

Updated on: Sep 03, 2024 | 1:58 PM

ಬೀದರ್, ಸೆಪ್ಟೆಂಬರ್ 3: ಭಾರಿ ಮಳೆಯಿಂದಾಗಿ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಸಿಂದಬಂದಗಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೀರು ನಿಂತುಕೊಂಡಿದ್ದು, ಮಕ್ಕಳು ಶಾಲೆಗೆ ಹೋಗಲು, ಬರಲು ಸಾಧ್ಯವಾಗುತ್ತಿಲ್ಲ. ಶಾಲೆಯ ಒಳಗಡೆ ಹೋಗಲಾಗದ್ದಕ್ಕೆ ಶಿಕ್ಷಕರು ಐದು ದಿನ ಶಾಲೆಗೆ ರಜೆ ಘೋಷಿಸಿದ್ದಾರೆ.

1 / 6
ಇನ್ನೂರಕ್ಕೂ ಹೆಚ್ಚು ಮಕ್ಕಳು ಓದುತ್ತಿರುವ ಶಾಲೆಯ್ಲಲಿಯೇ ಈ ಸ್ಥಿತಿ. ಸೋರುತ್ತಿರುವ ಕಟ್ಟಡದಲ್ಲಿಯೇ ಮಕ್ಕಳಿಗೆ ಪಾಠ, ಭಯದಲ್ಲಿಯೇ ಪಾಠ ಕೇಳಬೇಕಾದ ಸ್ಥಿತಿ ಇದೆ. ಶಾಲೆಯ ಆವರಣದಲ್ಲಿ ನಿಂತಿರುವ ನೀರಿನಲ್ಲೇ ನಡೆದುಕೊಂಡು ಮಕ್ಕಳು ಶಾಲೆಗೆ ಹೋಗವಂಥ ಸ್ಥಿತಿ ಇಲ್ಲಿದೆ. ಎಷ್ಟೋ ಸಲ ನಿರಿನಲ್ಲಿ ನಡೆದುಕೊಂಡು ಹೋಗುವಾಗಿ ನೀರಿನಲ್ಲಿ ಬಿದ್ದು ಬಟ್ಟೆ ಗಲೀಜು ಮಾಡಿಕೊಂಡು ಮಕ್ಕಳು ಶಾಲೆಗೆ ಹೋಗದೆ ಮನೆಗೆ ಹೋಗಬೇಕಾದ ಸಂದರ್ಭವೂ ಒದಗಿಬಂದಿತ್ತು. ಪಂಚಾಯತ್ ನವರಾಗಿರಬಹುದು, ಶಿಕ್ಷಣ ಇಲಾಖೆಯವರು ಕೂಡಾ ಶಾಲಾ ಆವರಣದಲ್ಲಿ ನಿಂತಿರುವ ನೀರನ್ನ ಹೊರಹೋಗುವಂತೆ ವ್ಯವಸ್ಥೆ ಕಲ್ಪಿಸಿಲ್ಲ. ಇದು ಸಹಜವಾಗಿಯೇ ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.

ಇನ್ನೂರಕ್ಕೂ ಹೆಚ್ಚು ಮಕ್ಕಳು ಓದುತ್ತಿರುವ ಶಾಲೆಯ್ಲಲಿಯೇ ಈ ಸ್ಥಿತಿ. ಸೋರುತ್ತಿರುವ ಕಟ್ಟಡದಲ್ಲಿಯೇ ಮಕ್ಕಳಿಗೆ ಪಾಠ, ಭಯದಲ್ಲಿಯೇ ಪಾಠ ಕೇಳಬೇಕಾದ ಸ್ಥಿತಿ ಇದೆ. ಶಾಲೆಯ ಆವರಣದಲ್ಲಿ ನಿಂತಿರುವ ನೀರಿನಲ್ಲೇ ನಡೆದುಕೊಂಡು ಮಕ್ಕಳು ಶಾಲೆಗೆ ಹೋಗವಂಥ ಸ್ಥಿತಿ ಇಲ್ಲಿದೆ. ಎಷ್ಟೋ ಸಲ ನಿರಿನಲ್ಲಿ ನಡೆದುಕೊಂಡು ಹೋಗುವಾಗಿ ನೀರಿನಲ್ಲಿ ಬಿದ್ದು ಬಟ್ಟೆ ಗಲೀಜು ಮಾಡಿಕೊಂಡು ಮಕ್ಕಳು ಶಾಲೆಗೆ ಹೋಗದೆ ಮನೆಗೆ ಹೋಗಬೇಕಾದ ಸಂದರ್ಭವೂ ಒದಗಿಬಂದಿತ್ತು. ಪಂಚಾಯತ್ ನವರಾಗಿರಬಹುದು, ಶಿಕ್ಷಣ ಇಲಾಖೆಯವರು ಕೂಡಾ ಶಾಲಾ ಆವರಣದಲ್ಲಿ ನಿಂತಿರುವ ನೀರನ್ನ ಹೊರಹೋಗುವಂತೆ ವ್ಯವಸ್ಥೆ ಕಲ್ಪಿಸಿಲ್ಲ. ಇದು ಸಹಜವಾಗಿಯೇ ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.

2 / 6

ಮಳೆಗಾಲ ಮುಗಿಯುವ ವರೆಗೂ ಕೂಡಾ ಇದೆ ರೀತಿಯಾಗಿ ನೀರು ನಿಂತುಕೊಂಡರೆ ಮಕ್ಕಳು ಶಾಲೆಗೆ ಹೋಗುವುದು ಹೇಗೆ ಎಂದು ಮಕ್ಕಳ ಪಾಲಕರು ಪ್ರಶ್ನಿಸುತ್ತಿದ್ದಾರೆ. ಈ ಶಾಲೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳಿದ್ದಾರೆ. ಒಂದರಿಂದ ಏಳನೇಯ ತರಗತಿಯವರೆಗೆ ಮಕ್ಕಳು ಓದಲು ಇಲ್ಲಿ ಅವಕಾಶವಿದೆ. ಆದರೆ ಮಕ್ಕಳು ಶಾಲೆಗೆ ಬರಲು ಹಿಂದೆಟು ಹಾಕುವಂಥ ಸ್ಥಿತಿ ಎದುರಾಗಿದೆ.

3 / 6

ವಾರದ ಹಿಂದೆ ಸುರಿದ ಮಳೆಯಿಂದಾಗಿ ಇಡೀ ಶಾಲೆಯ ಆವರಣದಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ಮಕ್ಕಳು ಶಾಲೆಗೆ ಹೋಗಲು ಸಾಧ್ಯವೇ ಇಲ್ಲಾ ಅನ್ನುವ ವಾತಾವರಣ ಇಲ್ಲಿ ನಿರ್ಮಾಣವಾಗಿತ್ತು. ಹೀಗಾಗಿ ಮಕ್ಕಳಿಗೆ ತೋಂದರೆಯಾಗಬಾರದೆಂದು ಐದು ದಿನಗಳ ಕಾಲ ಶಾಲೆಗೆ ರಜೆ ಕೊಡಲಾಗಿತ್ತು. ಮಳೆಗಾಲ ಆಗಿರುವುದರಿಂದ ಪದೆ ಪದೆ ಮಳೆಯಾಗುತ್ತದೆ. ಮಳೆಯಾದರೆ ಶಾಲೆಯ ಆವರಣದಲ್ಲಿ ನೀರು ಬಂದು ನಿಲ್ಲುತ್ತದೆ. ಪದೇಪದೆ ಶಾಲೆಗೆ ರಜೆ ಕೊಟ್ಟರೆ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಪಾಲಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

4 / 6

ಶಾಲೆಯ ಕೊಠಡಿಗಳು ಸಹ ಬಿರುಕು ಬಿಟ್ಟಿದ್ದು ಮಳೆಯಾದರೆ ಸೊರುತ್ತಿವೆ. ಹೀಗಾಗಿ ಮಕ್ಕಳು ಅಂತಹ ಕೊಠಡಿಯಲ್ಲಿ ಕುಳಿತು ಪಾಠ ಕೆಳಲು ಭಯಪಡುತ್ತಿದ್ದಾರೆ. ಜೊತೆಗೆ ಶಿಕ್ಷಕರ ಕೊರತೆ ಸಮಸ್ಯೆಯೂ ಇದೆ. ಶಿಕ್ಷಕರ ಕೊರತೆಯ ನಡುವೆಯೂ ಮಕ್ಕಳು ಶಾಲೆಗೆ ಬರುತ್ತಿದ್ದಾರೆ, ಪಾಠ ಕೇಳುತ್ತಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ ಈ ಶಾಲೆಯಲ್ಲಿರುವ ಹತ್ತಾರು ಸಮಸ್ಯೆಗಳು ಮಕ್ಕಳನ್ನ ಕಾಡತೊಡಗಿದೆ.

5 / 6

ಕಳೆದೊಂದು ವಾರದಿಂದಾ ಶಾಲಾ ಆವರಣದಲ್ಲಿ ನೀರು ನಿಂತುಕೊಂಡಿದ್ದು ಅದನ್ನು ಸರಿಮಾಡುವ ಗೋಜಿಗೆ ಯಾರೂ ಹೋಗಿಲ್ಲ. ಇದು ಪಾಲಕರಿಗೆ ಮತ್ತು ಶಿಕ್ಷಕರಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ನಮ್ಮ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಿ ಎಂದು ಪಾಲಕರು ಅಲವತ್ತುಕೊಳ್ಳುತ್ತಿದ್ದಾರೆ.

6 / 6

ನಿರಂತರ ಮಳೆಯಿಂದಾಗಿ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದಲ್ಲಿನ ಪಶು ಆಸ್ಪತ್ರೆಯ ಕಟ್ಟಡ ಸೋರುತ್ತಿದೆ. ಪಶು ಆಸ್ಪತ್ರೆಯ ಮುಂದೆ ನೀರು ನಿಂತು ಚಿಕಿತ್ಸೆ ಕೊಡಲು ಪರದಾಟಪಡುವಂತಾಗಿದೆ. ರೈತರು ತಂದ ಜಾನುವಾರುಗಳಿಗೆ ಚಿಕಿತ್ಸೆ ಕೊಡಲು ಪಶು ವೈದ್ಯರು ಪರದಾಡುತ್ತಿದ್ದಾರೆ.

ಸುರೇಶ್ ನಾಯಕ್

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Loading...
Unable to load recommendations.
Follow Us