Updated on: Nov 16, 2022 | 4:51 PM
ಬಿಗ್ ಬಾಸ್ ಮನೆ ನಿತ್ಯ ಒಂದಿಲ್ಲೊಂದು ಜಗಳಕ್ಕೆ ಸಾಕ್ಷಿ ಆಗುತ್ತಿದೆ. ನವೆಂಬರ್ 16ರ ಎಪಿಸೋಡ್ನಲ್ಲೂ ವಾಗ್ವಾದ ಏರ್ಪಟ್ಟಿದೆ. ಸದಾ ಸೈಲೆಂಟ್ ಆಗಿದ್ದ ಕಾವ್ಯಶ್ರೀ ಗೌಡ ಹಾಗೂ ಅರುಣ್ ಸಾಗರ್ ಮಧ್ಯೆ ಕಿತ್ತಾಟ ಏರ್ಪಟ್ಟಿದೆ.
ಈ ವಾರ ಕಾವ್ಯಶ್ರೀ ಗೌಡ ಕ್ಯಾಪ್ಟನ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಟಾಸ್ಕ್ ಆಡುವುದಿಲ್ಲ ಎನ್ನುವ ಆರೋಪ ಇದೆ. ಅವರು ಕ್ಯಾಪ್ಟನ್ ಆಗುವ ಮೂಲಕ ಟೀಕೆ ಮಾಡುವವರು ಬಾಯಿ ಮುಚ್ಚಿಸಿದರು.
ಈಗ ಬಿಗ್ ಬಾಸ್ ಮನೆಯಲ್ಲಿ ವಾಗ್ವಾದ ಏರ್ಪಟ್ಟಿದೆ. ಕಾವ್ಯಶ್ರೀ ಕೆಲ ನಿಯಮ ತಂದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಮನೆಯವರು ಇರಲಿಲ್ಲ.
‘ಎಲ್ಲರೂ ಲಿವಿಂಗ್ ಏರಿಯಾದಲ್ಲಿರಿ’ ಎಂದು ಘೋಷಿಸಿದರು ಕಾವ್ಯಶ್ರೀ. ಇದಕ್ಕೆ ಅರುಣ್ ಸಾಗರ್ ಅವರು ‘ಎಲ್ಲಿರಬೇಕು ಎಂದು ಹೇಳುವ ಹಕ್ಕು ಕ್ಯಾಪ್ಟನ್ಗೆ ಇಲ್ಲ’ ಎಂದು ನೇರವಾಗಿ ಹೇಳಿದರು. ಇದರಿಂದ ಕಾವ್ಯಶ್ರೀಗೆ ಕೋಪ ಬಂತು.
‘ಕ್ಯಾಪ್ಟನ್ ಆಗಿ ನಾನು ಏನನ್ನೂ ಹೇಳಬಾರದು ಎಂದಾದರೆ ನಾನು ಕ್ಯಾಪ್ಟನ್ ಆಗಿದ್ದೇಕೆ’ ಎಂದು ಅರುಣ್ ಸಾಗರ್ ಬಳಿ ಪ್ರಶ್ನೆ ಮಾಡಿದರು. ಸದ್ಯ ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.