- Kannada News Photo gallery Bigg Boss Chaitra Kundapa's Glamorous Finale: A Surprise for Kichcha Sudeep
ಹೇಗಿದ್ದ ಚೈತ್ರಾ ಕುಂದಾಪುರ ಹೇಗಾದ್ರು ನೋಡಿ; ಹೊಸ ಲುಕ್‌ಗೆ ಕಾರಣ ಏನು?
ಬಿಗ್ ಬಾಸ್ ಕನ್ನಡದ ಚೈತ್ರಾ ಕುಂದಾಪುರ ಅವರು ಫೈನಲ್‌ನಲ್ಲಿ ಸಂಪೂರ್ಣವಾಗಿ ಭಿನ್ನರಾಗಿ ಕಾಣಿಸಿಕೊಂಡರು. ಸರಳ ಲುಕ್‌ಗೆ ಹೆಸರಾಗಿದ್ದ ಚೈತ್ರಾ, ಈ ಬಾರಿ ಹೆಚ್ಚು ಮೇಕಪ್ ಮತ್ತು ಸುಂದರವಾದ ಸೀರೆಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಕಿಚ್ಚ ಸುದೀಪ್ ಅವರೂ ಅವರ ಹೊಸ ಲುಕ್‌ಗೆ ಅಚ್ಚರಿ ವ್ಯಕ್ತಪಡಿಸಿದರು.
Updated on: Jan 28, 2025 | 7:34 AM

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಸಿಂಪಲ್ ಆಗಿ ಇದ್ದವರು. ಅವರು ಸೀರೆ ಉಟ್ಟುಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದರು. ಆದರೆ, ಬಿಗ್ ಬಾಸ್ ಫಿನಾಲೆಯಲ್ಲಿ ಮಾತ್ರ ಅವರ ಅವತಾರ ಬೇರೆಯದೇ ರೀತಿಯಲ್ಲಿ ಇತ್ತು.

ಹೌದು, ಚೈತ್ರಾ ಕುಂದಾಪುರ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ. ಈ ಬಾರಿ ಫಿನಾಲೆಯಲ್ಲಿ ಅವರು ಸಾಕಷ್ಟು ಗಮನ ಸೆಳೆಯುವ ಪ್ರಯತ್ನ ಮಾಡಿದರು. ಚೆಂದದ ಸೀರೆ ಜೊತೆಯಲ್ಲಿ ಸಾಕಷ್ಟು ಮೇಕಪ್ ಮಾಡಿಕೊಂಡು ಬಂದಿದ್ದರು.

ಚೈತ್ರಾ ಕುಂದಾಪುರ ಅವರು ಮೇಕಪ್ನ ಮುಖಕ್ಕೆ ತಾಗಿಸಿದವರೇ ಅಲ್ಲ. ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟೂ ದಿನ ಹಾಗೆಯೇ ಇದ್ದರು. ಈಗ ಚೈತ್ರಾ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.

ಚೈತ್ರಾ ಅವರ ಲುಕ್ ನೋಡಿ ಕಿಚ್ಚ ಸುದೀಪ್ ಅವರೇ ಅಚ್ಚರಿಗೊಂಡರು. ಇಷ್ಟೊಂದು ಸುಂದರವಾಗಿ ಕಾಣಿಸುತ್ತಿದ್ದೀರಿ. ನೀವು ಅದೇ ಚೈತ್ರಾನಾ ಎಂದು ಪ್ರಶ್ನೆ ಕೂಡ ಮಾಡಿದರು. ಇದಕ್ಕೆ ಚೈತ್ರಾ ಅವರು ನಕ್ಕರು. ಬಳಿಕ ಆ ಬಗ್ಗೆ ಪ್ರತಿಕ್ರಿಯಿಸಿದರು.

ಚೈತ್ರಾ ಕುಂದಾಪುರ ಅವರ ಲುಕ್ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಅವರಿಗೂ ಇಷ್ಟೊಂದು ಮೇಕಪ್ ಮಾಡಿಕೊಳ್ಳೋಕೆ ಬರುತ್ತದೆಯೆಲ್ಲ ಎಂಬುದನ್ನು ಅರಿತು ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಇದಕ್ಕೆ ಚೈತ್ರಾ ಕಡೆಯಿಂದ ಸ್ಪಷ್ಟನೆ ಕೂಡ ಸಿಕ್ಕಿದೆ.

‘ಸ್ಟೈಲಿಸ್ಟ್ಗಳು ಇದನ್ನು ಮಾಡಿದ್ದು. ಕತ್ತಿಗೆ ಹಾಕಿದ ವಸ್ತುಗಳ ಹೆಸರು ಕೂಡ ನನಗೆ ಗೊತ್ತಿಲ್ಲ’ ಎಂದು ಚೈತ್ರಾ ಹೇಳಿದರು. ಆದರೆ, ಇದನ್ನು ವೇದಿಕೆ ಮೇಲಿದ್ದ ಯಾರೊಬ್ಬರೂ ನಂಬಲೇ ಇಲ್ಲ. ರಜತ್ ಕೂಡ ಚೈತ್ರಾ ಅವರ ಕಾಲೆಳೆದರು.
























