ಆಮಿರ್ ಖಾನ್-ಸಿದ್ದರಾಮಯ್ಯ ಮುಖಾಮುಖಿ, ಶುಭ ಕೋರಿದ ಸಿಎಂ
Aamir Khan movies: ಆಮಿರ್ ಖಾನ್ ಹಾಗೂ ಸಿದ್ದರಾಮಯ್ಯ ಪರಸ್ಪರ ಮುಖಾಮುಖಿ ಆಗಿ ಪರಸ್ಪರ ಹಸ್ತಲಾಘವದ ಬಳಿಕ ಕೆಲ ಸಮಯ ಮಾತುಕತೆ ಆಡಿದ್ದಾರೆ. ಆಮಿರ್ ಖಾನ್ ನಿರ್ಮಿಸಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಆಮಿರ್ ಖಾನ್, ಸಿದ್ದರಾಮಯ್ಯ ಅವರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.
Updated on: Jun 24, 2025 | 12:35 PM
Share

ಸಿಎಂ ಸಿದ್ದರಾಮಯ್ಯ ಹಾಗೂ ಬಾಲಿವುಡ್ ನಟ ಆಮಿರ್ ಖಾನ್ ಅವರು ದೆಹಲಿಯಲ್ಲಿ ಆಕಸ್ಮಿಕವಾಗಿ ಭೇಟಿ ಆಗಿದ್ದು, ಪರಸ್ಪರ ಕುಶಲೋಪರಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ಅದೇ ವೇಳೆ ಆಮೀರ್ ಖಾನ್ ಅವರು ಸಹ ಅಲ್ಲಿಯೇ ಹಾಜರಿದ್ದರು.

ಆಮಿರ್ ಖಾನ್ ಹಾಗೂ ಸಿದ್ದರಾಮಯ್ಯ ಪರಸ್ಪರ ಮುಖಾಮುಖಿ ಆಗಿ ಪರಸ್ಪರ ಹಸ್ತಲಾಘವದ ಬಳಿಕ ಕೆಲ ಸಮಯ ಮಾತುಕತೆ ಆಡಿದ್ದಾರೆ.

ಆಮಿರ್ ಖಾನ್ ನಿರ್ಮಿಸಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಆಮಿರ್ ಖಾನ್, ಸಿದ್ದರಾಮಯ್ಯ ಅವರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.

ಆಮಿರ್ ಖಾನ್ ಅವರ ಸಿನಿಮಾಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶುಭ ಕೋರಿದ್ದಾರೆ. ‘ಸಿತಾರೆ ಜಮೀನ್ ಪರ್’ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ವಿಶೇಷ ಚೇತನ ವ್ಯಕ್ತಿಗಳ ಬಗೆಗೆ ಜಾಗೃತಿ ಮೂಡಿಸುವ ಸಿನಿಮಾ ಇದಾಗಿದೆ.
Related Photo Gallery
ನಿಮ್ಮಿಂದ ನಮಗೆ ಎಲ್ಲಾ ಕಡೆ ನೋವಾಗ್ತಿದೆ ಎಂದ ಸುದೀಪ್
ಶ್ವಾನಕ್ಕೆ ಮಡಿಲು ತುಂಬಿ ಅದ್ಧೂರಿ ಸೀಮಂತ!
ಯೆಲ್ಲೋ ಮಾರ್ಗದಲ್ಲಿ ಭಾನುವಾರ ರೈಲು ಸಂಚಾರ ಶುರುವಾಗೋದು ಲೇಟ್
ಚೈತ್ರಾ ಪತಿಯಿಂದಲೂ ಕಿರುಕುಳ ಉಂಟಾಗಿದೆ; ತಂದೆಯ ಆರೋಪ
Video: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಓಡಿದ ಆರೋಪಿ
ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು




