ಆಮಿರ್ ಖಾನ್-ಸಿದ್ದರಾಮಯ್ಯ ಮುಖಾಮುಖಿ, ಶುಭ ಕೋರಿದ ಸಿಎಂ
Aamir Khan movies: ಆಮಿರ್ ಖಾನ್ ಹಾಗೂ ಸಿದ್ದರಾಮಯ್ಯ ಪರಸ್ಪರ ಮುಖಾಮುಖಿ ಆಗಿ ಪರಸ್ಪರ ಹಸ್ತಲಾಘವದ ಬಳಿಕ ಕೆಲ ಸಮಯ ಮಾತುಕತೆ ಆಡಿದ್ದಾರೆ. ಆಮಿರ್ ಖಾನ್ ನಿರ್ಮಿಸಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಆಮಿರ್ ಖಾನ್, ಸಿದ್ದರಾಮಯ್ಯ ಅವರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.
Updated on: Jun 24, 2025 | 12:35 PM
Share

ಸಿಎಂ ಸಿದ್ದರಾಮಯ್ಯ ಹಾಗೂ ಬಾಲಿವುಡ್ ನಟ ಆಮಿರ್ ಖಾನ್ ಅವರು ದೆಹಲಿಯಲ್ಲಿ ಆಕಸ್ಮಿಕವಾಗಿ ಭೇಟಿ ಆಗಿದ್ದು, ಪರಸ್ಪರ ಕುಶಲೋಪರಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ಅದೇ ವೇಳೆ ಆಮೀರ್ ಖಾನ್ ಅವರು ಸಹ ಅಲ್ಲಿಯೇ ಹಾಜರಿದ್ದರು.

ಆಮಿರ್ ಖಾನ್ ಹಾಗೂ ಸಿದ್ದರಾಮಯ್ಯ ಪರಸ್ಪರ ಮುಖಾಮುಖಿ ಆಗಿ ಪರಸ್ಪರ ಹಸ್ತಲಾಘವದ ಬಳಿಕ ಕೆಲ ಸಮಯ ಮಾತುಕತೆ ಆಡಿದ್ದಾರೆ.

ಆಮಿರ್ ಖಾನ್ ನಿರ್ಮಿಸಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಆಮಿರ್ ಖಾನ್, ಸಿದ್ದರಾಮಯ್ಯ ಅವರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.

ಆಮಿರ್ ಖಾನ್ ಅವರ ಸಿನಿಮಾಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶುಭ ಕೋರಿದ್ದಾರೆ. ‘ಸಿತಾರೆ ಜಮೀನ್ ಪರ್’ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ವಿಶೇಷ ಚೇತನ ವ್ಯಕ್ತಿಗಳ ಬಗೆಗೆ ಜಾಗೃತಿ ಮೂಡಿಸುವ ಸಿನಿಮಾ ಇದಾಗಿದೆ.
Related Photo Gallery
ಚಡ್ಡಿ ಕಳ್ಳಿಯರು; ಅಂಗಡಿಯಲ್ಲಿ ಒಳ ಉಡುಪು ಕದ್ದ ಮಹಿಳೆಯರು
ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಟೈಟಲ್ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ವಿರೋಶ್ ಮದುವೆ: ರಾಯಲ್ ಉಡುಗೆಯ ಹಿಂದಿನ ಅಚ್ಚರಿಯ ವಿಷಯ ಕೇಳಿ..
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!




