AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಪ್ತಮಿ ಗೌಡ-ಚೈತ್ರಾ ಆಚಾರ್​ಗೆ ಪರಭಾಷೆಯಲ್ಲಿ ಈ ವಾರ ಅಗ್ನಿಪರೀಕ್ಷೆ; ಗೆಲುವು ಯಾರಿಗೆ?

ಚೈತ್ರಾ ಆಚಾರ್ ಹಾಗೂ ಸಪ್ತಮಿ ಗೌಡ ಇಬ್ಬರೂ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡವರು. ಇವರಿಗೆ ಸಾಕಷ್ಟು ಹೆಸರು ಬಂದಿದೆ. ವಿಶೇಷ ಎಂದರೆ ಇವರು ಪರಭಾಷೆಯಲ್ಲಿ ನಟಿಸಿರೋ ಸಿನಿಮಾ ಈ ವಾರ (ಜುಲೈ 4) ರಿಲೀಸ್ ಆಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

ರಾಜೇಶ್ ದುಗ್ಗುಮನೆ
|

Updated on: Jul 01, 2025 | 2:50 PM

Share
ಸಪ್ತಮಿ ಗೌಡ ಅವರು ‘ಕಾಂತಾರ’ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲುವು ಕಂಡರು. ಅವರಿಗೆ ಈ ವಾರ ತೆಲುಗಿನಲ್ಲಿ ದೊಡ್ಡ ಅಗ್ನಿಪರೀಕ್ಷೆ ಇದೆ. ಅವರ ನಟನೆಯ ತೆಲುಗಿನ ‘ತಮ್ಮುಡು’ ಸಿನಿಮಾ ಈ ವಾರ (ಜುಲೈ 4) ತೆರೆಗೆ ಬರುತ್ತಿದೆ.

1 / 6
ಈ ಚಿತ್ರಕ್ಕೆ ತೆಲುಗು ನಟ ನಿತಿನ್ ಅವರು ಹೀರೋ. ಅವರು ತೆಲುಗಿನಲ್ಲಿ ಅನೇಕ ಹಿಟ್​​ಗಳನ್ನು ನೀಡಿದ್ದಾರೆ. ಅವರ ಜೊತೆ ಸಪ್ತಮಿ ಗೌಡ ಅವರು ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಸಪ್ತಮಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

2 / 6
ಸಪ್ತಮಿ ಗೌಡ ಅವರ ಪಾತ್ರದ ಹೆಸರು ರತ್ನ ಎಂದು. ಈ ಚಿತ್ರದಲ್ಲಿ ಅವರು ಡಿಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ’ ಚಿತ್ರದಲ್ಲೂ ಅವರಿಗೆ ಇದೇ ರೀತಿಯ ಪಾತ್ರ ಸಿಕ್ಕಿತ್ತು ಅನ್ನೋದು ವಿಶೇಷ. ಈ ಸಿನಿಮಾ ಹಿಟ್ ಆದರೆ, ತೆಲುಗಿನಲ್ಲಿ ಆಫರ್​ಗಳು ಬರಲಿವೆ.

3 / 6
ಚೈತ್ರಾ ಆಚಾರ್ ಕೂಡ ಕನ್ನಡದಲ್ಲಿ ಹೆಸರು ಮಾಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ 2’ ಅವರಿಗೆ ದೊಡ್ಡ ಮಟ್ಟದಲ್ಲಿ ಗೆಲುವು ತಂದು ಕೊಟ್ಟಿತು. ಈ ಚಿತ್ರ ಪರಭಾಷೆಯಲ್ಲೂ ರಿಲೀಸ್ ಆಗಿರುವುದರಿಂದ ಅವರನ್ನು ಅಲ್ಲಿಯೂ ಗುರುತಿಸುತ್ತಾರೆ.

4 / 6
ಈ ವಾರ ತಮಿಳಿನ ‘3 ಬಿಎಚ್​​ಕೆ’ ಸಿನಿಮಾ ರಿಲೀಸ್ ಆಗುತ್ತಿದೆ. ಮಧ್ಯಮ ವರ್ಗದ ಮನೆ ಕಟ್ಟುವ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರದ ಮೂಲಕ ಚೈತ್ರಾ ಪರಭಾಷೆಯಲ್ಲಿ ಗುರುತಿಸಿಕೊಳ್ಳುವ ಹಂಬಲದಲ್ಲಿ ಇದ್ದಾರೆ.

5 / 6
ಈ ಸಿನಿಮಾದಲ್ಲಿ ತಮಿಳು ನಟ ಸಿದ್ದಾರ್ಥ್​, ಶರತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಯಶಸ್ಸು ಕಂಡರೆ ಚೈತ್ರಾ ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಲಿದೆ. ಈ ಚಿತ್ರ ಗೆಲುವು ಕಾಣಲಿ ಎಂಬುದು ಫ್ಯಾನ್ಸ್ ಕೋರಿಕೆ ಕೂಡ ಹೌದು.

6 / 6