ಸಪ್ತಮಿ ಗೌಡ-ಚೈತ್ರಾ ಆಚಾರ್ಗೆ ಪರಭಾಷೆಯಲ್ಲಿ ಈ ವಾರ ಅಗ್ನಿಪರೀಕ್ಷೆ; ಗೆಲುವು ಯಾರಿಗೆ?
ಚೈತ್ರಾ ಆಚಾರ್ ಹಾಗೂ ಸಪ್ತಮಿ ಗೌಡ ಇಬ್ಬರೂ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡವರು. ಇವರಿಗೆ ಸಾಕಷ್ಟು ಹೆಸರು ಬಂದಿದೆ. ವಿಶೇಷ ಎಂದರೆ ಇವರು ಪರಭಾಷೆಯಲ್ಲಿ ನಟಿಸಿರೋ ಸಿನಿಮಾ ಈ ವಾರ (ಜುಲೈ 4) ರಿಲೀಸ್ ಆಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.
Updated on: Jul 01, 2025 | 2:50 PM

ಸಪ್ತಮಿ ಗೌಡ ಅವರು ‘ಕಾಂತಾರ’ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲುವು ಕಂಡರು. ಅವರಿಗೆ ಈ ವಾರ ತೆಲುಗಿನಲ್ಲಿ ದೊಡ್ಡ ಅಗ್ನಿಪರೀಕ್ಷೆ ಇದೆ. ಅವರ ನಟನೆಯ ತೆಲುಗಿನ ‘ತಮ್ಮುಡು’ ಸಿನಿಮಾ ಈ ವಾರ (ಜುಲೈ 4) ತೆರೆಗೆ ಬರುತ್ತಿದೆ.

ಈ ಚಿತ್ರಕ್ಕೆ ತೆಲುಗು ನಟ ನಿತಿನ್ ಅವರು ಹೀರೋ. ಅವರು ತೆಲುಗಿನಲ್ಲಿ ಅನೇಕ ಹಿಟ್ಗಳನ್ನು ನೀಡಿದ್ದಾರೆ. ಅವರ ಜೊತೆ ಸಪ್ತಮಿ ಗೌಡ ಅವರು ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಸಪ್ತಮಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಸಪ್ತಮಿ ಗೌಡ ಅವರ ಪಾತ್ರದ ಹೆಸರು ರತ್ನ ಎಂದು. ಈ ಚಿತ್ರದಲ್ಲಿ ಅವರು ಡಿಗ್ಲಾಮ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ’ ಚಿತ್ರದಲ್ಲೂ ಅವರಿಗೆ ಇದೇ ರೀತಿಯ ಪಾತ್ರ ಸಿಕ್ಕಿತ್ತು ಅನ್ನೋದು ವಿಶೇಷ. ಈ ಸಿನಿಮಾ ಹಿಟ್ ಆದರೆ, ತೆಲುಗಿನಲ್ಲಿ ಆಫರ್ಗಳು ಬರಲಿವೆ.

ಚೈತ್ರಾ ಆಚಾರ್ ಕೂಡ ಕನ್ನಡದಲ್ಲಿ ಹೆಸರು ಮಾಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ 2’ ಅವರಿಗೆ ದೊಡ್ಡ ಮಟ್ಟದಲ್ಲಿ ಗೆಲುವು ತಂದು ಕೊಟ್ಟಿತು. ಈ ಚಿತ್ರ ಪರಭಾಷೆಯಲ್ಲೂ ರಿಲೀಸ್ ಆಗಿರುವುದರಿಂದ ಅವರನ್ನು ಅಲ್ಲಿಯೂ ಗುರುತಿಸುತ್ತಾರೆ.

ಈ ವಾರ ತಮಿಳಿನ ‘3 ಬಿಎಚ್ಕೆ’ ಸಿನಿಮಾ ರಿಲೀಸ್ ಆಗುತ್ತಿದೆ. ಮಧ್ಯಮ ವರ್ಗದ ಮನೆ ಕಟ್ಟುವ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರದ ಮೂಲಕ ಚೈತ್ರಾ ಪರಭಾಷೆಯಲ್ಲಿ ಗುರುತಿಸಿಕೊಳ್ಳುವ ಹಂಬಲದಲ್ಲಿ ಇದ್ದಾರೆ.

ಈ ಸಿನಿಮಾದಲ್ಲಿ ತಮಿಳು ನಟ ಸಿದ್ದಾರ್ಥ್, ಶರತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಯಶಸ್ಸು ಕಂಡರೆ ಚೈತ್ರಾ ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಲಿದೆ. ಈ ಚಿತ್ರ ಗೆಲುವು ಕಾಣಲಿ ಎಂಬುದು ಫ್ಯಾನ್ಸ್ ಕೋರಿಕೆ ಕೂಡ ಹೌದು.

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



