AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chamarajanagar: ತುಂತುರು ಮಳೆಯ ನಡುವೆ ಬಿಳಿಗಿರಿ ರಂಗನಬೆಟ್ಟಕ್ಕೆ ಮುತ್ತಿಕ್ಕುತ್ತಿರುವ ಮೋಡಗಳು

ಚಾಮರಾಜನಗರದಲ್ಲಿ ತುಂತುರು ಮಳೆ ಆರಂಭವಾಗಿದೆ. ಈ ನಡುವೆ ಬಿಳಿಗಿರಿ ರಂಗನಬೆಟ್ಟದಲ್ಲಿ‌ ಮೋಡಗಳು ಬೆಟ್ಟಕ್ಕೆ ಮುತ್ತಿಕ್ಕುವುದನ್ನ ನೋಡಲು ಎರಡು ಕಣ್ಣು ಸಾಲದು ಎಂಬಂತಿದೆ.

TV9 Web
| Edited By: |

Updated on: Nov 14, 2022 | 10:11 AM

Share
ಕಳೆದೆರಡ್ಮೂರು ದಿನದಿಂದ ಚಾಮರಾಜನಗರದಲ್ಲಿ ತುಂತುರು ಮಳೆ ಆರಂಭವಾಗಿದೆ. ಅದರಲ್ಲು ಬಿಳಿಗಿರಿ ರಂಗನಬೆಟ್ಟದಲ್ಲಿ‌ ಮೋಡಗಳು ಬೆಟ್ಟಕ್ಕೆ ಮುತ್ತಿಕ್ಕುವುದನ್ನ ನೋಡಲು ಎರಡು ಕಣ್ಣು ಸಾಲದು ಎಂಬಂತಿದೆ. ಮಳೆಗೆ ಸೃಷ್ಟಿಯಾದ ಭೂ ಸ್ವರ್ಗ ಹೇಗಿದೆ‌ ಅಂತ ನೀವೆ ನೋಡಿ.

Chamarajanagar rains Clouds at Biligiri Ranganabetta heaven of earth chamarajanagara news in kannada

1 / 8
ಎತ್ತಾ ಕಣ್ಣಾಯಿಸಿದರೂ ಅಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟದ ಸಾಲುಗಳು. ಬೆಟ್ಟಕ್ಕೆ ಮುತ್ತಿಕ್ಕುತ್ತಿರುವ ಬೆಳ್ಳಿ ಮೋಡಗಳು. ಮಳೆಗೆ ಸೃಷ್ಟಿಯಾಗಿರುವ ಝರಿಗಳು. ಈ ಸೌಂದರ್ಯಕ್ಕೆ ಮನಸೋಲದವರೆ ಇಲ್ಲ. ಅಷ್ಟಕ್ಕೂ ಈ ಅದ್ಭುತ ಮನಮೋಹಕ ದೃಶ್ಯ ಸೃಷ್ಟಿಯಾಗಿರುವುದು ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟದಲ್ಲಿ.

Chamarajanagar rains Clouds at Biligiri Ranganabetta heaven of earth chamarajanagara news in kannada

2 / 8
Chamarajanagar rains Clouds at Biligiri Ranganabetta heaven of earth chamarajanagara news in kannada

ತುಂತುರು ಮಳೆ‌ಜೊತೆಗೆ ಮಂಜು‌ ಮುಸುಕಿಕೊಂಡು ಹೊಸ ಲೋಕವೇ ಸೃಷ್ಟಿಯಾಗಿದೆ. ವರ್ಷದ ಬಹುತೇಕ ದಿನಗಳು ಹಸಿರು ರತ್ನಗಳನ್ನ ಹೊದ್ದು ಮಲಗಿರುವ ಬಿಳಿಗಿರಿರಂಗನ ಬೆಟ್ಟ ಪೂರ್ವ ಪಶ್ಚಿಮ ಘಟ್ಟಗಳನ್ನು ಸಂಧಿಸುವ ಸ್ಥಳವಾಗಿದೆ.

3 / 8
Chamarajanagar rains Clouds at Biligiri Ranganabetta heaven of earth chamarajanagara news in kannada

ಈ ಬೆಟ್ಟದ ಸಾಲುಗಳಲ್ಲಿ ಮಂಜು ತುಂಬಿಕೊಂಡಾಗ ಮಂಜಿನಲ್ಲಿ ಹಸಿರು ಬೆಟ್ಟಗಳ‌ ಸಾಲುಗಳನ್ನ ನೋಡಲು ಇನ್ನೂ ಅದ್ಭುತ. ಬೆಳ್ಳಿಮೋಡಗಳು ಬೆಟ್ಟದಲ್ಲಿ ಚಲಿಸುತ್ತಿದ್ದರೆ, ಮತ್ತೆ ಕೆಲವೆಡೆ ಹಾಲಿನ ನೊರೆಯಂತೆ ಬೆಟ್ಟವನ್ನೆ ಮೋಡಗಳು ಆವರಿಸಿಕೊಂಡಿದೆ.

4 / 8
Chamarajanagar rains Clouds at Biligiri Rangana betta heaven of earth chamarajanagara news in kannada

ಇನ್ನು ಇಡೀ ಕಾಡು ಮಳೆಯಿಂದಾಗಿ ಹಚ್ಚಹಸಿರಿನಿಂದ‌ನಿಂದ ಕಂಗೊಳಿಸುತ್ತಿದ್ದರೆ ಕಾಡಿನಲ್ಲಿ ಬೀಳುತ್ತಿರುವ ಮಳೆಗೆ ಕಾಡಿನ ರಸ್ತೆಯಲ್ಲಿ ಝರಿಗಳು ಕಾಣಸಿಗುತ್ತದೆ. ಜೊತೆಗೆ ಹುಲಿರಕ್ಷಿತಾರಣ್ಯದಲ್ಲಿರುವುದರಿಂದ ಜಿಂಕೆ, ಕಾಡೆಮ್ಮ, ಆನೆಯಂತ ಪ್ರಾಣಿಗಳು ರಸ್ತೆಯಲ್ಲಿ ಕಂಡು ಪುಳಕಿತರಾಗುತ್ತಿದ್ದಾರೆ.

5 / 8
Chamarajanagar rains Clouds at Biligiri Ranganabetta heaven of earth chamarajanagara news in kannada

ಇದು ಹುಲಿ ರಕ್ಷಿತರಣ್ಯವಾಗಿರುವುದರಿಂದ ವಾಹನಗಳನ್ನ ರಸ್ತೆಯಲ್ಲಿ ನಿಲ್ಲಿಸುವಂತಿಲ್ಲ. ರಸ್ತೆಯಲ್ಲಿ ಸಂಚಾರ ಮಾಡುವಾಗ ಕಣ್ತುಂಬಿಕೊಳ್ಳಬೇಕಿದೆ. ಸದ್ಯ ಮಳೆಯ ನಡುವೆಯುವ ಪ್ರವಾಸಿಗರು ಬೆಟ್ಟಕ್ಕೆ ಆಗಮಿಸಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. (ವರದಿ: ದಿಲೀಪ್ ಚೌಡಹಳ್ಳಿ, ಟಿವಿ9 ಚಾಮರಾಜನಗರ)

6 / 8
Chamarajanagar rains Clouds at Biligiri Ranganabetta heaven of earth chamarajanagara news in kannada

ಬಿಳಿಗಿರಿ ರಂಗನ ದೇವಸ್ಥಾನಕ್ಕೆ ಹತ್ತುವ ಮೆಟ್ಟಿಲುಗಳು

7 / 8
Chamarajanagar rains Clouds at Biligiri Rangana Betta heaven of earth chamarajanagara news in kannada

ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ

8 / 8
ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ
ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ
‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ