- Kannada News Photo gallery Chandra Keerthi and Pavana Gowda starrer Tootu Madike movie Yaamaride Hrudaya song released
‘ತೂತು ಮಡಿಕೆ’ ಹಾಡಿಗೆ ವಿಜಯ್ ಪ್ರಕಾಶ್-ಚೇತನ್ ಕುಮಾರ್ ಕಾಂಬಿನೇಷನ್; ‘ಯಾಮಾರಿದೆ ಹೃದಯ..’ ಅಂದ್ರು ಪಾವನಾ-ಚಂದ್ರ ಕೀರ್ತಿ
ವಿಜಯ್ ಪ್ರಕಾಶ್ ಅವರ ಕಂಠದಲ್ಲಿ ‘ತೂತು ಮಡಿಕೆ’ ಚಿತ್ರದ ‘ಯಾಮಾರಿದೆ ಹೃದಯ..’ ಹಾಡು ಮೂಡಿಬಂದಿದೆ. ಇದಕ್ಕೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.
Updated on: May 09, 2022 | 3:10 PM

Chandra Keerthi and Pavana Gowda starrer Tootu Madike movie Yaamaride Hrudaya song released

Chandra Keerthi and Pavana Gowda starrer Tootu Madike movie Yaamaride Hrudaya song released

‘ಯಾಮಾರಿದೆ ಹೃದಯ..’ ಹಾಡಿಗೆ ಚೇತನ್ ಕುಮಾರ್ ಅವರು ಸಾಹಿತ್ಯ ಬರೆದಿದ್ದಾರೆ. ಸ್ವಾಮಿನಾಥನ್ ಆರ್.ಕೆ. ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ತಮ್ಮ ಆಕರ್ಷಕ ಕಂಠದ ಮೂಲಕ ಗಾಯಕ ವಿಜಯ್ ಪ್ರಕಾಶ್ ಅವರು ಈ ಹಾಡಿಗೆ ಜೀವ ತುಂಬಿದ್ದಾರೆ.

ಚಂದ್ರ ಕೀರ್ತಿ ಮತ್ತು ಪಾವನಾ ಗೌಡ ಅವರ ಕೆಮಿಸ್ಟ್ರೀ ಈ ಹಾಡಿನಲ್ಲಿ ಹೈಲೈಟ್ ಆಗಿದೆ. ನಟ ಗಿರಿ ಕೂಡ ಈ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿನಿಂದ ‘ತೂತು ಮಡಿಕೆ’ ಚಿತ್ರದ ಮೇಲೆ ನಿರೀಕ್ಷೆ ಮೂಡುವಂತಾಗಿದೆ.

ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಮುಂತಾದ ಕಲಾವಿದರು ‘ತೂತು ಮಡಿಕೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಮಿಡಿ, ಥ್ರಿಲ್ಲರ್, ಸಸ್ಪೆನ್ಸ್ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಸರ್ವತಾ ಸಿನಿ ಗ್ಯಾರೇಜ್ ಬ್ಯಾನರ್ ಮೂಲಕ ಮಧುಸೂಧನ್ ರಾವ್ ಹಾಗೂ ಶಿವಕುಮಾರ್ ಬಂಡವಾಳ ಹೂಡಿದ್ದಾರೆ. ಚಲ್ಲ ನವೀನ್ ಕುಮಾರ್ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ಮಾಡಿದ್ದಾರೆ.




