
ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಇಂದು ವಿಧಿವಶರಾಗಿದ್ದಾರೆ. ಸಂಜೆ ಇಂಥದ್ದೊಂದು ಸುದ್ದಿ ಬರಸಿಡಿಲಿನಂತೆ ಬಂದೆರಗುತ್ತಿದ್ದಂತೆ ಇಡೀ ದೇವೇಗೌಡರ ಕುಟುಂಬ ಕಣ್ಣೀರಾಗಿದೆ. (ಚಿತ್ರ ಕೃಪೆ: Dinesh Hirisave Basavaiah)

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯಲ್ಲಿ 1941 ರಲ್ಲಿ ಜನಿಸಿದ್ದ ಚೆನ್ನಮ್ಮ, 1954 ರಲ್ಲಿ ದೇವೇಗೌಡರ ಜತೆ ವಿವಾಹವಾಗಿದ್ದರು. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್‌ಡಿ ರೇವಣ್ಣ ಸೇರಿದಂತೆ ಚೆನ್ನಮ್ಮ ಅವರಿಗೆ ನಾಲ್ವರು ಗಂಡು ಮಕ್ಕಳು, ಇಬ್ಬರು ಪುತ್ರಿಯವರು. (ಚಿತ್ರ ಕೃಪೆ: Dinesh Hirisave Basavaiah)

ದೇವೇಗೌಡರು ಮತ್ತು ಮಕ್ಕಳು ರಾಜಕೀಯವಾಗಿ ಬಹಳ ಎತ್ತರಕ್ಕೆ ಬೆಳೆದವರು. ಹೀಗಿದ್ದರು ಚೆನ್ನಮ್ಮ ಎಂದು ರಾಜಕೀಯದಲ್ಲಿ ಮೂಗು ತೂರಿಸಿದವರಲ್ಲ. ಚೆನ್ನಮ್ಮ ಮನೆಗೆ ಮಾತ್ರ ಸೀಮಿತವಾಗಿ ಎಲ್ಲಿಯೂ ರಾಜಕೀಯ ಮಾತನಾಡದೆ, ಬಹಿರಂಗವಾಗಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. (ಚಿತ್ರ ಕೃಪೆ: Dinesh Hirisave Basavaiah)

ದೇವೇಗೌಡರ ಕುಟುಂಬ ಅತ್ಯಂತ ದೈವಭಕ್ತ. ಅಂತಹ ಕುಟುಂಬಕ್ಕೆ ಪರಮ ದೈವಭಕ್ತೆ ಚೆನ್ನಮ್ಮ ಕೂಡ ದೈವಿ ಶಕ್ತಿಯನ್ನೇ ತುಂಬಿದ್ದರು. ತಮ್ಮ 85 ವರ್ಷ ವಯಸ್ಸಲ್ಲೂ ದೇವಸ್ಥಾನ, ಅದು ಇದು ಅಂತಾ ಲವಲವಿಕೆಯಿಂದಲೇ ಚೆನ್ನಮ್ಮ ಇದ್ದರು. (ಚಿತ್ರ ಕೃಪೆ: Dinesh Hirisave Basavaiah)

ದೇವೇಗೌಡ ಮತ್ತು ಚೆನ್ನಮ್ಮ ದಂಪತಿಗೆ ಆರು ಮಕ್ಕಳು ಮತ್ತು 9 ಮೊಮ್ಮಕ್ಕಳು. ತುಂಬು ಕುಟುಂಬದ ಮಹಾತಾಯಿಯಾದ ಚೆನ್ನಮ್ಮ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಂಸ್ಕಾರ, ಸಂಸ್ಕೃತಿ ಕಲಿಸಿದ ಅಪ್ಪಟ ಭಾರತೀಯ ನಾರಿ. (ಚಿತ್ರ ಕೃಪೆ: Dinesh Hirisave Basavaiah)

ಸದಾ ಕಾಲ ಎಲ್ಲರ ಅಕ್ಕರೆಯ ಅಮ್ಮನಾಗಿ, ಪ್ರೀತಿಯ ಅಕ್ಕನಾಗಿ, ತವರಿನ ಪಾಲಿಗೂ ಆಸರೆಯ ಮೂರ್ತಿಯಾಗಿ ಹೀಗೆ ಇಡೀ ಕುಟುಂಬದ ಆಸ್ತಿಯಾಗಿ ಕೈಯಾರೆ ಆರೈಕೆ ಮಾಡಿದ ಹೆಗ್ಗಳಿಗೆ ಚೆನ್ನಮ್ಮ ಅವರದ್ದು. (ಚಿತ್ರ ಕೃಪೆ: Dinesh Hirisave Basavaiah)

ಚೆನ್ನಮ್ಮ ಅವರಿಗೆ ಮೊನ್ನೆ ಅಂದ್ರೆ ಕಳೆದ ಬುಧವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನ ಬೆಂಗಳೂರಿನ ಇಂದಿರಾ ನಗರದಲ್ಲಿರೋ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳಿಂದಲೂ ವೈದ್ಯರು ನಿರಂತರ ಚಿಕಿತ್ಸೆ ನೀಡಿದರಾದ್ರೂ ಚೆನ್ನಮ್ಮ ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. (ಚಿತ್ರ ಕೃಪೆ: Dinesh Hirisave Basavaiah)