- Kannada News Photo gallery Chikkanna Starrer Upadyaksha trailer released by Shiva Rajkumar movie releasing on January 26
‘ಉಪಾಧ್ಯಕ್ಷ’ ಟ್ರೈಲರ್ ಲಾಂಚ್ ಮಾಡಿದ ಶಿವಣ್ಣನಿಗೆ ಸುಂದರ ಉಡುಗೊರೆ, ಇಲ್ಲಿವೆ ಕಾರ್ಯಕ್ರಮದ ಚಿತ್ರಗಳು
Upadyaksha Trailer: ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ ಸಿನಿಮಾದ ಟ್ರೈಲರ್ ಅನ್ನು ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದ ಸುಂದರ ಚಿತ್ರಗಳು ಇಲ್ಲಿವೆ.
Updated on: Jan 14, 2024 | 9:19 PM

ಹಾಸ್ಯನಟ ಚಿಕ್ಕಣ್ಣ ಮೊದಲ ಬಾರಿ ನಾಯಕನಾಗಿ ನಟಿಸುತ್ತಿರುವ ‘ಉಪಾಧ್ಯಕ್ಷ’ ಸಿನಿಮಾದ ಟ್ರೈಲರ್ ನಿನ್ನೆ (ಜನವರಿ 13) ಲಾಂಚ್ ಆಗಿದೆ.

ನಟ ಶಿವರಾಜ್ ಕುಮಾರ್ ಅವರು ಸಿನಿಮಾದ ಟ್ರೈಲರ್ ಅನ್ನು ಲಾಂಚ್ ಮಾಡಿದ್ದು ಮಾತ್ರವೇ ಅಲ್ಲದೆ, ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ನಾನು ಚಿಕ್ಕಣ್ಣ ಅವರನ್ನು ಬಹಳ ಇಷ್ಟಪಡುತ್ತೇನೆ. ಚಿಕ್ಕಣ್ಣ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ, ಮೈಸೂರಿನಲ್ಲಿ ಸಿನಿಮಾ ನೋಡುತ್ತೀನಿ ಎಂದಿದ್ದಾರೆ.

‘ಉಪಾಧ್ಯಕ್ಷ’ ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ಅವರ ಪತ್ನಿ ಸ್ಮಿತಾ ಉಮಾಪತಿ ನಿರ್ಮಾಣ ಮಾಡಿದ್ದಾರೆ. ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ.

"ಉಪಾಧ್ಯಕ್ಷ", " ಅಧ್ಯಕ್ಷ" ಚಿತ್ರದ ಮುಂದುವರೆದ ಭಾಗ ಎಂದು ಮಾತು ಆರಂಭಿಸಿದ ನಿರ್ದೇಶಕ ಅನಿಲ್ ಕುಮಾರ್ ಹೇಳಿದರು.

250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯನಟರಾಗಿ ನಟಿಸಿರುವ ಚಿಕ್ಕಣ್ಣ ‘ಉಪಾಧ್ಯಕ್ಷ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ಮಲೈಕ ನಟಿಸಿದ್ದಾರೆ.

ಸಿನಿಮಾದಲ್ಲಿ ನಟ ರವಿಶಂಕರ್ ಸೇರಿದಂತೆ ಅನೇಕ ಕಲಾವಿದರು "ಉಪಾಧ್ಯಕ್ಷ" ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಜನವರಿ 26ಕ್ಕೆ ಬಿಡುಗಡೆ ಆಗಲಿದೆ.




