ಎಲ್ಲಿ ನೋಡಿದರೆ ತಿನ್ನಬೇಕು ಅನ್ನಿಸೋ ರೀತಿಯಲ್ಲಿರುವ ಕೇಕ್, ಬರ್ಗರ್ ಸೇರಿದಂತೆ ಅನೇಕ ಸಿಹಿ ತಿಂಡಿಗಳಿದ್ದವು. ಕೆಲ ಮಹಿಳೆಯರು ನಿಪ್ಟಟ್ಟು, ಚಕ್ಕುಲಿ, ಕೋಡಬಳೆ ಸೇರಿದಂತೆ ಅನೇಕ ಕುರುಕುಲ ತಿಂಡಿಗಳನ್ನು ಸಿದ್ದಗೊಳಿಸಿದ್ದರೆ, ಇನ್ನು ಕೆಲ ಮಹಿಳೆಯರು ಮುಂಜಾನೆ ಬ್ರೇಕ್-ಫಾಸ್ಟ್, ಮಧ್ಯಾಹ್ನ ಊಟ, ಸಂಜೆಯ ತಿನಿಸು, ರಾತ್ರಿಯ ಊಟಕ್ಕೆ ಬೇಕಾದ ವಿವಿಧ ಆಹಾರಗಳನ್ನು ಸಿದ್ಧಗೊಳಿಸಿದ್ದರು. ಇವೆಲ್ಲವನ್ನು ನೋಡುತ್ತಿದ್ದ ಅನೇಕರಿಗೆ ಬಾಯಲ್ಲಿ ನೀರು ಬರ್ತಿತ್ತು. ಹೀಗಾಗಿ ಅನೇಕರು ತಮಗಿಷ್ಟವಾದ ಸಿಹಿತಿನಿಸು, ಕುರುಕಲು ತಿಂಡಿಗಳನ್ನು ತಿಂದು ಬಾಯಿ ಕೂಡಾ ಚಪ್ಪರಿಸಿದ್ರು. ಇಂತಹದೊಂದು ಬಗೆಬಗೆಯ ಆಹಾರಗಳು ಸಿದ್ದವಾಗಿದ್ದು ಕೊಪ್ಪಳ ನಗರದಲ್ಲಿರುವ ಕೃಷಿ ವಿಸ್ತರಣಾ ಕೇಂದ್ರದಲ್ಲಿ. ಇನ್ನು ಇವೆಲ್ಲವನ್ನು ಮಾಡಿದ್ದು ಸಿರಿಧಾನ್ಯಗಳಿಂದ ಅನ್ನೋದು ವಿಶೇಷ.