- Kannada News Photo gallery Cooking fair for Chikkaballapur engineering students attracted attention, Here is a glimpse of it
Chikkaballapur: ಗಮನ ಸೆಳೆದ ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ಅಡುಗೆ ಮೇಳ; ಅದರ ಝಲಕ್ ಇಲ್ಲಿದೆ ನೋಡಿ
ಪಾಠ, ಲ್ಯಾಬ್, ಪ್ರಾಜೆಕ್ಟ್ ಎಂದು ತಲೆಕೆಡಿಸಿಕೊಂಡು ಸೀರಿಯಸ್ ಆಗಿ 4 ಗೋಡೆಗಳ ಮದ್ಯೆ ವಿದ್ಯಾಭ್ಯಾಸ ಮಾಡುತ್ತಿದ್ದ ಚಿಕ್ಕಬಳ್ಳಾಪುರ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು. ಕಾಲೇಜಿನ ಸಂಭ್ರಮಾಚರಣೆ ಪ್ರಯುಕ್ತ, ಸ್ವತಃ ತಾವೇ ತಯಾರಿಸಿದ ತರೇವಾರಿ ರುಚಿ ರುಚಿಯಾದ ಅಡುಗೆಯನ್ನ ಮಾರಾಟ ಮಾಡುವುದರ ಮೂಲಕ ಅಡುಗೆ ಮೇಳ ಹಾಗೂ ಸಂತೆ ಮಾಡಿದ್ದು ವಿಶೇಷವಾಗಿತ್ತು
Updated on:Jun 02, 2023 | 7:38 AM

ಪಾಠ, ಲ್ಯಾಬ್, ಪ್ರಾಜೆಕ್ಟ್ ಎಂದು ತಲೆಕೆಡಿಸಿಕೊಂಡು ಸೀರಿಯಸ್ ಆಗಿ 4 ಗೋಡೆಗಳ ಮದ್ಯೆ ವಿದ್ಯಾಭ್ಯಾಸ ಮಾಡುತ್ತಿದ್ದ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ನಿನ್ನೆ ಫುಲ್ ಎಂಜಾಯ್ ಮಾಡಿದರು.

ಹೌದು ಕಾಲೇಜಿನ ಸಂಭ್ರಮಾಚರಣೆ ಪ್ರಯುಕ್ತ, ಸ್ವತಃ ತಾವೇ ತಯಾರಿಸಿದ ತರೇವಾರಿ ರುಚಿ ರುಚಿಯಾದ ಅಡುಗೆಯನ್ನ ಮಾರಾಟ ಮಾಡುವುದರ ಮೂಲಕ ಅಡುಗೆ ಮೇಳ ಹಾಗೂ ಅಡುಗೆ ಸಂತೆ ನಡೆಸಿದರು.

ಅಡುಗೆ ಸಂತೆಯಲ್ಲಿ ಹಣ ನೀಡಿ, ತರೇವಾರಿ ರುಚಿ ರುಚಿ ಅಡುಗೆ ಸವಿಯುವ ಅವಕಾಶ ಕಾಲೇಜಿನ ಸಹಪಾಠಿಗಳಿಗೆ ದೊರೆತಿತ್ತು.

ಕಾಲೇಜಿನ ಸಂಭ್ರಮ ಸಮಾರಂಭ ಪ್ರಯುಕ್ತ ಆಡಳಿತ ಮಂಡಳಿಯೂ ಸಹ ಯಾವುದೆ ನಿರ್ಬಂಧವಿದಿಸದೆ. ಒಂದು ದಿನ ವಿದ್ಯಾರ್ಥಿಗಳು ರೀಪ್ರೆಶ್ ಆಗಲೆಂದು ಪ್ರೀ ಬಿಟ್ಟುಬಿಟ್ಟಿದ್ದರು.

ಇನ್ನು ಅಡುಗೆ ಮೇಳ ಹಾಗೂ ಮಾರಾಟದ ನಂತರ ವಿದ್ಯಾರ್ಥಿಗಳಿಗಾಗಿ ವಿವಿಧ ವಿನೂತನ ಕ್ರೀಡೆಗಳನ್ನು ಆಡಿಸಿದ್ದು, ನೋಡುಗರ ಗಮನ ಸೆಳೆಯಿತು.

ಪ್ರತಿದಿನ 4 ಗೋಡೆಗಳ ಮದ್ಯೆ ವಿದ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಕಾಲೇಜು ಸಂಭ್ರಮ ಪ್ರಯುಕ್ತ ವಿಶೇಷ ಸಂತೆ ಮೇಳ, ಕ್ರೀಡಾಕೂಟದಲ್ಲಿ ಬಾಗಿಯಾಗಿ ಉಲ್ಲಾಸಗೊಂಡರು.
Published On - 7:35 am, Fri, 2 June 23




