- Kannada News Photo gallery Copper Cleaning Hacks: Use these simple tips to make a Copper Vessel Clean and Shine
Copper Cleaning Hacks: ಈ ಸಿಂಪಲ್ ಟಿಪ್ಸ್ ಬಳಸಿ ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಿ
ತಾಮ್ರದ ಪಾತ್ರೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದರೂ ಕೂಡ ಒಂದು ಬಾರಿ ಈ ಪಾತ್ರೆಯಲ್ಲಿ ಕಲೆ ಕಂಡುಬಂದರೆ ಅದನ್ನು ಸ್ವಚ್ಚಗೊಳಿಸುವುದು ಅಷ್ಟೊಂದು ಸುಲಭವಲ್ಲ.
Updated on:Feb 07, 2023 | 1:01 PM

ತಾಮ್ರದ ಪಾತ್ರೆಯಲ್ಲಿ ಆಹಾರವನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆಯಲ್ಲಿ ರಾತ್ರಿ ಶೇಖರಿಸಿಟ್ಟ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ, ಇದು ದೇಹದ ಅಂಗಾಂಗಗಳು ಮತ್ತು ಚಯಾಪಚಯ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ.

ತಾಮ್ರದ ಪಾತ್ರೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದರೂ ಕೂಡ ಒಂದು ಬಾರಿ ಈ ಪಾತ್ರೆಯಲ್ಲಿ ಕಲೆ ಕಂಡುಬಂದರೆ ಅದನ್ನು ಸ್ವಚ್ಚಗೊಳಿಸುವುದು ಅಷ್ಟೊಂದು ಸುಲಭವಲ್ಲ. ಆದರೆ ಈ ಈ ಸಿಂಪಲ್ ಟಿಪ್ಸ್ ಬಳಸಿ ನೀವು ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.

ನಿಂಬೆ ಮತ್ತು ಉಪ್ಪು: ನಿಂಬೆಹಣ್ಣಿಗೆ ಸ್ವಲ್ಪ ಉಪ್ಪು ಸೇರಿಸಿ ಮತ್ತು ಪಾತ್ರೆಯ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಕನಿಷ್ಠ ಅರ್ಧ ಗಂಟೆ ಬಿಟ್ಟು ನಂತರ ಸ್ಕ್ರಬ್ ಮಾಡುತ್ತಿರಿ. ಇದು ತಾಮ್ರದ ಪಾತ್ರೆಯಲ್ಲಿರುವ ಕಲೆಗಳನ್ನು ಹೋಗಲಾಡಿಸುವಲ್ಲಿ ಸಹಾಯಕವಾಗಿದೆ.

ವಿನೆಗರ್: ಈ ಮೇಲಿನ ವಿಧಾನಕ್ಕಾಗಿ ಅಡುಗೆಮನೆಯಲ್ಲಿ ನಿಂಬೆಹಣ್ಣು ಖಾಲಿಯಾಗಿದ್ದರೆ, ಅದಕ್ಕೆ ಪರ್ಯಾಯವಾಗಿ ನೀವು ವಿನೆಗರ್ ಬಳಸಬಹುದು. ಉಪ್ಪು ಮತ್ತು ವಿನೆಗರ್ ಪೇಸ್ಟ್ ತಯಾರಿಸಿ.

ಕೆಚಪ್: ತಾಮ್ರದ ಪಾತ್ರೆಯ ಕಲೆಯನ್ನು ಹೋಗಲಾಡಿಸಲು ನೀವು ಕೆಚಪ್ ಬಳಸಬಹುದು. ಕೆಚಪ್‌ನ ನೈಸರ್ಗಿಕ ಆಮ್ಲೀಯತೆಯು ತಾಮ್ರದ ಕಲೆಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ತಾಮ್ರದ ಪಾತ್ರೆಯ ಮೇಲೆ ಕೆಚಪ್ ಹರಡಿ, ಕೆಲವು ನಿಮಿಷಗಳ ನಂತರ ಮೃದುವಾದ ಸ್ಪಾಂಜ್ ಅಥವಾ ನೈಲಾನ್ ಪ್ಯಾಡ್‌ನಿಂದ ಸ್ಕ್ರಬ್ ಮಾಡಿ.

ಮನೆಯಲ್ಲಿಯೇ ತಾಮ್ರದ ಪಾಲಿಶ್ ತಯಾರಿಸಿ: ಒಂದು ಚಿಕ್ಕ ಬೌಲ್ನಲ್ಲಿ ಸ್ವಲ್ಪ ಉಪ್ಪು, ಡಿಶ್ ವಾಶ್ ಪೌಡರ್ ಸೇರಿಸಿ ಮಿಶ್ರಣ ಮಾಡಿ. ನಂತರ ಇದಕ್ಕೆ ಸ್ವಲ್ಪ ಬಿಳಿ ವಿನೆಗರ್, ನಿಂಬೆ ರಸ ಮತ್ತು ಸ್ವಲ್ಪ ನೀರು ಸೇರಿಸಿ. ಇದರಿಂದ ಕೂಡ ನೀವು ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.

ಅಡಿಗೆ ಸೋಡಾ : ಸ್ವಲ್ಪ ಅಡುಗೆ ಸೋಡಾದೊಂದಿಗೆ ಬೇಕಿಂಗ್ ಪೌಡರ್ ಬೆರೆಸಿ ತಾಮ್ರದ ಪಾತ್ರೆಗೆ ಹಚ್ಚಿ . ಈ ವಿಧಾನವು ಕಲೆಗಳನ್ನು ಸ್ವಚ್ಛಗೊಳಿಸುವಲ್ಲಿ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ.
Published On - 1:00 pm, Tue, 7 February 23




