ಅಂಜನಾದ್ರಿಯ ಆಂಜನೇಯನ ಹುಂಡಿ ಎಣಿಕೆ: ಕಾಣಿಕೆಯಾಗಿ ಬಂದ ವಿದೇಶಿ ಹಣ
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಇಂದು ನಡೆಯಿತು. ಗಂಗಾವತಿ ತಹಶಿಲ್ದಾರ್ ನೇತೃತ್ವದಲ್ಲಿ, ಪೊಲೀಸ್ ಭದ್ರತೆ ಮತ್ತು ಸಿಸಿಟಿವಿ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಎರಡು ವಿದೇಶಿ ನೋಟು ಮತ್ತು 9 ವಿದೇಶಿ ನಾಣ್ಯಗಳು ಕೂಡ ಹುಂಡಿಯಲ್ಲಿ ಸಂಗ್ರಹವಾಗಿವೆ.
Updated on:Feb 21, 2024 | 8:06 PM

ಹನುಮ ಜನಿಸಿದ ಸ್ಥಳ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಹರಿದು ಬರುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ.

ಇದರಿಂದ ಆಂಜನೇಯ ದೇವಸ್ಥಾನಕ್ಕೆ ಕಾಣಿಕೆ ಕೂಡ ಹೇರಳವಾಗಿ ಬರುತ್ತಿದೆ. ಈ ಹಿನ್ನಲೆ ಇಂದು(ಫೆ.21) ಹುಂಡಿ ಏಣಿಕೆ ಕಾರ್ಯವನ್ನು ಮಾಡಲಾಗಿದೆ.

ಹೌದು, ಭಕ್ತರ ಆಗಮನದಿಂದ ಪ್ರಖ್ಯಾತಿ ಪಡೆಯುತ್ತಿರುವ ದೇವಸ್ಥಾನದ ಹುಂಡಿ ಎಣಿಕೆಯನ್ನು ಗಂಗಾವತಿ ತಹಶೀಲ್ದಾರ್ ಯು.ನಾಗರಾಜ್ ನೇತೃತ್ವದಲ್ಲಿ ಪೊಲೀಸ್ ಭದ್ರತೆಯಲ್ಲಿ ಹುಂಡಿ ಎಣಿಕೆ ಮಾಡಲಾಗಿದೆ.

ಇದರಲ್ಲಿ ವಿಶೇಷವೆಂದರೆ ವಿದೇಶಿ ನಾಣ್ಯಗಳು, ನೋಟುಗಳು ಈ ಬಾರಿ ಕಾಣಿಕೆ ಡಬ್ಬಿಯಲ್ಲಿ ಹರಿದು ಬಂದಿದೆ. ಅಂದರೆ ವಿದೇಶಿಗರು ಕೂಡ ಬಂದು ದೇವರ ಕೃಫೆಗೆ ಪಾತ್ರರಾಗುತ್ತಿದ್ದಾರೆ.

ಇನ್ನು ಹೆಚ್ಚಿದ ಭಕ್ತರ ಸಂಖ್ಯೆಗೆ ಅನುಗುಣವಾಗಿಯೇ ಕಳೆದ 46 ದಿನಗಳಲ್ಲಿ ಬರೊಬ್ಬರಿ 34,86,965 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

ಈ ಬಾರಿ ಯೂರೋಪ್, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ ಸೇರಿದಂತೆ 2 ವಿದೇಶಿ ನೋಟುಗಳ ಜೊತೆಗೆ 9 ವಿದೇಶಿ ನಾಣ್ಯಗಳು ಕೂಡ ಹುಂಡಿಯಲ್ಲಿ ಸಂಗ್ರಹವಾಗಿದೆ.
Published On - 7:57 pm, Wed, 21 February 24



