AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಆರೆಂಜ್ ಕ್ಯಾಪ್​ಗಾಗಿ ನಾಲ್ವರ ನಡುವೆ ನೇರ ಪೈಪೋಟಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಯಾರು? ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನೂ ಎರಡು ಪಂದ್ಯಗಳು ಮುಗಿಯಬೇಕು. ಏಕೆಂದರೆ ಐಪಿಎಲ್ ಆರೆಂಜ್ ಕ್ಯಾಪ್​ ರೇಸ್​ನಲ್ಲಿ ನಾಲ್ಕು ಆಟಗಾರರಿದ್ದು, ಈ ಆಟಗಾರರ ನಡುವೆ ಗರಿಷ್ಠ ಸ್ಕೋರರ್​ ಪಟ್ಟಕ್ಕಾಗಿ ಪೈಪೋಟಿ ಮುಂದುವರೆದಿದೆ.

ಝಾಹಿರ್ ಯೂಸುಫ್
|

Updated on: May 29, 2026 | 12:16 PM

Share
IPL 2026: ಇಂಡಿಯನ್ ಇಂಡಿಯನ್ ಪ್ರೀಮಿಯರ್ ಲೀಗ್​ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 72 ಪಂದ್ಯಗಳು ಮುಗಿದಿದೆ. ಇನ್ನುಳಿದಿರುವುದು ಕೇವಲ 2 ಮ್ಯಾಚ್​ ಮಾತ್ರ. ಈ ಎರಡು ಪಂದ್ಯಗಳ ಮೂಲಕ ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲೋರು ಯಾರು ಎಂಬುದು ನಿರ್ಧಾರವಾಗಲಿದೆ. ಸದ್ಯ ನಾಲ್ವರು ಆಟಗಾರರ ನಡುವೆ ಆರೆಂಜ್ ಕ್ಯಾಪ್​ಗಾಗಿ ನೇರ ಪೈಪೋಟಿ ಇದ್ದು, ಆ ಆಟಗಾರರು ಯಾರೆಂದರೆ... (PC: IPL)

1 / 5
1- ವೈಭವ್ ಸೂರ್ಯವಂಶಿ: ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ ರೇಸ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈವರೆಗೆ 15 ಇನಿಂಗ್ಸ್ ಆಡಿರುವ ವೈಭವ್ 1 ಶತಕ ಹಾಗೂ 4 ಅರ್ಧಶತಕಗಳೊಂದಿಗೆ  280 ಎಸೆತಗಳಲ್ಲಿ ಒಟ್ಟು 680 ರನ್​ ಬಾರಿಸಿದ್ದಾರೆ.  (PC: IPL)

2 / 5
2- ಸಾಯಿ ಸುದರ್ಶನ್: ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ದಾಂಡಿಗ ಸಾಯಿ ಸುದರ್ಶನ್ ಆರೆಂಜ್ ಕ್ಯಾಪ್ ರೇಸ್​ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಈವರೆಗೆ 15 ಇನಿಂಗ್ಸ್ ಆಡಿರುವ ಸಾಯಿ ಸುದರ್ಶನ್ 413 ಎಸೆತಗಳನ್ನು ಎದುರಿಸಿ ಒಟ್ಟು 652 ರನ್​ ಕಲೆಹಾಕಿದ್ದಾರೆ. (PC: IPL)

3 / 5
3- ಶುಭ್​ಮನ್ ಗಿಲ್: ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಕೂಡ ಆರೆಂಜ್ ಕ್ಯಾಪ್ ರೇಸ್​ನಲ್ಲಿದ್ದಾರೆ. ಈವರೆಗೆ 14 ಇನಿಂಗ್ಸ್ ಆಡಿರುವ ಶುಭ್​ಮನ್ ಗಿಲ್ 6 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ 388 ಎಸೆತಗಳಲ್ಲಿ  618 ರನ್ ಕಲೆಹಾಕಿದ್ದಾರೆ. (PC: IPL)

4 / 5
4- ವಿರಾಟ್ ಕೊಹ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 15 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಈವರೆಗೆ 365 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 600 ರನ್​ಗಳು. ಇನ್ನು ಫೈನಲ್ ಮ್ಯಾಚ್​ನಲ್ಲಿ ಪ್ರಚಂಡ ಪ್ರದರ್ಶನ ನೀಡಿದರೆ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಳ್ಳಬಹುದು. (PC: IPL)

5 / 5
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us