ಇಂತಹದೊಂದು ಪವಾಡ ನಡೆದರೆ ಅಫ್ಘಾನಿಸ್ತಾನ್ ಸೆಮಿಫೈನಲ್​ಗೆ..!

Updated on: Mar 01, 2025 | 9:04 AM

Champions Trophy 2025: ಚಾಂಪಿಯನ್ಸ್ ಟ್ರೋಫಿಯ ನಾಕೌಟ್ ಹಂತಕ್ಕೆ ಈಗಾಗಲೇ ಭಾರತ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಎಂಟ್ರಿ ಕೊಟ್ಟಿದೆ. ಇದಾಗ್ಯೂ ಸೆಮಿಫೈನಲ್​ಗೇರಲಿರುವ ನಾಲ್ಕನೇ ತಂಡ ಯಾವುದೆಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಇಲ್ಲಿ ಸೌತ್ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ್ ನಡುವೆ ಪೈಪೋಟಿ ಇದ್ದು, ಇಂದಿನ ಪಂದ್ಯದ ಮೂಲಕ ಸೆಮಿಫೈನಲ್​ಆಡಲಿರುವ 4ನೇ ತಂಡ ಯಾವುದೆಂಬುದು ನಿರ್ಧಾರವಾಗಲಿದೆ.

1 / 5
ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮೂರು ತಂಡಗಳು ಹೊರಬಿದ್ದರೆ, ಮೂರು ಟೀಮ್​ಗಳು ಸೆಮಿಫೈನಲ್​ಗೆ ಪ್ರವೇಶಿಸಿದೆ. ಇದಾಗ್ಯೂ ಸೆಮಿಫೈನಲ್ ಆಡಲಿರುವ 4ನೇ ತಂಡ ಯಾವುದೆಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ್ ನಡುವಣ ಪಂದ್ಯವು ಮಳೆಯಿಂದ ರದ್ದಾಗಿರುವುದು.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮೂರು ತಂಡಗಳು ಹೊರಬಿದ್ದರೆ, ಮೂರು ಟೀಮ್​ಗಳು ಸೆಮಿಫೈನಲ್​ಗೆ ಪ್ರವೇಶಿಸಿದೆ. ಇದಾಗ್ಯೂ ಸೆಮಿಫೈನಲ್ ಆಡಲಿರುವ 4ನೇ ತಂಡ ಯಾವುದೆಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ್ ನಡುವಣ ಪಂದ್ಯವು ಮಳೆಯಿಂದ ರದ್ದಾಗಿರುವುದು.

2 / 5

ಲಾಹೋರ್​ನಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ್ ನಡುವಣ ಪಂದ್ಯವು ಮಳೆಗೆ ಅಹುತಿಯಾಗಿದೆ. ಹೀಗಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಈ ಒಂದು ಅಂಕದೊಂದಿಗೆ 4 ಪಾಯಿಂಟ್ಸ್ ಪಡೆದಿರುವ ಆಸ್ಟ್ರೇಲಿಯಾ ಸೆಮಿಫೈನಲ್​ಗೇರಿದೆ.

3 / 5

ಆದರೆ ಇತ್ತ ಇಂಗ್ಲೆಂಡ್ ವಿರುದ್ಧ ಗೆದ್ದು 2 ಅಂಕಗಳನ್ನು ಪಡೆದಿದ್ದ ಅಫ್ಘಾನಿಸ್ತಾನ್ ತಂಡ ಒಟ್ಟು ಪಾಯಿಂಟ್ಸ್ ಮೂರಕ್ಕೇರಿದೆ. ಅತ್ತ ಸೌತ್ ಆಫ್ರಿಕಾ ತಂಡವು 3 ಅಂಕಗಳನ್ನು ಹೊಂದಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿದರೆ 5 ಅಂಕಗಳೊಂದಿಗೆ ಸೆಮಿಫೈನಲ್​ಗೆ ಪ್ರವೇಶಿಸಲಿದೆ.

4 / 5

ಆದರೆ ಇಂಗ್ಲೆಂಡ್ ತಂಡ 207 ರನ್​ಗಳ (ಕನಿಷ್ಠ 301 ರನ್​ಗಳ ಟಾರ್ಗೆಟ್) ಅಂತರದಿಂದ ಗೆದ್ದರೆ ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ. ಅಂದರೆ ಇಲ್ಲಿ +2.140 ನೆಟ್​ ರನ್​ ರೇಟ್ ಹೊಂದಿರುವ ಸೌತ್ ಆಫ್ರಿಕಾ ತಂಡವನ್ನು ಅಫ್ಘಾನಿಸ್ತಾನ್ (-0.990) ಹಿಂದಿಕ್ಕಬೇಕಿದ್ದರೆ ಇಂಗ್ಲೆಂಡ್ ಕನಿಷ್ಠ 207 ರನ್​ಗಳ ಅಮೋಘ ಗೆಲುವು ದಾಖಲಿಸಬೇಕು.

5 / 5

ಕರಾಚಿ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ (ಮಾ.1) ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಇಂತಹದೊಂದು ಅಮೋಘ ಗೆಲುವು ದಾಖಲಿಸಿದರೆ ಮಾತ್ರ ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್​ಗೇರಬಹುದು. ಇದರ ಹೊರತಾಗಿ ಸೌತ್ ಆಫ್ರಿಕಾ ತಂಡ ಸೋತರೂ ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ. ಹೀಗಾಗಿ ಅಫ್ಘಾನ್ ಪಾಲಿಗೆ ಆಂಗ್ಲರು ಪವಾಡ ಸೃಷ್ಟಿಸಲಿದ್ದಾರಾ ಕಾದು ನೋಡಬೇಕಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us