AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟೀಫನ್ ಫ್ಲೆಮಿಂಗ್ ಬದಲಿಗೆ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಕ

Joburg Super Kings head coach: ಆಲ್ಬಿ ಮಾರ್ಕೆಲ್ ಅವರು SA20 ಲೀಗ್‌ನ ಜೋಬರ್ಗ್ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಸ್ಟೀಫನ್ ಫ್ಲೆಮಿಂಗ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಾರ್ಕೆಲ್ ಬಂದಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿರುವ ಅನುಭವ ಹೊಂದಿರುವ ಇವರು, ಈಗ ಹೊಸ ಜವಾಬ್ದಾರಿ ಹೆಗಲೇರಿಸಿಕೊಂಡಿದ್ದಾರೆ. ತಂಡದೊಂದಿಗೆ ಹಿಂದಿನಿಂದಲೂ ಸಂಪರ್ಕ ಹೊಂದಿದ್ದ ಮಾರ್ಕೆಲ್, ಸದ್ಯ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ಪೃಥ್ವಿಶಂಕರ
|

Updated on: Jul 30, 2026 | 10:05 PM

Share
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ನ್ಯೂಜಿಲೆಂಡ್​ನ ಮಾಜಿ ಆಟಗಾರ ಸ್ಟೀಫನ್ ಫ್ಲೆಮಿಂಗ್ ಕೆಲವು ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಫ್ಲೆಮಿಂಗ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇದೀಗ ಹೊಸ ಕೋಚ್​ನ ನೇಮಕವಾಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸ ಕೋಚ್ ನೇಮಕವಾಗಿಲ್ಲ. ಬದಲಿಗೆ ಎಸ್​ಎ20 ಲೀಗ್​ನಲ್ಲಿ ಭಾಗವಹಿಸುತ್ತಿರುವ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ನೂತನ ಕೋಚ್ ನೇಮಕವಾಗಿದೆ(PC-PTI).

1 / 5
ವಾಸ್ತವವಾಗಿ ಐಪಿಎಲ್‌ನಲ್ಲಿ ಫ್ರಾಂಚೈಸಿಯನ್ನು ಹೊಂದಿರುವಂತೆ ಚೆನ್ನೈ ಒಡೆತನದ ಬೇರೆ ಬೇರೆ ತಂಡಗಳು ವಿವಿಧ ಟಿ20 ಲೀಗ್​ಗಳಲ್ಲಿ ಆಡುತ್ತಿವೆ. ಆ ಎಲ್ಲಾ ತಂಡಗಳಿಗೂ  ಸ್ಟೀಫನ್ ಫ್ಲೆಮಿಂಗ್ ಕೋಚಿಂಗ್ ಮಾಡುತ್ತಿದ್ದರು. ಆದರೆ ಅವರ ರಾಜೀನಾಮೆಯ ಬಳಿಕ ಎಲ್ಲಾ ತಂಡಗಳಿಗೆ ಹೊಸ ಕೋಚ್​ಗಳ ನೇಮಕವಾಗುತ್ತಿದೆ. ಅದರಂತೆ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಆಲ್ಬಿ ಮೊರ್ಕೆಲ್ ಅವರನ್ನು ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ(PC-PTI).

2 / 5
ಜುಲೈ 30 ರಂದು ಫ್ರಾಂಚೈಸಿ ಅಧಿಕೃತವಾಗಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, SA20 ಯ ಐದನೇ ಸೀಸನ್‌ನಲ್ಲಿ ಮಾರ್ಕೆಲ್ ಮೊದಲ ಬಾರಿಗೆ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ ಎಂದಿದೆ. ಆದಾಗ್ಯೂ, ತಂಡ ಮತ್ತು ಸೂಪರ್ ಕಿಂಗ್ಸ್ ಕುಟುಂಬದೊಂದಿಗಿನ ಅವರ ಸಂಬಂಧ ಹೊಸದಲ್ಲ. ಅವರು ಲೀಗ್‌ನ ಮೊದಲ ಸೀಸನ್‌ನಿಂದ ಜೋಬರ್ಗ್ ಸೂಪರ್ ಕಿಂಗ್ಸ್ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದಾರೆ ಮತ್ತು ತಂಡದ ಕಾರ್ಯತಂತ್ರ ಮತ್ತು ಆಟಗಾರರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ(PC-PTI).

3 / 5
 ಆಲ್ಬಿ ಮಾರ್ಕೆಲ್ ಒಬ್ಬ ಆಟಗಾರನಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು ಮತ್ತು ತಂಡದ ಅನೇಕ ಸ್ಮರಣೀಯ ವಿಜಯಗಳಿಗೆ ಪ್ರಮುಖ ಕೊಡುಗೆ ನೀಡಿದ್ದರು. ಇದೀಗ ಮುಖ್ಯ ಕೋಚ್ ಆಗಿ ತಂಡಕ್ಕೆ ತರಬೇತಿ ನೀಡುವ ಜವಾಬ್ದಾರಿ ಮಾರ್ಕೆಲ್ ಹೆಗಲೇರಿದೆ(PC-PTI).

4 / 5
ಆಲ್ಬಿ ಮಾರ್ಕೆಲ್ 91 ಐಪಿಎಲ್ ಪಂದ್ಯಗಳಲ್ಲಿ 24 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 974 ರನ್ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ ಮಿಂಚಿರುವ ಅವರು 85 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಇದಲ್ಲದೆ ಆಲ್ಬಿ ಮಾರ್ಕೆಲ್ ದಕ್ಷಿಣ ಆಫ್ರಿಕಾ ಪರ 58 ಏಕದಿನ, 50 ಟಿ20 ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ(PC-PTI).

5 / 5
Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು

ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!

ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು

ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ

ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ

ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ

ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ

ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್

Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ