- Kannada News Photo gallery Cricket photos Asia Cup 2025: India Creates Unwanted Record in IND vs BAN Match
ಹಿಸ್ಟರಿ… ಹಿಸ್ಟರಿ… ಹಿಸ್ಟರಿ… ಕ್ಯಾಚ್ ಕೈಚೆಲ್ಲಿ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ
India vs Bangladesh: ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 168 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಪರ ಸೈಫ್ ಹಸನ್ 51 ಎಸೆತಗಳಲ್ಲಿ 69 ರನ್ ಬಾರಿಸಿದರು. ಇದಾಗ್ಯೂ ಬಾಂಗ್ಲಾದೇಶ್ ತಂಡ 127 ರನ್ಗಳಿಗೆ ಆಲೌಟ್ ಆಗುವ ಮೂಲಕ 41 ರನ್ಗಳಿಂದ ಸೋಲೊಪ್ಪಿಕೊಂಡಿತು.
Updated on: Sep 25, 2025 | 7:54 AM

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ (Team India) ಹೊಸ ದಾಖಲೆ ಬರೆದಿದೆ. ಅದು ಸಹ ಕ್ಯಾಚ್ ಕೈ ಚೆಲ್ಲುವ ಮೂಲಕ..! ಅಂದರೆ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಒಬ್ಬ ಬ್ಯಾಟರ್ಗೆ ಅತ್ಯಧಿಕ ಬಾರಿ ಜೀವದಾನ ನೀಡಿದ ಅಪಕೀರ್ತಿ ಭಾರತ ತಂಡದ ಪಾಲಾಗಿದೆ.

ದುಬೈನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ 16ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 168 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಲು ಬಾಂಗ್ಲಾದೇಶ್ ಪರ ಆರಂಭಿಕರಾಗಿ ಸೈಫ್ ಹಸನ್ ಹಾಗೂ ತಂಝಿದ್ ಹಸನ್ ಕಣಕ್ಕಿಳಿದಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಸೈಫ್ ಹಸನ್ಗೆ ಟೀಮ್ ಇಂಡಿಯಾ ಫೀಲ್ಡರ್ ಗಳು ನೀಡಿದ ಜೀವದಾನಗಳ ಸಂಖ್ಯೆ ಬರೋಬ್ಬರಿ ನಾಲ್ಕು. 40 ರನ್ ಗಳಿಸಿದ್ದಾಗ ಅಕ್ಷರ್ ಪಟೇಲ್ ಬಾಂಗ್ಲಾದೇಶ್ ಆರಂಭಿಕನಿಗೆ ಮೊದಲ ಜೀವದಾನ ನೀಡಿದ್ದರು. ಈ ಅವಕಾಶವನ್ನು ಬಳಸಿಕೊಂಡ ಸೈಫ್ ಹಸನ್ ಅರ್ಧಶತಕ ಪೂರೈಸಿದರು.

ಇದಾದ ಬಳಿಕ 65, 67 ರನ್ ಗಳಿಸಿದ್ದ ವೇಳೆ ಶಿವಂ ದುಬೆ ಎರಡು ಬಾರಿ ಕ್ಯಾಚ್ ಕೈಬಿಟ್ಟರು. ಇನ್ನು 67 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೂಡ ಕ್ಯಾಚ್ ಕೈಚೆಲ್ಲಿದರು. ಈ ಮೂಲಕ ಟೀಮ್ ಇಂಡಿಯಾ ಫೀಲ್ಡರ್ಗಳು ಸೈಫ್ ಹಸನ್ಗೆ ಬರೋಬ್ಬರಿ 4 ಜೀವದಾನಗಳನ್ನು ನೀಡಿದ್ದಾರೆ.

ಇದರೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್ವೊಂದರಲ್ಲಿ ಅತೀ ಹೆಚ್ಚು ಬಾರಿ ಜೀವದಾನ ಪಡೆದ ಬ್ಯಾಟರ್ ಎಂಬ ದಾಖಲೆ ಸೈಫ್ ಹಸನ್ ಹೆಸರಿಗೆ ಸೇರ್ಪಡೆಯಾಗಿದೆ. ಇತ್ತ ಇನಿಂಗ್ಸ್ವೊಂದರಲ್ಲಿ ಒಬ್ಬನೇ ಬ್ಯಾಟರ್ನ ಅತೀ ಹೆಚ್ಚು ಕ್ಯಾಚ್ ಕೈಚೆಲ್ಲಿದ ಕಳಪೆ ದಾಖಲೆಯೊಂದು ಟೀಮ್ ಇಂಡಿಯಾ ಪಾಲಾಗಿದೆ.




