AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBL 12: ಒಟ್ಟು 414 ರನ್​: ರಣರೋಚಕ ಪಂದ್ಯದಲ್ಲಿ ಗೆದ್ದವರು ಯಾರು?

Big Bash League: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಪರ್ತ್​ ಸ್ಕಾಚರ್ಸ್ ಹಾಗೂ ಮೆಲ್ಬೋರ್ನ್​ ರೆನೆಗೇಡ್ಸ್ ನಡುವಣ ಮೂಖಾಮುಖಿಯಲ್ಲಿ ಮೂಡಿಬಂದಿರುವುದು ಬರೋಬ್ಬರಿ 414 ರನ್​ಗಳು.

TV9 Web
| Edited By: |

Updated on:Jan 22, 2023 | 6:07 PM

Share
ಬಿಗ್ ಬ್ಯಾಷ್ ಲೀಗ್​ನ 52ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಪರ್ತ್​ ಸ್ಕಾಚರ್ಸ್ ಹಾಗೂ ಮೆಲ್ಬೋರ್ನ್​ ರೆನೆಗೇಡ್ಸ್ ನಡುವಣ ಮೂಖಾಮುಖಿಯಲ್ಲಿ ಮೂಡಿಬಂದಿರುವುದು ಬರೋಬ್ಬರಿ 414 ರನ್​ಗಳು.

1 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್​ ರೆನೆಗೇಡ್ಸ್ ತಂಡದ ನಾಯಕ ಆರೋನ್ ಫಿಂಚ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ನಾಯಕ ನಿರ್ಧಾರ ತಪ್ಪು ಎಂಬುದನ್ನು ಪವರ್​ಪ್ಲೇನಲ್ಲೇ ಸ್ಕಾಚರ್ಸ್​ ಆರಂಭಿಕರು ನಿರೂಪಿಸಿದ್ದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟೀವಿ ಎಸ್ಕಿನಾಜಿ (54) ಹಾಗೂ ಬ್ಯಾಂಕ್ರಾಫ್ಟ್ ಮೊದಲ ವಿಕೆಟ್​ಗೆ 87 ರನ್​ಗಳ ಜೊತೆಯಾಟವಾಡಿದ್ದರು.

2 / 7
ಅದರಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದ ಕ್ಯಾಮರೋನ್ ಬ್ಯಾಂಕ್ರಾಫ್ಟ್​ ರೆನೆಗೇಡ್ಸ್ ಬೌಲರ್​ಗಳ ಬೆಂಡೆತ್ತಿ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ 6 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ನೊಂದಿಗೆ 50 ಎಸೆತಗಳಲ್ಲಿ ಅಜೇಯ 95 ರನ್ ಬಾರಿಸಿದರು. ಈ ಮೂಲಕ ನಿಗದಿತ 20 ಓವರ್​ಗಳಲ್ಲಿ ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 212 ಕ್ಕೆ ತಂದು ನಿಲ್ಲಿಸಿದರು.

3 / 7
213 ರನ್​ಗಳ ಬಿಗ್ ಟಾರ್ಗೆಟ್ ಪಡೆದ ಮೆಲ್ಬೋರ್ನ್​ ರೆನೆಗೇಡ್ಸ್ ತಂಡಕ್ಕೆ ಶಾನ್ ಮಾರ್ಷ್ ಉತ್ತಮ ಆರಂಭ ಒದಗಿಸಿದರು. ಆರಂಭದಿಂದಲೇ ತೂಫಾನ್ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಮಾರ್ಷ್ 34 ಎಸೆತಗಳಲ್ಲಿ 54 ರನ್​ಗಳಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

4 / 7
ಇದಾಗ್ಯೂ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ನಾಯಕ ಆರೋನ್ ಫಿಂಚ್ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಫಿಂಚ್ ತಂಡಕ್ಕೆ ಗೆಲುವು ತಂದುಕೊಡುವ ವಿಶ್ವಾಸ ಮೂಡಿಸಿದರು. ಕೊನೆಯ ಓವರ್​ನಲ್ಲಿ ರೆನೆಗೇಡ್ಸ್ ತಂಡಕ್ಕೆ 28 ರನ್​ಗಳ ಅವಶ್ಯಕತೆಯಿತ್ತು.

5 / 7
ಡೇವಿಡ್ ಪೇನ್ ಎಸೆದ ಕೊನೆಯ ಓವರ್​ನಲ್ಲಿ ಫಿಂಚ್ 1 ಸಿಕ್ಸ್ ಹಾಗೂ ಫೋರ್​ ಸಿಡಿಸಿದರು. ಮತ್ತೊಂದೆಡೆ ಪ್ರೆಸ್‌ವಿಡ್ಜ್ ಕೂಡ 1 ಸಿಕ್ಸ್ ಬಾರಿಸಿದರು. ಆದರೆ ಉಳಿದ ಮೂರು ಎಸೆತಗಳಲ್ಲಿ ಪೇನ್ ನೀಡಿದ್ದು ಕೇವಲ 2 ರನ್​ ಮಾತ್ರ. ಅಂದರೆ ಮೆಲ್ಬೋರ್ನ್​ ರೆನೆಗೇಡ್ಸ್ ತಂಡವು 20 ಓವರ್​ಗಳಲ್ಲಿ 202 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪರ್ತ್​ ಸ್ಕಾಚರ್ಸ್ ತಂಡವು 10 ರನ್​ಗಳ ರೋಚಕ ಜಯ ಸಾಧಿಸಿತು.

6 / 7
ಉಭಯ ತಂಡಗಳಿಂದ ಒಟ್ಟು 414 ರನ್​ ಮೂಡಿಬಂದ ಈ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ನೊಂದಿಗೆ ಅಜೇಯ 76 ರನ್ ಬಾರಿಸಿದ ರೆನೆಗೇಡ್ಸ್ ತಂಡದ ನಾಯಕ ಆರೋನ್ ಫಿಂಚ್ ವಿರೋಚಿತವಾಗಿ ಸೋಲೋಪ್ಪಿಕೊಂಡರು.

7 / 7

Published On - 6:07 pm, Sun, 22 January 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ