AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಸಿಐ ಕೇಂದ್ರ ಗುತ್ತಿಗೆ; ರೋಹಿತ್- ಕೊಹ್ಲಿಗೆ ಹಿಂಬಡ್ತಿ, ಯಾರ್ಯಾರಿಗೆ ಮುಂಬಡ್ತಿ?

Team India: 2024ರಲ್ಲಿ ಟೀಂ ಇಂಡಿಯಾದ ಆಟಗಾರರ ಪ್ರದರ್ಶನದ ಆಧಾರದ ಮೇಲೆ 2025ರ ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಹಿಂಬಡ್ತಿ ಸಿಗುವ ಸಾಧ್ಯತೆಯಿದ್ದರೆ, ಜೈಸ್ವಾಲ್ ಮತ್ತು ನಿತೀಶ್ ರೆಡ್ಡಿ ಅವರಿಗೆ ಬಡ್ತಿ ಸಿಗುವ ನಿರೀಕ್ಷೆಯಿದೆ. ಪಂತ್ ಮತ್ತು ಜಡೇಜಾ ಅವರ ಗ್ರೇಡ್ ಕೂಡ ಬದಲಾಗಬಹುದು. ಕೆಎಲ್ ರಾಹುಲ್ ಮತ್ತು ಗಿಲ್ ಅವರ ಪ್ರದರ್ಶನದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು.

ಪೃಥ್ವಿಶಂಕರ
|

Updated on: Jan 01, 2025 | 4:54 PM

Share
2024 ರಲ್ಲಿ ಟೀಂ ಇಂಡಿಯಾದ ಪ್ರದರ್ಶನ ಸಾಕಷ್ಟು ಏರಿಳಿತಗಳಿಂದ ಕೂಡಿತ್ತು. ಕಳೆದ ವರ್ಷ ತಂಡ ಟಿ20 ವಿಶ್ವಕಪ್ ಗೆದ್ದುಕೊಂಡಿದ್ದನ್ನು ಬಿಟ್ಟರೆ ಉಳಿದಂತೆ ಯಾವುದೇ ಗಮನಾರ್ಹ ಪ್ರದರ್ಶನ ನೀಡಲಿಲ್ಲ. ಒಂದೆಡೆ ತಂಡದ ಅನುಭವಿಗಳು ಕಳಪೆ ಫಾರ್ಮ್​ಗೆ ತುತ್ತಾದರೆ, ಮತ್ತೊಂದೆಡೆ ಯುವ ಆಟಗಾರರು ಗಮನಾರ್ಹ ಪ್ರದರ್ಶನ ನೀಡಿದರು.

1 / 13
ಹೀಗಾಗಿ 2025ರಲ್ಲಿ ಟೀಂ ಇಂಡಿಯಾದ ಅನುಭವಿಗಳಿಗೆ ಬಿಸಿಸಿಐ ದೊಡ್ಡ ಹೊಡೆತ ನೀಡುವ ಸಾಧ್ಯತೆಗಳಿದ್ದು, ಕೇಂದ್ರ ಗುತ್ತಿಗೆಯಲ್ಲಿ ಸಾಕಷ್ಟು ಬದಲಾವಣೆಗಳಾಗಬಹುದು ಎನ್ನಲಾಗುತ್ತಿದೆ. ಆ ಪ್ರಕಾರ ಪ್ರಸ್ತುತ ಎ+ ಗ್ರೇಡ್​ನಲ್ಲಿರುವ ಆಟಗಾರರು ಹಿಂಬಡ್ತಿ ಪಡೆಯುವ ಸಾಧ್ಯತೆ ಇದೆ. ಹಾಗೆಯೇ ಉತ್ತಮ ಪ್ರದರ್ಶನ ನೀಡಿದ ಜೈಸ್ವಾಲ್ ಮತ್ತು ನಿತೀಶ್ ರೆಡ್ಡಿಯಂತಹ ಯುವ ಆಟಗಾರರು ಮುಂಬಡ್ತಿ ಪಡೆಯುವ ಅವಕಾಶ ಹೊಂದಿದ್ದಾರೆ. ಅಷ್ಟಕ್ಕೂ ಕೇಂದ್ರ ಗುತ್ತಿಗೆಯಲ್ಲಿ ಯಾರ್ಯಾರಿಗೆ ಹಿಂಬಡ್ತಿ ಹಾಗೂ ಮುಂಬಡ್ತಿ ಸಿಗಬಹುದು ಎಂಬುದನ್ನು ನೋಡುವುದಾದರೆ..

2 / 13
2024 ರಲ್ಲಿ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಅವರ ಪ್ರದರ್ಶನ ತೀರ ಕಳಪೆಯಾಗಿತ್ತು. ರೋಹಿತ್ 2024 ರಲ್ಲಿ ತಂಡವನ್ನು ಟಿ20 ವಿಶ್ವಕಪ್‌ ಚಾಂಪಿಯನ್ ಮಾಡಿದನ್ನು ಬಿಟ್ಟರೆ, ಉಳಿದಂತೆ ಅವರ ಪ್ರದರ್ಶನ ಅಷ್ಟಕಷ್ಟೆ. ಹೀಗಾಗಿ ರೋಹಿತ್ ಅವರ ಕಳಪೆ ಪ್ರದರ್ಶನದಿಂದಾಗಿ ಬಿಸಿಸಿಐ ಅವರನ್ನು ಎ+ ಗ್ರೇಡ್‌ನಿಂದ ಎ ಗ್ರೇಡ್‌ಗೆ ಹಿಂಬಡ್ತಿ ನೀಡುವ ಸಾಧ್ಯತೆಯಿದೆ. ಸದ್ಯ ಎ+ ಗ್ರೇಡ್​ನಲ್ಲಿರವ ರೋಹಿತ್ ವಾರ್ಷಿಕವಾಗಿ 7 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಅವರು ಎ ಗ್ರೇಡ್‌ಗೆ ಹಿಂಬಡ್ತಿ ಪಡೆದರೆ ವಾರ್ಷಿಕ 5 ಕೋಟಿ ರೂ. ಸಂಭಾವನೆ ಪಡೆಯಬೇಕಾಗುತ್ತದೆ.

3 / 13
ವಿರಾಟ್ ಕೊಹ್ಲಿ ಸ್ಥಿತಿ ಕೂಡ ರೋಹಿತ್‌ಗಿಂತ ವಿಭಿನ್ನವಾಗಿಲ್ಲ. 2024 ರಲ್ಲಿ ವಿರಾಟ್ ಅವರ ಅಂಕಿಅಂಶಗಳು ಸಹ ರೋಹಿತ್ ಅವರ ಅಂಕಿಅಂಶಗಳನ್ನು ಹೋಲುತ್ತವೆ. ಹೀಗಾಗಿ ಪ್ರಸ್ತುತ ಎ+ ಗ್ರೇಡ್‌ನಲ್ಲಿರುವ ವಿರಾಟ್ ಕೊಹ್ಲಿ ಕೂಡ ಹಿಂಬಡ್ತಿ ಪಡೆಯಬಹುದಾಗಿದ್ದು, ವೇತನದ ವಿಚಾರದಲ್ಲಿ 2 ಕೋಟಿ ರೂ. ನಷ್ಟ ಅನುಭವಿಸಲಿದ್ದಾರೆ.

4 / 13
2024 ಯಶಸ್ವಿ ಜೈಸ್ವಾಲ್‌ಗೆ ಸ್ಮರಣೀಯ ವರ್ಷವಾಗಿದೆ. ಈ ವರ್ಷ ಟೆಸ್ಟ್‌ನಲ್ಲಿ 1478 ರನ್ ಕಲೆಹಾಕಿದ ಜೈಸ್ವಾಲ್ ಕಳೆದ ವರ್ಷ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಹೀಗಾಗಿ ಬಿಸಿಸಿಐ ಗುತ್ತಿಗೆಯಲ್ಲಿ ಜೈಸ್ವಾಲ್​ಗೆ ಮುಂಬಡ್ತಿ ಸಿಗುವ ಸಾಧ್ಯತೆ ಇದೆ. ಪ್ರಸ್ತುತ ಜೈಸ್ವಾಲ್ ಬಿಸಿಸಿಐನ ಕೇಂದ್ರ ಗುತ್ತಿಗೆಯ ಬಿ ಗ್ರೇಡ್‌ನಲ್ಲಿದ್ದು ವಾರ್ಷಿಕವಾಗಿ 3 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ.

5 / 13
ಇತ್ತೀಚಿಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿರುವ ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಿತೀಶ್ ಇದುವರೆಗೆ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿರುವುದರಿಂದ ಅವರನ್ನು ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿ ಸಿ-ಗ್ರೇಡ್‌ಗೆ ಸೇರಿಸಲಾಗಿದೆ. ಈ ವಿಭಾಗದ ಆಟಗಾರರು ವಾರ್ಷಿಕ 1 ಕೋಟಿ ರೂ. ವೇತನ ಪಡೆಯಲಿದ್ದಾರೆ ಆದಾಗ್ಯೂ, ರೆಡ್ಡಿ ಅವರ ಅತ್ಯುತ್ತಮ ಪ್ರದರ್ಶನವನ್ನು ಪರಿಗಣಿಸಿ, ಬಿಸಿಸಿಐ ಅವರ ಗ್ರೇಡ್ ಅನ್ನು ಹೆಚ್ಚಿಸಬಹುದು.

6 / 13
ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರ ಪ್ರದರ್ಶನ ಕೂಡ ಅಷ್ಟು ಉತ್ತಮವಾಗಿಲ್ಲ. ಪ್ರಸ್ತುತ ಆಸೀಸ್ ಪ್ರವಾಸದಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಪಂತ್ ಕೇವಲ 154 ರನ್ ಕಲೆಹಾಕಿದ್ದಾರೆ. ಹೀಗಾಗಿ ಪ್ರಸ್ತುತ ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿ ಬಿ ಗ್ರೇಡ್‌ನಲ್ಲಿರುವ ಪಂತ್​ಗೆ ಬಿಸಿಸಿಐ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದ್ದು ಈ ವರ್ಷ ಅವರಿಗೆ ಸಿ ಗ್ರೇಡ್‌ ನೀಡಬಹುದು.

7 / 13
ಆಸ್ಟ್ರೇಲಿಯ ಪ್ರವಾಸದಲ್ಲಿ ರವೀಂದ್ರ ಜಡೇಜಾ ಅವರ ಪ್ರದರ್ಶನ ಕೂಡ ವಿಶೇಷವಾಗಿಲ್ಲ. ಜಡೇಜಾ ಕೂಡ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದು, ಅವರ ಗ್ರೇಡ್ ಕೂಡ ಬದಲಾಗಬಹುದು. ಪ್ರಸ್ತುತ ಜಡೇಜಾ ಬಿಸಿಸಿಐನ ಎ+ ಗ್ರೇಡ್‌ ಆಟಗಾರನಾಗಿದ್ದು ಅವರಿಗೂ ಹಿಂಬಡ್ತಿ ಸಿಗುವ ಸಾಧ್ಯತೆಗಳಿವೆ.

8 / 13
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು 2024 ರಲ್ಲಿ ಆಡಿದ 9 ಪಂದ್ಯಗಳಲ್ಲಿ 493 ರನ್ ಗಳಿಸಿದ್ದಾರೆ. ಪ್ರಸ್ತುತ ಎ ಗ್ರೇಡ್​ನಲ್ಲಿರುವ ರಾಹುಲ್ ಬಗ್ಗೆ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

9 / 13
ಪ್ರಸ್ತುತ ಎ ಗ್ರೇಡ್‌ನಲ್ಲಿರುವ ಗಿಲ್ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಇಲ್ಲಿಯವರೆಗೆ ಕೇವಲ ಎರಡು ಪಂದ್ಯಗಳನ್ನು ಆಡಿದ್ದು, ಅವರ ಪ್ರದರ್ಶನ ಮಿಶ್ರವಾಗಿದೆ. ಆದರೆ ಒಟ್ಟಾರೆ 2024ರಲ್ಲಿ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಗಿಲ್​ಗೆ ಬಿಸಿಸಿಐ ಮತ್ತೆ ಎ ಗ್ರೇಡ್ ನೀಡುವ ಸಾಧ್ಯತೆಗಳಿವೆ.

10 / 13
ವಾಷಿಂಗ್ಟನ್ ಸುಂದರ್ ಆಲ್ ರೌಂಡರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಸಿ ದರ್ಜೆಯಲ್ಲಿರುವ ಸುಂದರ್, ಮುಂದಿನ ಕ್ರೇಂದ್ರ ಗುತ್ತಿಗೆಯಲ್ಲಿ ಬಿ ಗ್ರೇಡ್‌ ಪಡೆಯುವ ಸಾಧ್ಯತೆಗಳಿವೆ. ಇದಕ್ಕೆ ಪೂರಕವಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿಯೂ ಸುಂದರ್ ಉತ್ತಮ ಪ್ರದರ್ಶನ ನೀಡಿದ್ದಾರೆ.

11 / 13
ಸಂಜು ಸ್ಯಾಮ್ಸನ್ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದರು. ಅವರು 2024 ರಲ್ಲಿ ಎರಡೂ ತಂಡಗಳ ವಿರುದ್ಧ ಟಿ20 ನಲ್ಲಿ ಶತಕ ಬಾರಿಸಿದ್ದರು. ದೇಶೀಯ ಟೂರ್ನಿಗಳಲ್ಲಿಯೂ ಅವರ ದಾಖಲೆ ಅತ್ಯುತ್ತಮವಾಗಿತ್ತು. ಹೀಗಾಗಿ ಬಿಸಿಸಿಐ ಅವರನ್ನು ಸಿ ಗ್ರೇಡ್‌ನಿಂದ ಬಿ ಗ್ರೇಡ್‌ಗೆ ಕಳುಹಿಸುವ ಮೂಲಕ ಬಡ್ತಿ ನೀಡಬಹುದು.

12 / 13
2025ರಲ್ಲಿ ವೇಗದ ಬೌಲರ್ ಅರ್ಷದೀಪ್ ಸಿಂಗ್‌ಗೆ ಬಿಸಿಸಿಐ ಮುಂಬಡ್ತಿ ನೀಡುವುದು ಖಚಿತ. ಏಕೆಂದರೆ ಪ್ರತಿ ಸರಣಿ ಮತ್ತು ಪ್ರವಾಸದಲ್ಲಿ ಅರ್ಷದೀಪ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಟಿ20 ವಿಶ್ವಕಪ್‌ನಲ್ಲೂ ಅವರ ಪ್ರದರ್ಶನ  ಅಮೋಘವಾಗಿತ್ತು. ಅಂತಿಮವಾಗಿ ಅರ್ಷದೀಪ್ ಸಿಂಗ್‌ಗೆ ಬಿಸಿಸಿಐ ಯಾವ ಗ್ರೇಡ್ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

13 / 13
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!