AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಮುರಿದ ಬೆತ್ ಮೂನಿ

Beth Mooney Records: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸಾರ್ವಕಾಲಿಕ ದಾಖಲೆಯ 7ನೇ ಬಾರಿಗೆ ವಿಶ್ವವಿಜೇತರನ್ನಾಗಿ ಮಾಡುವಲ್ಲಿ ಆಸೀಸ್ ಆರಂಭಿಕ ಬ್ಯಾಟರ್ ಬೆತ್ ಮೂನಿ ಪ್ರಮುಖ ಪಾತ್ರವಹಿಸಿದ್ದಾರೆ. ಟೂರ್ನಿಯುದ್ದಕ್ಕೂ ಪ್ರಚಂಡ ಪ್ರದರ್ಶನ ನೀಡಿದ ಮೂನಿ 7 ಪಂದ್ಯಗಳಿಂದ 47.60 ರ ಸರಾಸರಿಯಲ್ಲಿ ಒಟ್ಟು 238 ರನ್ ಕಲೆಹಾಕಿದ್ದಾರೆ.

ಝಾಹಿರ್ ಯೂಸುಫ್
|

Updated on: Jul 06, 2026 | 9:38 AM

Share
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಬೆತ್ ಮೂನಿ (Beth Mooney) ಜಾಗತಿಕ ಕ್ರಿಕೆಟ್‌ನಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಐತಿಹಾಸಿಕ ದಾಖಲೆಯೊಂದನ್ನು ಬರೆದಿದ್ದಾರೆ. ಅದು ಸಹ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ. (PC: Gettyimages)

1 / 5
ಭಾನುವಾರ (ಜುಲೈ 5, 2026) ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ ಬೆತ್ ಮೂನಿ 49 ಎಸೆತಗಳಲ್ಲಿ 10 ಫೋರ್​ಗಳೊಂದಿಗೆ 64 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ಮೂನಿ, ಪುರುಷರ ಮತ್ತು ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಟಿ20 ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಮೂರು ಬಾರಿ ಹಾಫ್ ಸೆಂಚುರಿ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. (PC: Gettyimages)

2 / 5
ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ  2014ರ ಟಿ20 ವಿಶ್ವಕಪ್ ಫೈನಲ್​ನಲ್ಲಿ 77 ರನ್ ಬಾರಿಸಿದ್ದರು. ಹಾಗೆಯೇ 2024 ರಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಮ್ಯಾಚ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ 76 ರನ್ ಕಲೆಹಾಕಿದ್ದರು. ಈ ಮೂಲಕ ಟಿ20 ವಿಶ್ವಕಪ್ ಫೈನಲ್​ಗಳಲ್ಲಿ 2 ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಬರೆದಿದ್ದರು. (PC: Gettyimages)

3 / 5
ಇದೀಗ ಈ ವಿಶ್ವ ದಾಖಲೆಯನ್ನು ಬೆತ್ ಮೂನಿ ಮುರಿದಿದ್ದಾರೆ. 2020ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ 78 ರನ್ ಬಾರಿಸಿದ್ದ ಮೂನಿ, 2023ರ ಟಿ20 ವರ್ಲ್ಡ್​ಕಪ್ ಫೈನಲ್​ನಲ್ಲಿ 74* ಸಿಡಿಸಿದ್ದರು. ಇದೀಗ 2026ರ ಟಿ20 ವಿಶ್ವಕಪ್ ಫೈನಲ್​ನಲ್ಲಿ 64 ರನ್ ಗಳಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್​ ಫೈನಲ್​ನಲ್ಲಿ 3 ಅರ್ಧಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. (PC: Gettyimages)

4 / 5
ಬೆತ್ ಮೂನಿ ಅವರ ಈ ಭರ್ಜರಿ ಪ್ರದರ್ಶನದ ಫಲವಾಗಿ ಫೈನಲ್ ಪಂದ್ಯದ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಹಾಗೆಯೇ ಈ ಬಾರಿಯ ವಿಶ್ವಕಪ್​ನಲ್ಲಿ 7 ಇನಿಂಗ್ಸ್​ಗಳಿಂದ 238 ರನ್ ಕಲೆಹಾಕುವ ಮೂಲಕ 'ಸರಣಿ ಶ್ರೇಷ್ಠ'  ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡರು. (PC: Gettyimages)

5 / 5
Follow Us
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!

SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು

ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ

ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು

ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು

ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್

ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ

ರಾಮ ಮಂದಿರದ ದೇಣಿಗೆ ಲೂಟಿ: ಕದ್ದ ಹಣದಲ್ಲಿ ಪ್ರೇಮ ಪುರಾಣ, ಲವರ್​ಗೆ ಗಿಫ್ಟ್!

ಕೆ ಸುಧಾಕರ್‌ ಜೊತೆಗಿನ ವೈಮನಸಿನ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ಆಯ್ತಾ?

ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ
ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ