- TV9 Kannada Photo gallery Cricket photos Brian Lara enjoying Wimbledon with his friend Ysabel Bisnath
ಬ್ರಿಯಾನ್ ಲಾರಾ ಜೊತೆ ಕಾಣಿಸಿಕೊಂಡ ಯುವತಿ ಯಾರು ಗೊತ್ತಾ?
Wimbledon 2026: ವಿಂಬಲ್ಡನ್ ಸೆಮಿಫೈನ್ನಲ್ಲಿ ಯುವ ತಾರೆ ಯಾನಿಕ್ ಸಿನ್ನರ್, ನೊವಾಕ್ ಜೊಕೊವಿಚ್ಗೆ ಸೋಲುಣಿಸಿದ್ದಾರೆ. ಸೆಂಟ್ರಲ್ ಕೋರ್ಟ್ನಲ್ಲಿ ನಡೆದ ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿನ್ನರ್, 6-4, 6-4, 6-4 ರ ನೇರ ಸೆಟ್‌ಗಳಿಂದ ಜೊಕೊವಿಚ್ ಅವರನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Updated on: Jul 11, 2026 | 1:57 PM

ಲಂಡನ್ನ ಸೆಂಟರ್ ಕೋರ್ಟ್ನಲ್ಲಿ ನಡೆದ ನೊವಾಕ್ ಜೊಕೊವಿಕ್ ಮತ್ತು ಯಾನಿಕ್ ಸಿನ್ನರ್ ನಡುವಿನ 2026 ರ ವಿಂಬಲ್ಡನ್ ಸೆಮಿಫೈನಲ್ ಹಣಾಹಣಿಯನ್ನು ವೀಕ್ಷಿಸಲು ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಹಾಜರಿದ್ದರು. (PC-GETTY IMAGES)

ಲಾರಾ ಮತ್ತು ಸಚಿನ್ ತುಂಬಾ ಒಳ್ಳೆಯ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಪಂದ್ಯದ ವೇಳೆ ಇಬ್ಬರು ದಿಗ್ಗಜರು ಬೇರೆ ಬೇರೆ ಆಸನಗಳಲ್ಲಿ ಕುಳಿತಿದ್ದರು. ಸಚಿನ್ ತನ್ನ ಪತ್ನಿ ಅಂಜಲಿಯೊಂದಿಗೆ ಕಾಣಿಸಿಕೊಂಡರೆ, ಬ್ರಿಯಾನ್ ಲಾರಾ ಅಪರಿಚಿತ ಮಹಿಳೆಯೊಂದಿಗೆ ಕುಳಿತಿರುವುದು ಕಂಡುಬಂದಿತ್ತು. (PC-GETTY IMAGES).

ಇದರ ಬೆನ್ನಲ್ಲೇ ಬ್ರಿಯಾನ್ ಲಾರಾ ಜೊತೆಗಿರುವ ಯುವತಿ ಯಾರು ಎಂಬ ಹುಡುಕಾಟ ಶುರುವಾಗಿತ್ತು. ಇದೀಗ ಈ ಯುವತಿ ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಕೆಯ ಹೆಸರು ವೈಸಬೆಲ್ ಬಿಸ್ನಾಥ್. ಅವರು ಲಾರಾಳ ತಾಯ್ನಾಡು ಟ್ರಿನಿಡಾಡ್-ಟೊಬಾಗೊದವರು. (PC-GETTY IMAGES)

ವೈಸಬೆಲ್ ಬಿಸ್ನಾಥ್ 2023ರಲ್ಲಿ ಮಿಸ್ ವರ್ಲ್ಡ್ ಟ್ರಿನಿಡಾಡ್-ಟೊಬಾಗೊ ಪ್ರಶಸ್ತಿಯನ್ನು ಗೆದ್ದಿದ್ದರು. ಅವರು ಪ್ರಸ್ತುತ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಲಾರಾ ಹಾಗೂ ವೈಸಬೆಲ್ ಉತ್ತಮ ಫ್ರೆಂಡ್ಸ್. ಹೀಗಾಗಿಯೇ ಇಬ್ಬರು ಜೊತೆಯಾಗಿ ವಿಂಬಲ್ಡನ್ ಸೆಮಿಫೈನಲ್ ವೀಕ್ಷಿಸಲು ಆಗಮಿಸಿದ್ದರು. (PC-GETTY IMAGES)

ಇನ್ನು ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಅವರಲ್ಲದೆ, ಭಾರತದ ಏಕದಿನ ಮತ್ತು ಟೆಸ್ಟ್ ನಾಯಕ ಶುಭ್ಮನ್ ಗಿಲ್ ಕೂಡ ವಿಂಬಲ್ಡನ್ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದರು. ಈ ವೇಳೆ ಅವರು ಸಚಿನ್ ದಂಪತಿ ಜೊತೆ ಕಾಣಿಸಿಕೊಂಡಿರುವುದು ವಿಶೇಷ. (PC-GETTY IMAGES)




