AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Champions Trophy 2025: ಒಂದೇ ಒಂದು ಪಂದ್ಯವಾಡದ ಮೂವರು ಆಟಗಾರರು ಇವರೇ

Champions Trophy 2025: ಚಾಂಪಿಯನ್ಸ್ ಟ್ರೋಫಿ 2025 ಕ್ಕಾಗಿ ಟೀಮ್ ಇಂಡಿಯಾ 15 ಸದಸ್ಯರ ಬಲಿಷ್ಠ ಬಳಗವನ್ನು ರೂಪಿಸಿತ್ತು. ಈ ಹದಿನೈದು ಆಟಗಾರರಲ್ಲಿ 12 ಪ್ಲೇಯರ್ಸ್ ಕಣಕ್ಕಿಳಿದಿದ್ದಾರೆ. ಇದಾಗ್ಯೂ ಮೂವರು ಆಟಗಾರರಿಗೆ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡಲು ಅವಕಾಶ ಸಿಕ್ಕಿಲ್ಲ. ಆ ಆಟಗಾರರು ಯಾರೆಂದರೆ.,..

ಝಾಹಿರ್ ಯೂಸುಫ್
|

Updated on:Mar 10, 2025 | 10:05 AM

Share
ಬರೋಬ್ಬರಿ 8 ವರ್ಷಗಳ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 4 ವಿಕೆಟ್​ಗಳಿಂದ ಮಣಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ.

1 / 6
ಈ ಗೆಲುವಿನೊಂದಿಗೆ 12 ವರ್ಷಗಳ ಬಳಿಕ ಭಾರತ ತಂಡ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ವಿಶೇಷ ಎಂದರೆ ಈ ಬಾರಿಯ ಟೂರ್ನಿಗಾಗಿ ಟೀಮ್ ಇಂಡಿಯಾ 15 ಸದಸ್ಯರ ಬಲಿಷ್ಠ ಬಳಗವನ್ನು ರೂಪಿಸಿಕೊಂಡಿತ್ತು. ಇದಾಗ್ಯೂ ಮೂವರು ಆಟಗಾರರಿಗೆ ಒಂದೇ ಒಂದು ಪಂದ್ಯವಾಡಲು ಅವಕಾಶ ಸಿಕ್ಕಿರಲಿಲ್ಲ. ಅವರೆಂದರೆ....

2 / 6
ರಿಷಭ್ ಪಂತ್: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ರಿಷಭ್ ಪಂತ್ ಅವರನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ ಕಾರಣ ಪಂತ್​ಗೆ ಒಂದೇ ಒಂದು ಚಾನ್ಸ್ ಸಿಕ್ಕಿರಲಿಲ್ಲ.

3 / 6
ವಾಷಿಂಗ್ಟನ್ ಸುಂದರ್: ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ವಾಷಿಂಗ್ಟನ್ ಸುಂದರ್ ಸ್ಪಿನ್ ಆಲ್​ರೌಂಡರ್ ಆಗಿ ಆಯ್ಕೆಯಾಗಿದ್ದರು. ಆದರೆ ಟೂರ್ನಿಯುದ್ದಕ್ಕೂ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡಿದ ಕಾರಣ ಸುಂದರ್​ಗೆ ಅವಕಾಶ ಸಿಕ್ಕಿಲ್ಲ.

4 / 6
ಅರ್ಷದೀಪ್ ಸಿಂಗ್: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ಕಣಕ್ಕಿಳಿಯುವ ನಿರೀಕ್ಷೆಯಿತ್ತು. ಆದರೆ ಭಾರತ ತಂಡವು ಸ್ಪಿನ್ ಅಸ್ತ್ರಗಳೊಂದಿಗೆ ಯೋಜನೆ ರೂಪಿಸಿದ್ದರಿಂದ ಅರ್ಷದೀಪ್ ಸಿಂಗ್ ಇಡೀ ಟೂರ್ನಿಯಲ್ಲಿ ಬೆಂಚ್ ಕಾಯಬೇಕಾಯಿತು.

5 / 6
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.

6 / 6

Published On - 10:03 am, Mon, 10 March 25

Follow Us
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!

ನಾರಿ ಶಕ್ತಿ ವಂದನ ಸಮ್ಮೇಳನ, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ

ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!

ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ

ಚಹಾಲ್ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ ಉಲ್ಲು ನಟಿ ತಾನಿಯಾ

ಡಿಕೆಡಿ ಟ್ರೋಫಿ ಎತ್ತಿದ್ದ ಸಿದ್ದೇಗೌಡ-ದೀಶಲ್; ಸಿಕ್ಕ ಹಣ ಎಷ್ಟು?

VIDEO: ದಿಢೀರ್ ಚೆಂಡು ಬದಲಿಸಿದ ಅಂಪೈರ್​: ಟಿಮ್ ಡೇವಿಡ್​ಗೆ ಡೌಟ್..!

ಊಟದ ಬಳಿಕ ನೀವೇ ತಟ್ಟೆ ತೆಗೆಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?