T20 World Cup 2026: ಪಾಕ್ ವಿರುದ್ಧ ಅಗ್ರಸ್ಥಾನಕ್ಕೇರುವ ಸನಿಹದಲ್ಲಿ ದೀಪ್ತಿ ಶರ್ಮಾ

Updated on: Jun 14, 2026 | 4:50 PM

Deepti Sharma Eyes Wicket Record: 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವು ದೀಪ್ತಿ ಶರ್ಮಾ ಅವರಿಗೆ ಮಹತ್ವದ ದಾಖಲೆ ನಿರ್ಮಿಸುವ ಅವಕಾಶ ನೀಡಲಿದೆ. ಪ್ರಸ್ತುತ 9 ವಿಕೆಟ್‌ಗಳನ್ನು ಹೊಂದಿರುವ ದೀಪ್ತಿ, ಇನ್ನೂ 2 ವಿಕೆಟ್‌ ಪಡೆದರೆ, ಏಕ್ತಾ ಬಿಶ್ತ್ ಮತ್ತು ನಿದಾ ದಾರ್ ಅವರ 10 ವಿಕೆಟ್‌ಗಳ ದಾಖಲೆಯನ್ನು ಮೀರಿಸಿ ಉಭಯ ತಂಡಗಳ ನಡುವೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ.

1 / 5
2026 ರ ಮಹಿಳಾ ಟಿ20 ವಿಶ್ವಕಪ್​ನ 6ನೇ ಪಂದ್ಯ ಭಾರತ ಮಹಿಳಾ ತಂಡ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಟಿ20 ಕ್ರಿಕೆಟ್​ನಲ್ಲಿ ಮಹತ್ವದ ಮೈಲಿಗಲ್ಲು ದಾಟುವ ಅವಕಾಶ ಹೊಂದಿದ್ದಾರೆ (PC-PTI).

2 / 5
ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ಟಿ20 ಮುಖಾಮುಖಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಭಾರತದ ಏಕ್ತಾ ಬಿಶ್ತ್ ಮತ್ತು ಪಾಕಿಸ್ತಾನದ ನಿದಾ ದಾರ್ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ. ಇವರಿಬ್ಬರು ಉಭಯ ತಂಡಗಳ ಮುಖಾಮುಖಿಯಲ್ಲಿ ತಲಾ 10 ವಿಕೆಟ್​ಗಳನ್ನು ಪಡೆದಿದ್ದಾರೆ (PC-PTI).

3 / 5
ಇದೀಗ ದೀಪ್ತಿ ಶರ್ಮಾ ಈ ಇಬ್ಬರನ್ನು ಮೀರಿಸುವ ಅವಕಾಶವನ್ನು ಹೊಂದಿದ್ದಾರೆ. ದೀಪ್ತಿ ಶರ್ಮಾ ಪ್ರಸ್ತುತ ಒಂಬತ್ತು ವಿಕೆಟ್‌ಗಳನ್ನು ಹೊಂದಿದ್ದಾರೆ. ಪಾಕಿಸ್ತಾನದ ಸನಾ ಮಿರ್ ಕೂಡ ಒಂಬತ್ತು ವಿಕೆಟ್‌ಗಳನ್ನು ಹೊಂದಿದ್ದಾರೆ. ಸನಾ ಈಗ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ (PC-PTI).

4 / 5
ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ ನಡೆದಿರುವ ಏಳು ಟಿ20 ಪಂದ್ಯಗಳಲ್ಲಿ ದೀಪ್ತಿ ಶರ್ಮಾ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2026 ರ ಮಹಿಳಾ ಟಿ 20 ವಿಶ್ವಕಪ್‌ನಲ್ಲಿ ದೀಪ್ತಿ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ಎರಡೂ ದೇಶಗಳ ನಡುವಿನ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ (PC-PTI).

5 / 5
ಭಾರತದ ಸಂಭಾವ್ಯ ಪ್ಲೇಯಿಂಗ್ 11: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್‌ಕೀಪರ್), ದೀಪ್ತಿ ಶರ್ಮಾ, ಶ್ರೇಯಾಂಕ ಪಾಟೀಲ್, ಶ್ರೀ ಚರಣಿ, ಕ್ರಾಂತಿ ಗೌಡ್, ನಂದಿನಿ ಶರ್ಮಾ, ರೇಣುಕಾ ಸಿಂಗ್ ಠಾಕೂರ್ (PC-PTI).

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us