- Kannada News Photo gallery Cricket photos Gautam Gambhir: First to Win ICC Trophies as Player and Coach After T20 World Cup 2026 Triumph
ಈ ಸಾಧನೆ ಮಾಡಿದ ಮೊದಲ ಭಾರತೀಯ ಕೋಚ್; ಇತಿಹಾಸ ನಿರ್ಮಿಸಿದ ಗೌತಮ್ ಗಂಭೀರ್
Gautam Gambhir: ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಆಗಿ 2026 ರ ಟಿ20 ವಿಶ್ವಕಪ್ ಮತ್ತು 2025 ರ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿದ್ದಾರೆ. ಯುವ ಪಡೆಯನ್ನು ವಿಶ್ವ ಚಾಂಪಿಯನ್ ಮಾಡುವುದರಲ್ಲಿ ಅವರ ಪಾತ್ರ ಪ್ರಮುಖ. ಆಟಗಾರನಾಗಿ (2007 ಟಿ20, 2011 ಏಕದಿನ ವಿಶ್ವಕಪ್) ಮತ್ತು ಕೋಚ್ ಆಗಿ ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಗಂಭೀರ್ ಅವರ ಅನನ್ಯ ಸಾಧನೆಯಾಗಿದೆ.
Updated on: Mar 09, 2026 | 5:39 PM

ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ತಂಡದ ಈ ಐತಿಹಾಸಿದ ಸಾಧನೆಯಲ್ಲಿ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಪಾತ್ರವೂ ಪ್ರಮುಖವಾಗಿದೆ. ಯುವಪಡೆಯನ್ನು ಬಲಿಷ್ಠಗೊಳಿಸಿ ಟಿ20 ವಿಶ್ವಕಪ್ ಚಾಂಪಿಯನ್ ಮಾಡುವುದಕ್ಕೆ ಗಂಭೀರ್ ಸಾಕಷ್ಟು ಶ್ರಮಿಸಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

2024 ರ ಟಿ20 ವಿಶ್ವಕಪ್ ಬಳಿಕ ದಿಗ್ಗಜರಾದ ರೋಹಿತ್, ಕೊಹ್ಲಿ, ಜಡೇಜಾ ಈ ಮಾದರಿಗೆ ವಿದಾಯ ಹೇಳಿದರು. ಆ ಬಳಿಕ ಯುವ ಆಟಗಾರರನ್ನು ವಿಶ್ವಕಪ್ಗೆ ಸಿದ್ಧಪಡಿಸುವ ಜವಾಬ್ದಾರಿ ಹೊತ್ತ ಗಂಭೀರ್, ಅದರ ಫಲಿತಾಂಶವನ್ನು ವಿಶ್ವಕಪ್ ಗೆಲ್ಲುವ ಮೂಲಕ ತೋರಿಸಿದ್ದಾರೆ. ಈ ಗೆಲುವಿನೊಂದಿಗೆ ಗಂಭೀರ್ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಮಾಡದ ಸಾಧನೆ ಮಾಡಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ಮೊದಲ ಮುಖ್ಯ ಕೋಚ್ ಕೂಡ ಆಗಿದ್ದಾರೆ.

ವಾಸ್ತವವಾಗಿ ಟೀಂ ಇಂಡಿಯಾದ ಮುಖ್ಯ ಕೋಚ್ ಆದ ನಂತರ ಗೌತಮ್ ಗಂಭೀರ್ ಎರಡು ಐಸಿಸಿ ಪ್ರಶಸ್ತಿಗಳನ್ನು ದೇಶಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಗೌತಮ್ ಗಂಭೀರ್ ಅವರಿಗೆ ಎರಡನೇ ಐಸಿಸಿ ಪ್ರಶಸ್ತಿಯನ್ನು ತಂದುಕೊಟ್ಟಿದೆ.

ಟಿ20 ವಿಶ್ವಕಪ್ಗೂ ಮುನ್ನ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು. ಅದು ಕೋಚ್ ಆಗಿ ಗಂಭೀರ್ ಅವರ ಮೊದಲ ಐಸಿಸಿ ಪ್ರಶಸ್ತಿಯಾಗಿತ್ತು. ಇದೀಗ 2026 ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುಖ್ಯ ಕೋಚ್ ಆಗಿ ಮುನ್ನಡೆಸುವ ಮೂಲಕ, ಗೌತಮ್ ಗಂಭೀರ್ ಆಟಗಾರ ಮತ್ತು ಕೋಚ್ ಆಗಿ ಎರಡು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಟಗಾರನಾಗಿ ಗೌತಮ್ ಗಂಭೀರ್ 2007 ರ ಟಿ20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ ಗೆಲ್ಲುವಲ್ಲೊ ಪ್ರಮುಖ ಪಾತ್ರವಹಿಸಿದ್ದರು. ಈ ಎರಡೂ ಫೈನಲ್ಗಳಲ್ಲೂ ಗಂಭೀರ್ ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಇದೀಗ ಗಂಭೀರ್ ಮುಖ್ಯ ಕೋಚ್ ಆಗಿ ತಂಡವನ್ನು ಎರಡೆರಡು ಬಾರಿ ಚಾಂಪಿಯನ್ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.
