AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಭ್​ಮನ್ ಗಿಲ್ ನಾಯಕತ್ವ ಸೋಲಿನೊಂದಿಗೆ ಆರಂಭವಾಗುತ್ತದೆ; ಭವಿಷ್ಯ ನುಡಿದ ಮಾಜಿ ನಾಯಕ

Shubman Gill Captaincy: ಭಾರತೀಯ ಕ್ರಿಕೆಟ್‌ನಲ್ಲಿ ಶುಭ್​ಮನ್ ಗಿಲ್ ಯುಗ ಆರಂಭವಾಗಿದೆ, ಆಸ್ಟ್ರೇಲಿಯಾ ಪ್ರವಾಸಕ್ಕೆ ಏಕದಿನ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಅಕ್ಟೋಬರ್ 19 ರಿಂದ ಆರಂಭವಾಗುವ ಈ ಪ್ರವಾಸದಲ್ಲಿ ಗಿಲ್ ಭಾರತವನ್ನು ಗೆಲುವಿನತ್ತ ಕೊಂಡೊಯ್ಯುವರೇ ಎಂಬುದು ಪ್ರಶ್ನೆ. ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್ ಫಿಂಚ್, ಗಿಲ್‌ಗೆ ಸೋಲಿನ ಆರಂಭ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಗಿಲ್ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬ ಕುತೂಹಲ ಹೆಚ್ಚಿದೆ.

ಪೃಥ್ವಿಶಂಕರ
|

Updated on: Oct 06, 2025 | 9:29 PM

Share
ಭಾರತೀಯ ಕ್ರಿಕೆಟ್‌ನಲ್ಲಿ ಶುಭ್​ಮನ್ ಗಿಲ್ ಯುಗ ಅಧಿಕೃತವಾಗಿ ಆರಂಭವಾಗಿದೆ. ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಟೆಸ್ಟ್ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದ ಗಿಲ್, ಇದೀಗ ಆಸ್ಟ್ರೇಲಿಯಾ ಪ್ರವಾಸಕ್ಕೆ ಏಕದಿನ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಹಾಗೆಯೇ ಗಿಲ್​ಗೆ ಟಿ20 ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ.

1 / 7
ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಿಲ್ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆಯೇ? ಎಂಬುದು ಕೋಟ್ಯಾಂತರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುಂಚೆಯೇ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಗಿಲ್ ನಾಯಕತ್ವದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

2 / 7
ಅಕ್ಟೋಬರ್ 19 ರಂದು ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಆರಂಭವಾಗಲಿದೆ. ಈ ಪ್ರವಾಸವು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಆರಂಭವಾಗಲಿದ್ದು, ನಂತರ ಟಿ20 ಸರಣಿ ನಡೆಯಲಿದೆ. ಈ ಸರಣಿಯೊಂದಿಗೆ ಗಿಲ್ ಅವರ ಏಕದಿನ ನಾಯಕನ ಅಧಿಕಾರಾವಧಿಯೂ ಪ್ರಾರಂಭವಾಗುತ್ತದೆ. ಆದ್ದರಿಂದ, ರೋಹಿತ್ ಮತ್ತು ವಿರಾಟ್ ಅವರ ಪ್ರದರ್ಶನದ ಜೊತೆಗೆ, ಗಿಲ್ ನಾಯಕತ್ವದಲ್ಲಿ ಭಾರತೀಯ ತಂಡದ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು.

3 / 7
ಆದಾಗ್ಯೂ, ಸರಣಿ ಆರಂಭವಾಗುವ ಮೊದಲೇ ಆಸ್ಟ್ರೇಲಿಯಾದ ಮಾಜಿ ಆಟಗಾರರು ಈಗಾಗಲೇ ತಮ್ಮ ಹೇಳಿಕೆಗಳಿಂದ ಟೀಂ ಇಂಡಿಯಾವನ್ನು ಲೇವಡಿ ಮಾಡಲು ಆರಂಭಿಸಿದ್ದಾರೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಒಳಗೊಂಡ ಜಾಹೀರಾತು ಈಗಾಗಲೇ ಪ್ರಸಾರವಾಗುತ್ತಿದೆ, ಅದರಲ್ಲಿ ಅವರು ರೋಹಿತ್ ಮತ್ತು ವಿರಾಟ್ ಅವರನ್ನು ಟೀಕಿಸಿದ್ದಾರೆ.

4 / 7
ಇದರ ಜೊತೆಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್ ಫಿಂಚ್, ನಾಯಕನಾಗಿ ಗಿಲ್‌ಗೆ ಸೋಲಿನ ಆರಂಭ ಸಿಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ಐಸಿಸಿಗೆ ನೀಡಿದ ಸಂದರ್ಶನದಲ್ಲಿ ಫಿಂಚ್, ‘ಇದು ಉತ್ತಮ ಸರಣಿಯಾಗಲಿದೆ. ಭಾರತದ ವಿರುದ್ಧದ ಸರಣಿಯಿಂದರೇ ಅದಕ್ಕಿರುವ ಮಹತ್ವವೇ ಬೇರೆ. ಹಾಗೆಯೇ ಈ ಸರಣಿಯಲ್ಲಿ ವಿರಾಟ್ ಆಡುತ್ತಿದ್ದಾರೆ, ಅವರು ಯಾವಾಗಲೂ ಆಸ್ಟ್ರೇಲಿಯಾ ವಿರುದ್ಧ ಉತ್ತಮವಾಗಿ ಆಡುತ್ತಾರೆ.

5 / 7
ನೀವು ಕಾಗದದ ಮೇಲೆ ನೋಡಿದಾಗಲೆಲ್ಲಾ ಇದು ಯಾವಾಗಲೂ ಉತ್ತಮ ಸ್ಪರ್ಧೆಯಂತೆ ಕಾಣುತ್ತದೆ. ಆದರೆ ಆಸ್ಟ್ರೇಲಿಯಾ ಸರಣಿಯನ್ನು 2-1 ಅಂತರದಿಂದ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ಆದಾಗ್ಯೂ, ಇದು ಸುಲಭವಲ್ಲ ಏಕೆಂದರೆ ಭಾರತ ಬಲಿಷ್ಠ ತಂಡವಾಗಿದೆ. ಹೀಗಾಗಿ ಇದು ಉತ್ತಮ ಸರಣಿಯಾಗಲಿದೆ ಎಂದಿದ್ದಾರೆ.

6 / 7
ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಏಕದಿನ ಸರಣಿ ಆರಂಭವಾಗಲಿದ್ದು, ಮುಂದಿನ ಪಂದ್ಯ ಅಕ್ಟೋಬರ್ 23 ರಂದು ಅಡಿಲೇಡ್‌ನಲ್ಲಿ ನಡೆಯಲಿದೆ. ಸರಣಿಯ ಅಂತಿಮ ಪಂದ್ಯ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ನಡೆಯಲಿದೆ. 2019 ರ ನಂತರ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿಯನ್ನು ಆಡುತ್ತಿರುವುದು ಇದೇ ಮೊದಲು. ಆ ಸಮಯದಲ್ಲಿ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕರಾಗಿದ್ದರು. ಶುಭ್​ಮನ್ ಗಿಲ್ ಆ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದರು.

7 / 7
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?

ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ

ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು

ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ

ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ

ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?

ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!

ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ

ಬೆಂಗಳೂರಿನತ್ತ ಡಿಕೆ ಶಿವಕುಮಾರ್: ದಿಲ್ಲಿಗೆ ಹೋದ ಕೆಲಸ ಏನಾಯ್ತು?