AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಐಪಿಎಲ್ ಆರಂಭಕ್ಕೂ ಮುನ್ನ ಹೊಸ ಮಾಲೀಕನ ಕೈಸೇರಿದ ಚಾಂಪಿಯನ್ ತಂಡ

Gujarat Titans IPL Ownership Change: ತನ್ನ ಚೊಚ್ಚಲ ಆವೃತ್ತಿಯಲ್ಲಿಯೇ ಐಪಿಎಲ್ ಚಾಂಪಿಯನ್ ಆಗಿದ್ದ ಗುಜರಾತ್ ಟೈಟನ್ಸ್ ತಂಡದ ಮಾಲೀಕತ್ವದಲ್ಲಿ ಬದಲಾವಣೆಯಾಗಿದೆ. ಸಿವಿಸಿ ಕ್ಯಾಪಿಟಲ್ಸ್ ನಿಂದ ಟೊರೆಂಟ್ ಗ್ರೂಪ್ ಶೇ. 67 ರಷ್ಟು ಪಾಲನ್ನು ಖರೀದಿಸಿದೆ. ಈ ಒಪ್ಪಂದದ ಮೊತ್ತವನ್ನು ಬಹಿರಂಗಪಡಿಸಿಲ್ಲ. ಆದರೂ, ತಂಡದ ನಿರ್ವಹಣೆ, ನಾಯಕ, ಹಾಗೂ ಕೋಚ್ ಯಥಾವತ್ತಾಗಿ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ಪೃಥ್ವಿಶಂಕರ
|

Updated on: Mar 17, 2025 | 8:59 PM

Share
ಐಪಿಎಲ್ ಆರಂಭಕ್ಕೂ ಮುನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್​ ಪಟ್ಟಕ್ಕೇರಿದ್ದ ಗುಜರಾತ್ ಟೈಟನ್ಸ್ ತಂಡದ ಮಾಲೀಕರು ಬದಲಾಗಿದ್ದಾರೆ. ವಾಸ್ತವವಾಗಿ ಕಳೆದು ಕೆಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಯಂತೆ ಇದೀಗ ಗುಜರಾತ್ ಟೈಟನ್ಸ್ ತಂಡ ಟೊರೆಂಟ್ ಗ್ರೂಪ್​ ತೆಕ್ಕೆಗೆ ಸೇರಿದೆ. ಇದುವರೆಗೆ ಸಿವಿಸಿ ಕ್ಯಾಪಿಟಲ್ಸ್ ಒಡೆತನದಲ್ಲಿದ್ದ ಗುಜರಾತ್ ಟೈಟನ್ಸ್ ಫ್ರಾಂಚೈಸಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿರುವುದಾಗಿ ಟೊರೆಂಟ್ ಗ್ರೂಪ್ ತಿಳಿಸಿದೆ.

1 / 5
ಅಹಮದಾಬಾದ್ ಮೂಲದ ಟೊರೆಂಟ್ ಗ್ರೂಪ್ ಭಾರತದ ವಿದ್ಯುತ್ ಮತ್ತು ಔಷಧ ವಲಯಗಳಲ್ಲಿ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಆದಾಗ್ಯೂ, ಈ ಕಂಪನಿಯು ಗುಜರಾತ್ ಫ್ರಾಂಚೈಸಿಯ 100 ಪ್ರತಿಶತ ಪಾಲನ್ನು ಖರೀದಿಸಿಲ್ಲ. ವರದಿಯ ಪ್ರಕಾರ, ಸಿವಿಸಿ ಕ್ಯಾಪಿಟಲ್ಸ್‌ನ ಅಂಗಸಂಸ್ಥೆ ಇರೇಲಿಯಾ ಸ್ಪೋರ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಫ್ರಾಂಚೈಸಿಯನ್ನು ನಡೆಸುತ್ತಿತ್ತು. ಈಗ ಟೊರೆಂಟ್ ಗ್ರೂಪ್ ಶೇ. 67 ರಷ್ಟು ಪಾಲನ್ನು ಖರೀದಿಸುವ ಮೂಲಕ ಫ್ರಾಂಚೈಸಿಯ ಮೇಲೆ ಹಿಡಿತ ಸಾಧಿಸಿದೆ.

2 / 5
ಆದಾಗ್ಯೂ ಎಷ್ಟು ಮೊತ್ತಕ್ಕೆ ಈ ಒಪ್ಪಂದ ನಡೆದಿದೆ ಎಂಬುದನ್ನು ಇದುವರೆಗೆ ಬಹಿರಂಗವಾಗಿಲ್ಲ. ಉಳಿದಂತೆ ಸಿವಿಸಿ ಕ್ಯಾಪಿಟಲ್ಸ್‌ ತನ್ನ ಬಳಿಯೇ ಫ್ರಾಂಚೈಸಿಯ ಶೇ 33 ರಷ್ಟು ಪಾಲನ್ನು ಉಳಿಸಿಕೊಂಡಿದೆ. ವಾಸ್ತವವಾಗಿ 2021 ರಲ್ಲಿ ಬಿಸಿಸಿಐ ನಡೆಸಿದ ಇ-ಹರಾಜಿನಲ್ಲಿ ಸಿವಿಸಿ ಕ್ಯಾಪಿಟಲ್ಸ್ ಅಹಮದಾಬಾದ್ ಫ್ರಾಂಚೈಸಿಗೆ ಅತಿ ಹೆಚ್ಚು ಬಿಡ್ ಮಾಡಿ ಬರೋಬ್ಬರಿ 5600 ಕೋಟಿ ರೂ.ಗೆ ಗುಜರಾತ್ ತಂಡದ ಮಾಲೀಕತ್ವ ಪಡೆದುಕೊಂಡಿತ್ತು.

3 / 5
ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಫ್ರಾಂಚೈಸಿ ಎನಿಸಿಕೊಂಡಿತ್ತು. ಅದೇ ವರ್ಷ ಅಂದರೆ 2021 ರಲ್ಲಿ ನಡೆದಿದ್ದ ಇ-ಹರಾಜಿನಲ್ಲಿ ಲಕ್ನೋ ಫ್ರಾಂಚೈಸಿಯನ್ನು ಗೋಯೆಂಕಾ ಗ್ರೂಪ್ 7 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ಬಿಡ್ ಮಾಡುವ ಖರೀದಿಸಿತ್ತು. ಈ ಮೂಲಕ ಅತ್ಯಂತ ದುಬಾರಿ ಫ್ರಾಂಚೈಸಿ ಎಂಬ ದಾಖಲೆಯನ್ನು ಲಕ್ನೋ ಬರೆದಿತ್ತು.

4 / 5
ಐಪಿಎಲ್ ಆರಂಭಕ್ಕೂ ಮುನ್ನ ಮಾಲೀಕರು ಬದಲಾದರು ತಂಡದ ನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಳೆದ ಸೀಸನ್​ನಲ್ಲಿ ತಂಡದ ನಾಯಕರಾಗಿದ್ದ ಶುಭ್​ಮನ್ ಗಿಲ್ ಈ ಬಾರಿಯೂ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ಮುಖ್ಯ ಕೋಚ್ ಆಗಿ ಆಶಿಶ್ ನೆಹ್ರಾ ಮುಂದುವರೆದರೆ, ವಿಕ್ರಮ್ ಸೋಲಂಕಿ ಫ್ರಾಂಚೈಸಿಯ ಕ್ರಿಕೆಟ್ ನಿರ್ದೇಶಕರಾಗಿ ಉಳಿಯಲಿದ್ದಾರೆ.

5 / 5
ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ

ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ

ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು

ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ

ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?

24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್

ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!

ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು