India vs Australia 2nd Test: ಕೆಎಲ್ ರಾಹುಲ್​ಗೆ ಸಿಗುತ್ತಾ ಚಾನ್ಸ್​? ಇಲ್ಲಿದೆ ಮಾಹಿತಿ

India vs Australia 2nd Test: ಮೊದಲ ಟೆಸ್ಟ್ ಪಂದ್ಯದಲ್ಲಿ 20 ರನ್​ಗಳಿಸಿ ಔಟಾಗುತ್ತಿದ್ದಂತೆ ಕೆಎಲ್​ಆರ್​ ಅವರ ಆಯ್ಕೆ ಬಗ್ಗೆ ಪ್ರಶ್ನೆಗಳೆದಿದ್ದವು. ಹೀಗಾಗಿ ಅವರನ್ನು 2ನೇ ಪಂದ್ಯದಿಂದ ಕೈ ಬಿಡಲಾಗುತ್ತೆ ಎನ್ನಲಾಗಿತ್ತು.

TV9 Web
| Updated By: ಝಾಹಿರ್ ಯೂಸುಫ್

Updated on: Feb 14, 2023 | 8:30 PM

ಭಾರತ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಸಜ್ಜಾಗಿದೆ. ಫೆಬ್ರವರಿ 17 ರಿಂದ ಶುರುವಾಗಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಶುಭ್​ಮನ್ ಗಿಲ್​ಗೆ ಅವಕಾಶ ಸಿಗುವ ಸಾಧ್ಯತೆಯಿಲ್ಲ. ಬದಲಾಗಿ ಆರಂಭಿಕರಾಗಿ ಕೆಎಲ್ ರಾಹುಲ್ ಮುಂದುವರೆಯಲಿದ್ದಾರೆ ಎಂಬುದನ್ನು ಬಿಸಿಸಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

1 / 7
ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಕೇವಲ 20 ರನ್​ಗಳಿಸಿ ಔಟಾಗಿದ್ದರು. ಇತ್ತ ಕಳೆದ 5 ಟೆಸ್ಟ್ ಇನಿಂಗ್ಸ್​ನಲ್ಲೂ ಕನ್ನಡಿಗನ ಗರಿಷ್ಠ ಸ್ಕೋರ್ 23 ದಾಟಿಲ್ಲ. ಮತ್ತೊಂದೆಡೆ ಕೆಎಲ್ ರಾಹುಲ್​ಗೆ ಅವಕಾಶ ನೀಡಿದ ಕಾರಣ ಇನ್​ಫಾರ್ಮ್ ಆಟಗಾರ ಶುಭ್​ಮನ್ ಗಿಲ್ ಹೊರಗುಳಿಯಬೇಕಾಯಿತು. ಮೊದಲ ಟೆಸ್ಟ್ ಪಂದ್ಯದಲ್ಲಿ 20 ರನ್​ಗಳಿಸಿ ಔಟಾಗುತ್ತಿದ್ದಂತೆ ಕೆಎಲ್​ಆರ್​ ಅವರ ಆಯ್ಕೆ ಬಗ್ಗೆ ಪ್ರಶ್ನೆಗಳೆದಿದ್ದವು. ಹೀಗಾಗಿ ಅವರನ್ನು 2ನೇ ಪಂದ್ಯದಿಂದ ಕೈ ಬಿಡಲಾಗುತ್ತೆ ಎನ್ನಲಾಗಿತ್ತು.

2 / 7
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ರಾಹುಲ್ ಅವರ ಸಾಮರ್ಥ್ಯದ ಬಗ್ಗೆ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್​ಗೆ ಸಂಪೂರ್ಣ ವಿಶ್ವಾಸವಿದೆ. ಎಲ್ಲರೂ ಎದುರಿಸುವಂತಹ ಕೆಟ್ಟ ಫಾರ್ಮ್​ ಅವರನ್ನೂ ಕಾಡುತ್ತಿದೆ. ಈ ಹಿಂದೆ ವಿರಾಟ್ ಕೊಹ್ಲಿ ಕೂಡ ಇಂತಹದೊಂದು ಪರಿಸ್ಥಿತಿಯನ್ನು ಎದುರಿಸಿದ್ದರು. ಆ ಬಳಿಕ ಅವರು ಕಂಬ್ಯಾಕ್ ಮಾಡಿದ್ದರು. ಅದೇ ರೀತಿ  ರಾಹುಲ್ ಬಗ್ಗೆ ಸಹ ಎಲ್ಲರೂ ತಾಳ್ಮೆಯಿಂದಿರಬೇಕು ಎಂದು ತಿಳಿಸಿದ್ದಾರೆ.

3 / 7
ಏಕೆಂದರೆ ಕೆಎಲ್ ರಾಹುಲ್ ಕ್ಲಾಸಿ ಆಟಗಾರ. ಅವರು ಖಂಡಿತವಾಗಿಯೂ ಪುಟಿದೇಳುತ್ತಾರೆ. ಇದೇ ವಿಶ್ವಾಸದಲ್ಲಿ 2ನೇ ಟೆಸ್ಟ್ ಪಂದ್ಯದಲ್ಲೂ ಕೆಎಲ್ ರಾಹುಲ್ ಅವರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಅದರಂತೆ ದೆಹಲಿ ಟೆಸ್ಟ್​ನಲ್ಲಿ ಅವರಿಗೆ ಸ್ಥಾನ ಸಿಗಲಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್‌ಸ್ಪೋರ್ಟ್‌ಗೆ ತಿಳಿಸಿದ್ದಾರೆ.

4 / 7
ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕೂಡ ಕೆಎಲ್ ರಾಹುಲ್ ಅವರಿಗೆ ಮತ್ತೊಂದು ಅವಕಾಶ ನೀಡಬೇಕೆಂದು ವಾದ ಮುಂದಿಟ್ಟಿದ್ದರು. ದೆಹಲಿ ಟೆಸ್ಟ್​ನಲ್ಲಿ ಚಾನ್ಸ್ ನೀಡಿದ ಬಳಿಕ ಅವರನ್ನು ಕೈ ಬಿಡಬೇಕೇ ಎಂಬುದನ್ನು ತೀರ್ಮಾನ ಮಾಡಬೇಕು. ಕೇವಲ ಒಂದು ಇನಿಂಗ್ಸ್​ನ ಆಧಾರದ ಮೇಲೆ ಅವರ ಸಾಮರ್ಥ್ಯವನ್ನು ಅಳೆಯುವುದು ತಪ್ಪು ಎಂದು ಗವಾಸ್ಕರ್ ಹೇಳಿದ್ದರು.

5 / 7
ಇದೀಗ ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, ಕೆಎಲ್ ರಾಹುಲ್ ಅವರ ಬೆಂಬಲಕ್ಕೆ ಟೀಮ್ ಇಂಡಿಯಾ ನಾಯಕ ಹಾಗೂ ಕೋಚ್ ನಿಂತಿದ್ದಾರೆ. ಹೀಗಾಗಿ ಫೆಬ್ರವರಿ 17 ರಿಂದ ಶುರುವಾಗಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್​ಗೆ ಅವಕಾಶ ಸಿಗಲಿದೆ ಎಂದೇ ಹೇಳಬಹುದು.

6 / 7
ಭಾರತ ಟೆಸ್ಟ್​ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶುಭ್​ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.

7 / 7
Follow us
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ