- Kannada News Photo gallery Cricket photos IND vs AUS Ruturaj Gaikwad or Suryakumar Yadav likely to Captain India vs Australia in T20s
IND vs AUS: ಸೂರ್ಯ ಅಥವಾ ರುತುರಾಜ್? ಹಾರ್ದಿಕ್ ಅನುಪಸ್ಥಿತಿಯಲ್ಲಿ ಯಾರಿಗೆ ಟೀಂ ಇಂಡಿಯಾ ನಾಯಕತ್ವ?
IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ನವೆಂಬರ್ 23 ರಿಂದ ಆರಂಭವಾಗಲಿದೆ. ಇಂಜುರಿಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿರುವ ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಈ ಸರಣಿಗೂ ಆಡುವ ಸಾಧ್ಯತೆ ಕಡಿಮೆ.
Updated on: Nov 11, 2023 | 9:31 AM
![ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ನವೆಂಬರ್ 23 ರಿಂದ ಆರಂಭವಾಗಲಿದೆ. ಇಂಜುರಿಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿರುವ ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಈ ಸರಣಿಗೂ ಆಡುವ ಸಾಧ್ಯತೆ ಕಡಿಮೆ.](https://images.tv9kannada.com/wp-content/uploads/2023/11/hardik.jpg?w=1280&enlarge=true)
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ನವೆಂಬರ್ 23 ರಿಂದ ಆರಂಭವಾಗಲಿದೆ. ಇಂಜುರಿಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿರುವ ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಈ ಸರಣಿಗೂ ಆಡುವ ಸಾಧ್ಯತೆ ಕಡಿಮೆ.
![ಹೀಗಾಗಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಯಾರಿಗೆ ಟೀಂ ಇಂಡಿಯಾದ ನಾಯಕತ್ವ ಸಿಗಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ವರದಿ ಪ್ರಕಾರ, ಸೂರ್ಯಕುಮಾರ್ ಯಾದವ್ ಅಥವಾ ರುತುರಾಜ್ ಗಾಯಕ್ವಾಡ್ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.](https://images.tv9kannada.com/wp-content/uploads/2023/11/surya-ruturaj.jpg)
ಹೀಗಾಗಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಯಾರಿಗೆ ಟೀಂ ಇಂಡಿಯಾದ ನಾಯಕತ್ವ ಸಿಗಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ವರದಿ ಪ್ರಕಾರ, ಸೂರ್ಯಕುಮಾರ್ ಯಾದವ್ ಅಥವಾ ರುತುರಾಜ್ ಗಾಯಕ್ವಾಡ್ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
![ರುತುರಾಜ್ ನಾಯಕತ್ವದಲ್ಲಿ ಭಾರತ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದೆ. ಸದ್ಯ ಸೂರ್ಯ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ಹಾಗಾಗಿ ಈ ಇಬ್ಬರಲ್ಲಿ ಒಬ್ಬರಿಗೆ ಬಿಸಿಸಿಐ ನಾಯಕತ್ವ ನೀಡುವ ಸಾಧ್ಯತೆ ಇದೆ.](https://images.tv9kannada.com/wp-content/uploads/2023/11/surya-ruturaj-1.jpg)
ರುತುರಾಜ್ ನಾಯಕತ್ವದಲ್ಲಿ ಭಾರತ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದೆ. ಸದ್ಯ ಸೂರ್ಯ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ಹಾಗಾಗಿ ಈ ಇಬ್ಬರಲ್ಲಿ ಒಬ್ಬರಿಗೆ ಬಿಸಿಸಿಐ ನಾಯಕತ್ವ ನೀಡುವ ಸಾಧ್ಯತೆ ಇದೆ.
![ಅಲ್ಲದೆ ಈ ಟಿ20 ಸರಣಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಲೋಕೇಶ್ ರಾಹುಲ್, ರವೀಂದ್ರ ಜಡೇಜಾ ಮತ್ತು ಎಲ್ಲಾ ಮೂವರು ವೇಗದ ಬೌಲರ್‌ಗಳಿಗೆ ವಿಶ್ರಾಂತಿ ನೀಡುವ ನಿರೀಕ್ಷೆಯಿದೆ.](https://images.tv9kannada.com/wp-content/uploads/2023/11/ind-7.jpg)
ಅಲ್ಲದೆ ಈ ಟಿ20 ಸರಣಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಲೋಕೇಶ್ ರಾಹುಲ್, ರವೀಂದ್ರ ಜಡೇಜಾ ಮತ್ತು ಎಲ್ಲಾ ಮೂವರು ವೇಗದ ಬೌಲರ್‌ಗಳಿಗೆ ವಿಶ್ರಾಂತಿ ನೀಡುವ ನಿರೀಕ್ಷೆಯಿದೆ.
![ಬಿಸಿಸಿಐ ಮೂಲಗಳ ಪ್ರಕಾರ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿಯಲ್ಲಿರುವ ಪಾಂಡ್ಯ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಫಿಟ್ ಆಗುವ ಸಾಧ್ಯತೆ ಹೆಚ್ಚಿದೆ. ಡಿಸೆಂಬರ್ 10 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ನಡೆಯಲಿದೆ.](https://images.tv9kannada.com/wp-content/uploads/2023/11/hardik-1.jpg)
ಬಿಸಿಸಿಐ ಮೂಲಗಳ ಪ್ರಕಾರ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿಯಲ್ಲಿರುವ ಪಾಂಡ್ಯ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಫಿಟ್ ಆಗುವ ಸಾಧ್ಯತೆ ಹೆಚ್ಚಿದೆ. ಡಿಸೆಂಬರ್ 10 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ನಡೆಯಲಿದೆ.
![ಮುಂದಿನ ವರ್ಷ ಟಿ20 ವಿಶ್ವಕಪ್ ಜೂನ್-ಜುಲೈನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿದೆ. ಹೀಗಾಗಿ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಭಾರತಕ್ಕೆ ಮಹತ್ವದ್ದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.](https://images.tv9kannada.com/wp-content/uploads/2023/11/ind-1-2.jpg)
ಮುಂದಿನ ವರ್ಷ ಟಿ20 ವಿಶ್ವಕಪ್ ಜೂನ್-ಜುಲೈನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿದೆ. ಹೀಗಾಗಿ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಭಾರತಕ್ಕೆ ಮಹತ್ವದ್ದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.
![ಇವರಲ್ಲದೆ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಯುಜ್ವೇಂದ್ರ ಚಹಾಲ್ ಕೂಡ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಸಯೀದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿನ ಪ್ರದರ್ಶನವನ್ನೂ ಆಯ್ಕೆ ಸಮಿತಿ ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.](https://images.tv9kannada.com/wp-content/uploads/2023/11/ind-2-2.jpg)
ಇವರಲ್ಲದೆ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಯುಜ್ವೇಂದ್ರ ಚಹಾಲ್ ಕೂಡ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಸಯೀದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿನ ಪ್ರದರ್ಶನವನ್ನೂ ಆಯ್ಕೆ ಸಮಿತಿ ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
![ಹೀಗಾಗಿ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಭುವನೇಶ್ವರ್ ಕುಮಾರ್ ಅವರಿಗೆ ಅವಕಾಶ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಭುವಿಗೂ ಕೊನೆಯ ಅವಕಾಶ ನೀಡಬಹುದಾಗಿದೆ. ಏಕೆಂದರೆ ಭುವಿ ದೇಶೀಯ ಟೂರ್ನಿಯಲ್ಲಿ ಏಳು ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ. ಅಭಿಷೇಕ್ ಎರಡು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 485 ರನ್ ಬಾರಿಸಿದ್ದಾರೆ.](https://images.tv9kannada.com/wp-content/uploads/2023/11/ind-3-2.jpg)
ಹೀಗಾಗಿ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಭುವನೇಶ್ವರ್ ಕುಮಾರ್ ಅವರಿಗೆ ಅವಕಾಶ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಭುವಿಗೂ ಕೊನೆಯ ಅವಕಾಶ ನೀಡಬಹುದಾಗಿದೆ. ಏಕೆಂದರೆ ಭುವಿ ದೇಶೀಯ ಟೂರ್ನಿಯಲ್ಲಿ ಏಳು ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ. ಅಭಿಷೇಕ್ ಎರಡು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 485 ರನ್ ಬಾರಿಸಿದ್ದಾರೆ.
![ರಿಯಾನ್‌ಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ತುಂಬಾ ವಿಶೇಷವಾಗಿತ್ತು. ಅವರು ಬಾಲ್ ಮತ್ತು ಬ್ಯಾಟ್ ಎರಡರಲ್ಲೂ ಮಿಂಚಿನ ಪ್ರದರ್ಶನ ನೀಡಿದರು. ಪರಾಗ್ ಈ ಟೂರ್ನಿಯಲ್ಲಿ 510 ರನ್‌ಗಳ ಜೊತೆಗೆ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ ಮತ್ತು ರಿಂಕು ಸಿಂಗ್ ಅವರಂತಹ ಬ್ಯಾಟ್ಸ್‌ಮನ್‌ಗಳ ಸಮ್ಮುಖದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅವರು ಸ್ಥಾನ ಪಡೆಯುವುದು ಕಷ್ಟಕರವಾಗಿದೆ](https://images.tv9kannada.com/wp-content/uploads/2023/11/parag.jpg)
ರಿಯಾನ್‌ಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ತುಂಬಾ ವಿಶೇಷವಾಗಿತ್ತು. ಅವರು ಬಾಲ್ ಮತ್ತು ಬ್ಯಾಟ್ ಎರಡರಲ್ಲೂ ಮಿಂಚಿನ ಪ್ರದರ್ಶನ ನೀಡಿದರು. ಪರಾಗ್ ಈ ಟೂರ್ನಿಯಲ್ಲಿ 510 ರನ್‌ಗಳ ಜೊತೆಗೆ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ ಮತ್ತು ರಿಂಕು ಸಿಂಗ್ ಅವರಂತಹ ಬ್ಯಾಟ್ಸ್‌ಮನ್‌ಗಳ ಸಮ್ಮುಖದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅವರು ಸ್ಥಾನ ಪಡೆಯುವುದು ಕಷ್ಟಕರವಾಗಿದೆ
![ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡು: 11 ತಿಂಗಳಲ್ಲಿ 80 ಲಕ್ಷ ಟೂರಿಸ್ಟ್ ಭೇಟಿ ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡು: 11 ತಿಂಗಳಲ್ಲಿ 80 ಲಕ್ಷ ಟೂರಿಸ್ಟ್ ಭೇಟಿ](https://images.tv9kannada.com/wp-content/uploads/2024/12/tourists.jpg?w=280&ar=16:9)
![ನೋಟುಗಳ ಮೇಲೆ ಸಹಿ ಹಾಕಿದ ದೇಶದ ಏಕೈಕ ಪ್ರಧಾನಿ ಮನಮೋಹನ್ ಸಿಂಗ್! ನೋಟುಗಳ ಮೇಲೆ ಸಹಿ ಹಾಕಿದ ದೇಶದ ಏಕೈಕ ಪ್ರಧಾನಿ ಮನಮೋಹನ್ ಸಿಂಗ್!](https://images.tv9kannada.com/wp-content/uploads/2024/12/manmohan-singh-5-1.jpg?w=280&ar=16:9)
![23 ಓವರ್ಗಳಲ್ಲಿ 122 ರನ್; ಮೆಲ್ಬೋರ್ನ್ನಲ್ಲಿ ಸಿರಾಜ್ ಬಲು ದುಬಾರಿ 23 ಓವರ್ಗಳಲ್ಲಿ 122 ರನ್; ಮೆಲ್ಬೋರ್ನ್ನಲ್ಲಿ ಸಿರಾಜ್ ಬಲು ದುಬಾರಿ](https://images.tv9kannada.com/wp-content/uploads/2024/12/mohammed-siraj-1.jpg?w=280&ar=16:9)
![ಭಾರತದ ವಿರುದ್ಧ ಅಧಿಕ ಶತಕ; ನಂ.1 ಸ್ಥಾನಕ್ಕೇರಿದ ಸ್ಟೀವ್ ಸ್ಮಿತ್ ಭಾರತದ ವಿರುದ್ಧ ಅಧಿಕ ಶತಕ; ನಂ.1 ಸ್ಥಾನಕ್ಕೇರಿದ ಸ್ಟೀವ್ ಸ್ಮಿತ್](https://images.tv9kannada.com/wp-content/uploads/2024/12/steve-smith.jpg?w=280&ar=16:9)
![ಎಂದೆಂದಿಗೂ ಮರೆಯಲಾಗದ ಮನಮೋಹನ್ ಸಿಂಗ್ರ ಯೋಜನೆಗಳು..! ಎಂದೆಂದಿಗೂ ಮರೆಯಲಾಗದ ಮನಮೋಹನ್ ಸಿಂಗ್ರ ಯೋಜನೆಗಳು..!](https://images.tv9kannada.com/wp-content/uploads/2024/12/manmohan-singh-1.jpg?w=280&ar=16:9)
![ಮೌನಕ್ಕೆ ಜಾರಿದ ಮನಮೋಹನ್ ಸಿಂಗ್, ಮಾಜಿ ಪ್ರಧಾನಿಯ ವ್ಯಕ್ತಿಚಿತ್ರಣ ಇಲ್ಲಿದೆ ಮೌನಕ್ಕೆ ಜಾರಿದ ಮನಮೋಹನ್ ಸಿಂಗ್, ಮಾಜಿ ಪ್ರಧಾನಿಯ ವ್ಯಕ್ತಿಚಿತ್ರಣ ಇಲ್ಲಿದೆ](https://images.tv9kannada.com/wp-content/uploads/2022/12/Former-Prime-Minister-Manmohan-Singh-passed-away-complete-biography-here.jpg?w=280&ar=16:9)
![ಚಳಿಯಲ್ಲಿ ನಡುಗುತ್ತಿದ್ದವರಿಗೆ ರಕ್ಷಣೆ: ವಿದ್ಯಾರ್ಥಿಗಳ ಸಮಾಜಮುಖಿ ಕಾರ್ಯ ಚಳಿಯಲ್ಲಿ ನಡುಗುತ್ತಿದ್ದವರಿಗೆ ರಕ್ಷಣೆ: ವಿದ್ಯಾರ್ಥಿಗಳ ಸಮಾಜಮುಖಿ ಕಾರ್ಯ](https://images.tv9kannada.com/wp-content/uploads/2024/12/gadag-14.jpg?w=280&ar=16:9)
![ಟೆಸ್ಟ್ನಲ್ಲಿ ಬುಮ್ರಾ ವಿರುದ್ಧ ಅಬ್ಬರಿಸಿದ್ದು ಮೂವರು ಮಾತ್ರ, ಅವರೆಂದರೆ... ಟೆಸ್ಟ್ನಲ್ಲಿ ಬುಮ್ರಾ ವಿರುದ್ಧ ಅಬ್ಬರಿಸಿದ್ದು ಮೂವರು ಮಾತ್ರ, ಅವರೆಂದರೆ...](https://images.tv9kannada.com/wp-content/uploads/2024/12/jasprit-bumrah-38.jpg?w=280&ar=16:9)
![ವಿರಾಟ್ ಕೊಹ್ಲಿಗೆ ದಂಡ ವಿಧಿಸಿ, ಡಿಮೆರಿಟ್ ಪಾಯಿಂಟ್ ನೀಡಿದ ಐಸಿಸಿ ವಿರಾಟ್ ಕೊಹ್ಲಿಗೆ ದಂಡ ವಿಧಿಸಿ, ಡಿಮೆರಿಟ್ ಪಾಯಿಂಟ್ ನೀಡಿದ ಐಸಿಸಿ](https://images.tv9kannada.com/wp-content/uploads/2024/12/virat-kohli-2024-12-26t133437.644-1.jpg?w=280&ar=16:9)
![ಬಾಕ್ಸಿಂಗ್ ಡೇ ಟು ಬಾಕ್ಸಿಂಗ್ ಡೇ: ದಶಕ ಪೂರೈಸಿದ ಕೆಎಲ್ ರಾಹುಲ್ ಬಾಕ್ಸಿಂಗ್ ಡೇ ಟು ಬಾಕ್ಸಿಂಗ್ ಡೇ: ದಶಕ ಪೂರೈಸಿದ ಕೆಎಲ್ ರಾಹುಲ್](https://images.tv9kannada.com/wp-content/uploads/2024/12/kl-rahul-2024-12-26t103543.853.jpg?w=280&ar=16:9)
![ಬಿಗ್ ಬಾಸ್ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ ಬಿಗ್ ಬಾಸ್ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ](https://images.tv9kannada.com/wp-content/uploads/2024/12/bigg-boss-kannada-season-11.jpg?w=280&ar=16:9)
![ಮೈಸೂರಿನ ಅರಮನೆ ಬಳಿ ಹೊಸ ವರ್ಷಾಚರಣೆ ರದ್ದು..! ಮೈಸೂರಿನ ಅರಮನೆ ಬಳಿ ಹೊಸ ವರ್ಷಾಚರಣೆ ರದ್ದು..!](https://images.tv9kannada.com/wp-content/uploads/2024/12/mys-no-new-year_av.jpg?w=280&ar=16:9)
![ಹುಬ್ಬಳ್ಳಿಯಲ್ಲಿದ್ದಾರೆ ಡಾ. ಮನಮೋಹನ್ ಸಿಂಗ್ ಹತ್ತಿರದ ಸಂಬಂಧಿಗಳು ಹುಬ್ಬಳ್ಳಿಯಲ್ಲಿದ್ದಾರೆ ಡಾ. ಮನಮೋಹನ್ ಸಿಂಗ್ ಹತ್ತಿರದ ಸಂಬಂಧಿಗಳು](https://images.tv9kannada.com/wp-content/uploads/2024/12/hbl-kohil-logo-byte.jpg?w=280&ar=16:9)
![ಮನಮೋಹನ್ ಸಿಂಗ್ ಬಗ್ಗೆ ಮಾತನಾಡುತ್ತಲೇ ದೇವೇಗೌಡ ಭಾವುಕ ಮನಮೋಹನ್ ಸಿಂಗ್ ಬಗ್ಗೆ ಮಾತನಾಡುತ್ತಲೇ ದೇವೇಗೌಡ ಭಾವುಕ](https://images.tv9kannada.com/wp-content/uploads/2024/12/bng-hdd-pc-1.jpg?w=280&ar=16:9)
![ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ](https://images.tv9kannada.com/wp-content/uploads/2024/12/hanumanthu.jpg?w=280&ar=16:9)
![Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ](https://images.tv9kannada.com/wp-content/uploads/2024/12/annamalai-2.jpg?w=280&ar=16:9)
![ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ](https://images.tv9kannada.com/wp-content/uploads/2024/12/priests-anger-at-wedding-goes-viral_-shocking-video.jpg?w=280&ar=16:9)
![ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್ ಸಿಂಗ್ ಕಾವ್ಯ! ವಿಡಿಯೋ ನೋಡಿ ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್ ಸಿಂಗ್ ಕಾವ್ಯ! ವಿಡಿಯೋ ನೋಡಿ](https://images.tv9kannada.com/wp-content/uploads/2024/12/manmohan-singh-in-parliment.jpg?w=280&ar=16:9)
![Daily Devotional: ವಾಕಿಂಗ್ ಮಾಡುವುದರಿಂದ ಏನೆಲ್ಲಾ ಪ್ರಯೋಜನ Daily Devotional: ವಾಕಿಂಗ್ ಮಾಡುವುದರಿಂದ ಏನೆಲ್ಲಾ ಪ್ರಯೋಜನ](https://images.tv9kannada.com/wp-content/uploads/2024/12/nithya-bhakti-4.jpg?w=280&ar=16:9)
![Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ](https://images.tv9kannada.com/wp-content/uploads/2024/12/dina-bhavishya-3-1.jpg?w=280&ar=16:9)