- Kannada News Photo gallery Cricket photos IND vs ENG Harshit Rana creates unique record in international debut
IND vs ENG: 50 ವರ್ಷಗಳ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ವೇಗಿ ಹರ್ಷಿತ್ ರಾಣಾ
Harshit Rana's ODI Debut: ನಾಗ್ಪುರದಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಹರ್ಷಿತ್ ರಾಣಾ 7 ಓವರ್‌ಗಳಲ್ಲಿ 53 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದು ವಿಶೇಷ ಹ್ಯಾಟ್ರಿಕ್ ಸಾಧನೆ ಮಾಡಿದರು. ಟೆಸ್ಟ್ ಮತ್ತು ಟಿ20 ಯಲ್ಲೂ ಮೊದಲ ಪಂದ್ಯದಲ್ಲಿಯೇ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಾಣಾ, ಮೂರು ಮಾದರಿಗಳಲ್ಲೂ ಮೊದಲ ಪಂದ್ಯದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಸೃಷ್ಟಿಸಿದ್ದಾರೆ.
Updated on: Feb 06, 2025 | 6:43 PM

ನಾಗ್ಪುರದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ ಯುವ ವೇಗದ ಬೌಲರ್ ಹರ್ಷಿತ್ ರಾಣಾ ತಮ್ಮ ವೃತ್ತಿಜೀವನದ ಮೊದಲ ಏಕದಿನ ಪಂದ್ಯದಲ್ಲೇ ಪಂದ್ಯದಲ್ಲಿಯೇ ತಮ್ಮ ಛಾಪು ಮೂಡಿಸಿದ್ದಾರೆ. ಈ ಪಂದ್ಯದಲ್ಲಿ 7 ಓವರ್ ಬೌಲ್ ಮಾಡಿದ ರಾಣಾ 53 ರನ್ ಬಿಟ್ಟುಕೊಟ್ಟು 3 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ಅವರು ವಿಶೇಷ ರೀತಿಯ ಹ್ಯಾಟ್ರಿಕ್ ಕೂಡ ಪೂರ್ಣಗೊಳಿಸಿದರು.

ವಾಸ್ತವವಾಗಿ ವೇಗಿ ಹರ್ಷಿತ್ ರಾಣಾ ಭಾರತ ಪರ ಮೂರು ಸ್ವರೂಪಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಮೂರು ಮಾದರಿಯಲ್ಲೂ ಅವರು ತಮ್ಮ ಮೊದಲ ಪಂದ್ಯದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ದಾಖಲೆ ನಿರ್ಮಿಸಿದ್ದಾರೆ.

ಭಾರತ ತಂಡವು 1974 ರಿಂದ ಏಕದಿನ ಕ್ರಿಕೆಟ್ ಆಡುತ್ತಿದ್ದು, 50 ವರ್ಷಗಳ ಇತಿಹಾಸದಲ್ಲಿ ಹರ್ಷಿತ್ ರಾಣಾ ಅವರಂತಹ ಅದ್ಭುತಗಳನ್ನು ಮಾಡಲು ಯಾವುದೇ ಭಾರತೀಯ ಆಟಗಾರನಿಗೆ ಸಾಧ್ಯವಾಗಿಲ್ಲ. ಹರ್ಷಿತ್ ರಾಣಾ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿದ್ದರು. ಆ ಬಳಿಕ ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲಿ 3 ವಿಕೆಟ್ ಪಡೆದಿದ್ದರು. ಇದೀಗ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೂ 3 ವಿಕೆಟ್ ಪಡೆದಿದ್ದಾರೆ.

ಹರ್ಷಿತ್ ರಾಣಾ ತಮ್ಮ ಮೊದಲ ಪಂದ್ಯದಲ್ಲಿ ಸ್ವಲ್ಪ ದುಬಾರಿಯಾದರೂ ಅವರು ಖಂಡಿತವಾಗಿಯೂ ತಮ್ಮ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ರಾಣಾ ಮೊದಲು ಬೆನ್ ಡಕೆಟ್ ಅವರನ್ನು ಔಟ್ ಮಾಡಿದರು. ಇದಾದ ನಂತರ ಅವರು ಹ್ಯಾರಿ ಬ್ರೂಕ್ ಅವರ ವಿಕೆಟ್ ಪಡೆದರು. ಕೊನೆಯದಾಗಿ ಲಿಯಾಮ್ ಲಿವಿಂಗ್‌ಸ್ಟೋನ್ ಹರ್ಷಿತ್ ರಾಣಾಗೆ ಮೂರನೇ ಬಲಿಯಾದರು.

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ನಾಗ್ಪುರ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಕೇವಲ 248 ರನ್ ಗಳಿಸಲಷ್ಟೇ ಶಕ್ತವಾಯಿತು. ಹರ್ಷಿತ್ ರಾಣಾ ಹೊರತುಪಡಿಸಿ, ರವೀಂದ್ರ ಜಡೇಜಾ ಕೂಡ ಕೇವಲ 26 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಇತ್ತ ಇಂಗ್ಲೆಂಡ್ ಪರ ಬಟ್ಲರ್ 52 ರನ್ ಮತ್ತು ಬೆಥೆಲ್ 51 ರನ್ಗಳ ಇನ್ನಿಂಗ್ಸ್ ಆಡಿದರು
























