- Kannada News Photo gallery Cricket photos IND vs WI Yuzvendra Chahal creates unwanted record during 1st T20I vs West Indies
2 ವಿಕೆಟ್ಗಳ ಹೊರತಾಗಿಯೂ ಮೊದಲ ಟಿ20 ಪಂದ್ಯದಲ್ಲಿ ಬೇಡದ ದಾಖಲೆ ಬರೆದ ಯುಜ್ವೇಂದ್ರ ಚಹಾಲ್..!
Yuzvendra Chahal: ಚುಟುಕು ಮಾದರಿಯಲ್ಲಿ ಇದುವರೆಗೆ 1674 ಎಸೆತಗಳನ್ನು ಬೌಲ್ ಮಾಡಿರುವ ಚಹಾಲ್ ಅತಿ ಹೆಚ್ಚು ಸಿಕ್ಸರ್ ಹೊಡೆಸಿಕೊಂಡ ಬೌಲರ್ಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.
Updated on: Aug 05, 2023 | 8:42 AM

ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 4 ರನ್ಗಳಿಂದ ಸೋಲನುಭವಿಸಿತ್ತು. 150 ರನ್‌ಗಳ ಅಲ್ಪ ರನ್ಗಳನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ ಬ್ಯಾಟಿಂಗ್ ವಿಭಾಗ ಕೈಕೊಟ್ಟಿತು. ಹೀಗಾಗಿ ಹಾರ್ದಿಕ್ ಪಡೆ ವಿಂಡೀಸ ವಿರುದ್ಧ ಮಂಡಿಯೂರಬೇಕಾಯಿತು.

‘ಇನ್ನು ಈ ಪಂದ್ಯದಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ತೋರಿದ್ದ ಗೂಗ್ಲಿ ಮಾಸ್ಟರ್ ಯುಜ್ವೇಂದ್ರ ಚಹಾಲ್ ಒಂದೇ ಓವರ್ನಲ್ಲಿ ಎರಡು ವಿಕೆಟ್ ಉರುಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಭರ್ಜರಿ ಕಂಬ್ಯಾಕ್ ಮಾಡಿದ್ದರು.

ಆದರೆ ಈ ಎರಡು ವಿಕೆಟ್ಗಳ ಹೊರತಾಗಿಯೂ ಚಹಾಲ್ ಟಿ20 ಮಾದರಿಯಲ್ಲಿ ಬೇಡದ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಚುಟುಕು ಮಾದರಿಯಲ್ಲಿ ಇದುವರೆಗೆ 1674 ಎಸೆತಗಳನ್ನು ಬೌಲ್ ಮಾಡಿರುವ ಚಹಾಲ್ ಅತಿ ಹೆಚ್ಚು ಸಿಕ್ಸರ್ ಹೊಡೆಸಿಕೊಂಡ ಬೌಲರ್ಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ

ವಾಸ್ತವವಾಗಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 2 ಸಿಕ್ಸರ್ ಹೊಡೆಸಿಕೊಂಡ ಚಹಾಲ್, ಈ ಮಾದರಿಯಲ್ಲಿ ಇದುವರೆಗೆ 119 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದರೊಂದಿಗೆ ಅನುಭವಿ ಇಂಗ್ಲಿಷ್ ಸ್ಪಿನ್ನರ್ ಆದಿಲ್ ರಶೀದ್ ಅವರೊಂದಿಗೆ ಜಂಟಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಈ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆಸಿಕೊಂಡಿರುವ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ..

ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಇಶ್ ಸೋಧಿ ಇದುವರೆಗೆ ಬೌಲ್ ಮಾಡಿರುವ2035 ಎಸೆತಗಳಲ್ಲಿ ಬರೋಬ್ಬರಿ 129 ಸಿಕ್ಸರ್ ಹೊಡೆಸಿಕೊಂಡಿದ್ದಾರೆ.

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 2 ಸಿಕ್ಸರ್ ಹೊಡೆಸಿಕೊಂಡ ಯುಜ್ವೇಂದ್ರ ಚಹಾಲ್, ಈ ಎರಡು ಸಿಕ್ಸರ್ಗಳೊಂದಿಗೆ 1674 ಎಸೆತಗಳಲ್ಲಿ ಒಟ್ಟು 119 ಸಿಕ್ಸರ್ ಹೊಡೆಸಿಕೊಂಡು ಎರಡನೇ ಸ್ಥಾನದ್ದಲ್ಲಿದ್ದಾರೆ.

ಹಾಗೆಯೇ 1988 ಎಸೆತಗಳಲ್ಲಿ, 119 ಸಿಕ್ಸರ್ ತಿಂದಿರುವ ಇಂಗ್ಲೆಂಡ್ ತಂಡದ ಲೆಗ್ ಸ್ಪಿನ್ನರ್ ಆದಿಲ್ ರಶೀದ್, ಚಹಾಲ್ ಜೊತೆಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು 2335 ಎಸೆತಗಳಲ್ಲಿ, 117 ಸಿಕ್ಸರ್ ಬಿಟ್ಟುಕೊಟ್ಟಿರುವ ನ್ಯೂಜಿಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಟಿಮ್ ಸೌಥಿ ಮೂರನೇ ಸ್ಥಾನದಲ್ಲಿದ್ದಾರೆ.

ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ತಂಡದ ಸ್ಪಿನ್ನರ್ ಶಕೀಬ್ ಅಲ್ ಹಸನ್, 2535 ಎಸೆತಗಳಲ್ಲಿ 108 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.




