AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಕೇವಲ 18 ರನ್​ಗಳಿಗೆ ಟೀಂ ಇಂಡಿಯಾದ ಪ್ರಮುಖ 4 ವಿಕೆಟ್ ಪತನ

IND vs AUS: ಅಡಿಲೇಡ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಭಾರತ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 87 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಅವರಂತಹ ಪ್ರಮುಖ ಆಟಗಾರರು ಬೇಗನೇ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಪೃಥ್ವಿಶಂಕರ
|

Updated on: Dec 06, 2024 | 1:51 PM

Share
ಅಡಿಲೇಡ್ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾದ ಸ್ಥಿತಿ ಹದಗೆಟ್ಟಿದೆ. ಸಾಮಾನ್ಯವಾಗಿ, ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡಗಳ ದಾಖಲೆ ಅಡಿಲೇಡ್‌ನಲ್ಲಿ ಉತ್ತಮವಾಗಿದೆ. ಆದರೆ ಟೀಂ ಇಂಡಿಯಾದ ಕಥೆ ಇದಕ್ಕೆ ವ್ಯತಿರಿಕ್ತವಾಗಿದೆ. ಸ್ಕೋರ್ ಬೋರ್ಡ್‌ಗೆ 100 ರನ್ ಸೇರಿಸುವ ಮೊದಲೇ ಭಾರತ ತಂಡದ ಅಗ್ರ ಕ್ರಮಾಂಕ ಪೆವಿಲಿಯನ್ ಸೇರಿಕೊಂಡಿದೆ.

1 / 6
ಟೀಂ ಇಂಡಿಯಾ ಕೇವಲ 18 ರನ್‌ಗಳಿಗೆ ರಾಹುಲ್, ವಿರಾಟ್, ಗಿಲ್ ಮತ್ತು ರೋಹಿತ್ ಅವರ ವಿಕೆಟ್ ಕಳೆದುಕೊಂಡಿದೆ. ಭಾರತ ತಂಡದ ಬ್ಯಾಟಿಂಗ್ ಬೆನ್ನೇಲುಬು ಮುರಿಯುವಲ್ಲಿ ಆಸ್ಟ್ರೇಲಿಯದ ಇಬ್ಬರು ವೇಗಿಗಳು ಮಹತ್ವದ ಪಾತ್ರ ವಹಿಸಿದ್ದಾರೆ. ಮಿಚೆಲ್ ಸ್ಟಾರ್ಕ್ ಜತೆ 18 ತಿಂಗಳ ಬಳಿಕ ಟೆಸ್ಟ್ ತಂಡಕ್ಕೆ ಮರಳಿದ ಬೌಲರ್ ಸ್ಕಾಟ್ ಬೋಲ್ಯಾಂಡ್ ಭಾರತದ ಬ್ಯಾಟ್ಸ್‌ಮನ್​ಗಳನ್ನು ಕಾಡಿದ್ದಾರೆ.

2 / 6
ಅಡಿಲೇಡ್ ಟೆಸ್ಟ್‌ನಲ್ಲಿ ಭಾರತ ತನ್ನ ಮೊದಲ 5 ವಿಕೆಟ್​ಗಳನ್ನು ಕೇವಲ 87 ರನ್‌ಗಳಿಗೆ ಕಳೆದುಕೊಂಡಿತು. ಸ್ಕೋರ್ ಬೋರ್ಡ್ ತನ್ನ ಖಾತೆ ತೆರೆಯುವ ಮೊದಲೇ ಭಾರತ ಯಶಸ್ವಿ ಜೈಸ್ವಾಲ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಪಂದ್ಯದ ಮೊದಲ ಎಸೆತದಲ್ಲೇ ಜೈಸ್ವಾಲ್ ಔಟಾದರು. ಅವರ ವಿಕೆಟ್‌ನ ನಂತರ, ಕೆಎಲ್ ರಾಹುಲ್ ಮತ್ತು ಗಿಲ್ ನಡುವೆ ಎರಡನೇ ವಿಕೆಟ್‌ಗೆ 69 ರನ್‌ಗಳ ಜೊತೆಯಾಟವಿತ್ತು.

3 / 6
ಈ ಇಬ್ಬರು ಕ್ರೀಸ್​ನಲ್ಲಿರುವಷ್ಟು ಸಮಯ ತಂಡ ಬೃಹತ್ ಮೊತ್ತ ಕಲೆಹಾಕುವಂತೆ ಕಾಣುತ್ತಿತ್ತು. ಆದರೆ ಈ ಜೋಡಿಯ ವಿಕೆಟ್ ಪತನದ ನಂತರದ ಅಡಿಲೇಡ್‌ನಲ್ಲಿ ಭಾರತದ ಪೆವಿಲಿಯನ್ ಪರೇಡ್ ಆರಂಭವಾಯಿತು. ರಾಹುಲ್ ಮತ್ತು ಗಿಲ್ ನಡುವಿನ ಜೊತೆಯಾಟದ ನಂತರ ಭಾರತದ ಮುಂದಿನ 4 ವಿಕೆಟ್‌ಗಳು ಕೇವಲ 18 ರನ್‌ಗಳ ಅಂತರದಲ್ಲಿ ಪತನಗೊಂಡವು.

4 / 6
ಬೋಲ್ಯಾಂಡ್ ಮೊದಲು ಗಿಲ್ ರನ್ನು ಔಟ್ ಮಾಡಿ ನಂತರ ನಾಯಕ ರೋಹಿತ್​ರನ್ನು ಬೇಟೆಯಾಡಿದರು. ಟೆಸ್ಟ್‌ನಲ್ಲಿ ಇದು ಮೂರನೇ ಬಾರಿಗೆ ಬೋಲ್ಯಾಂಡ್, ಗಿಲ್ ಅವರನ್ನು ಬಲಿಪಡೆದರೆ, ಇತ್ತ ಬೋಲ್ಯಾಂಡ್ ಎದುರು 28 ಎಸೆತಗಳನ್ನು ಎದುರಿಸಿದ ಗಿಲ್ 3.33 ಸರಾಸರಿಯಲ್ಲಿ ಕೇವಲ 10 ರನ್ ಗಳಿಸಿದರು. ನಾಯಕ ರೋಹಿತ್ ಶರ್ಮಾ ಕೂಡ ಕೇವಲ 3 ರನ್‌ಗಳಿಸಿ ಎಲ್‌ಬಿಡಬ್ಲ್ಯೂ ಆಡಿದರು.

5 / 6
ಭಾರತದ ಪರ ಬಿದ್ದ ಅಗ್ರ 5 ವಿಕೆಟ್‌ಗಳಲ್ಲಿ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದರು. ಅವರು ಜೈಸ್ವಾಲ್ ಅಲ್ಲದೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ವಿಕೆಟ್ ಪಡೆದರು. ಈ 3 ವಿಕೆಟ್‌ಗಳೊಂದಿಗೆ ಸ್ಟಾರ್ಕ್ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಆಸ್ಟ್ರೇಲಿಯಾದ ಬೌಲರ್ ಎನಿಸಿಕೊಂಡರು.

6 / 6
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​

‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್

ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!

ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ

ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?

ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್

ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ

ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು

ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು

ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು