AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಪಾಕಿಸ್ತಾನದ ವಿಶ್ವ ದಾಖಲೆ ಸರಿಗಟ್ಟಿದ ಭಾರತ

T20 World Cup 2026: ಟಿ20 ವಿಶ್ವಕಪ್​ನಲ್ಲಿ ಅತೀ ಹೆಚ್ಚು ಬಾರಿ ನಾಕೌಟ್ ಪಂದ್ಯಗಳನ್ನಾಡಿದ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಹೆಸರಿನಲ್ಲಿದೆ. ಪಾಕ್ ಪಡೆಯು ಮೊದಲ ನಾಲ್ಕು ಆವೃತ್ತಿಗಳಲ್ಲಿ ಸೆಮಿಫೈನಲ್ ಆಡಿತ್ತು. ಇದಾದ ಬಳಿಕ 2021 ಹಾಗೂ 2022 ರಲ್ಲಿ ಸೆಮಿಫೈನಲ್​ಗೇರುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಈ ದಾಖಲೆಯನ್ನು ಟೀಮ್ ಇಂಡಿಯಾ ಸರಿಗಟ್ಟಿದೆ.

ಝಾಹಿರ್ ಯೂಸುಫ್
|

Updated on: Mar 02, 2026 | 2:08 PM

Share
T20 World Cup 2026: ಟಿ20 ವಿಶ್ವಕಪ್​ನ 52ನೇ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್​ಗೇರಲು ಉಭಯ ತಂಡಗಳಿಗೂ ನಿರ್ಣಾಯಕವಾಗಿದ್ದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.

1 / 5
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್​ಗಳಲ್ಲಿ 195 ರನ್​ ಕಲೆಹಾಕಿತು. ಈ ಗುರಿಯನ್ನು 19.2 ಓವರ್​ಗಳಲ್ಲಿ ಚೇಸ್ ಮಾಡಿ ಟೀಮ್ ಇಂಡಿಯಾ 5 ವಿಕೆಟ್​ಗಳ ಜಯ ಸಾಧಿಸಿದೆ.

2 / 5
ಈ ಗೆಲುವಿನೊಂದಿಗೆ ಭಾರತ ತಂಡವು ಟಿ20 ವಿಶ್ವಕಪ್​ನ ಸೆಮಿಫೈನಲ್​ಗೇರಿದೆ. ಈ ಮೂಲಕ ಪಾಕಿಸ್ತಾನ್ ತಂಡದ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಅಂದರೆ ಟಿ20 ವಿಶ್ವಕಪ್​ನಲ್ಲಿ ಅತೀ ಹೆಚ್ಚು ಬಾರಿ ಸೆಮಿಫೈನಲ್​ನಲ್ಲಿ ಕಾಣಿಸಿಕೊಂಡ ತಂಡವೆಂಬ ವಿಶ್ವ ದಾಖಲೆ ಪಾಕಿಸ್ತಾನದ ಹೆಸರಿನಲ್ಲಿತ್ತು.

3 / 5
ಪಾಕಿಸ್ತಾನ್ ತಂಡವು 2007, 2009, 2010, 2012, 2021 ಮತ್ತು 2022 ರ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್ ಪಂದ್ಯವಾಡುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಅಂದರೆ ಪಾಕ್ ಪಡೆ ಟಿ20 ವಿಶ್ವಕಪ್​ನಲ್ಲಿ 6 ಬಾರಿ ಸೆಮಿಫೈನಲ್ ಪಂದ್ಯಗಳನ್ನಾಡಿದೆ.

4 / 5
ಇದೀಗ 6ನೇ ಬಾರಿಗೆ ಸೆಮಿಫೈನಲ್​ಗೇರುವ ಮೂಲಕ ಟೀಮ್ ಇಂಡಿಯಾ ಪಾಕಿಸ್ತಾನ್ ತಂಡದ ವಿಶ್ವ ದಾಖಲೆಯನ್ನು ಸರಿಗಟ್ಟಿದೆ. ಭಾರತ ತಂಡವು 2007, 2014, 2016, 2022, 2024 ಮತ್ತು 2026 ರ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್​ ಹಂತಕ್ಕೇರಿದೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ಸೆಮಿಫೈನಲ್ ರೌಂಡ್​ನಲ್ಲಿ ಕಾಣಿಸಿಕೊಂಡ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

5 / 5
Follow Us
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ

ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ

ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ

ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ

ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!

ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ

ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು

ಉಚಿತ ಗ್ಯಾರಂಟಿಗೆ ‘ಕೈ’ ಶಾಸಕರಿಂದಲೇ ಮತ್ತೆ ಅಪಸ್ವರ

ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?