AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG 1st Test: ಜೈಸ್ವಾಲ್ ಮೇಲೆ ನಿರೀಕ್ಷೆ: ರೋಚಕತೆ ಸೃಷ್ಟಿಸಿದ ಇಂದಿನ ಎರಡನೇ ದಿನದಾಟ

India vs England Second Test, Day 2: ಭಾರತದ ಸ್ಪಿನ್ ದಾಳಿಗೆ ನಲುಗಿದ ಆಂಗ್ಲರು ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗದೆ 246 ರನ್​ಗಳಿಗೆ ಆಲೌಟ್. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ. 127 ರನ್​ಗಳ ಹಿನ್ನಡೆಯಲ್ಲಿದೆ. 76 ರನ್ ಗಳಿಸಿರುವ ಜೈಸ್ವಾಲ್ ಮೇಲೆ ಎಲ್ಲರ ಕಣ್ಣಿದ್ದು ಎರಡನೇ ದಿನದಾಟ ರೋಚಕತೆ ಸೃಷ್ಟಿಸಿದೆ.

Vinay Bhat
|

Updated on: Jan 26, 2024 | 6:45 AM

Share
ಹೈದರಾಬಾದ್​ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. ಟಾಸ್ ಸೋತರೂ ಮೊದಲ ದಿನ ಯಶಸ್ಸು ಕಂಡ ರೋಹಿತ್ ಪಡೆ ಇಂಗ್ಲೆಂಡ್ ತಂಡವನ್ನು 246 ರನ್​ಗಳಿಗೆ ಆಲೌಟ್ ಮಾಡಿತು.

1 / 6
ಭಾರತದ ಸ್ಪಿನ್ ದಾಳಿಗೆ ನಲುಗಿದ ಆಂಗ್ಲರು ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ. 127 ರನ್​ಗಳ ಹಿನ್ನಡೆಯಲ್ಲಿದೆ. 76 ರನ್ ಗಳಿಸಿರುವ ಜೈಸ್ವಾಲ್ ಮೇಲೆ ಎಲ್ಲರ ಕಣ್ಣಿದ್ದು ಎರಡನೇ ದಿನದಾಟ ರೋಚಕತೆ ಸೃಷ್ಟಿಸಿದೆ.

2 / 6
ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಝಾಕ್ ಕ್ರಾಲಿ (20 ರನ್) ಹಾಗೂ ಬೆನ್ ಡಕೆಟ್ (35 ರನ್) ಮೊದಲ ವಿಕೆಟ್​ಗೆ 55 ರನ್​ಗಳ ಜೊತೆಯಾಟ ನೀಡಿದರು. ನಂತರ ಬಂದ ಒಲಿ ಪೋಪ್ ಕೇವಲ 1 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ತಂಡದ ಮಾಜಿ ನಾಯಕ ಜೋ ರೂಟ್ 29 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು.

3 / 6
ಅನುಭವಿ ಜಾನಿ ಬೈರ್​ಸ್ಟೋ ಕೂಡ 37 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆದರೆ ಕೆಳಕ್ರಮಾಂಕದಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ಬೆನ್ ಸ್ಟೋಕ್ಸ್ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 70 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ನಾಯಕನಿಗೆ ಸಾಥ್ ನೀಡಿದ ಟಾಮ್ ಹಾರ್ಟ್ಲಿ 23 ರನ್​ಗಳಿಗೆ ಕಾಣಿಕೆ ನೀಡಿದರು.

4 / 6
ಟೀಮ್ ಇಂಡಿಯಾ ಪರ ಸ್ಪಿನ್ನರ್‌ಗಳು ಚಾಣಾಕ್ಷತನದ ಬೌಲಿಂಗ್ ಮಾಡಿ ಇಂಗ್ಲೆಂಡ್ ಆಟಗಾರರ ಬಝ್ ಬಾಲ್ ಕ್ರಿಕೆಟ್​ಗೆ ತಕ್ಕ ತಿರುಗೇಟು ನೀಡಿದರು. ತಂಡದ ಪರ ರವೀಂದ್ರ ಜಡೇಜಾ ಹಾಗೂ ಆರ್​ ಅಶ್ವಿನ್ ತಲಾ 3 ವಿಕೆಟ್ ಪಡೆದರೆ, ಮತ್ತೊಬ್ಬ ಆಫ್ ಸ್ಪಿನ್ನರ್‌ ಅಕ್ಷರ್ ಪಟೇಲ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ತಲಾ ವಿಕೆಟ್ ಪಡೆದರು.

5 / 6
ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ (24) ಸ್ಫೋಟಕ ಆರಂಭ ನೀಡಿದರು (80 ರನ್​ಗಳ ಜೊತೆಯಾಟ). ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಮುಂದಾದ ಜೈಸ್ವಾಲ್ 70 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 70 ರನ್ ಕಲೆಹಾಕಿದ್ದಾರೆ. ಗಿಲ್ ಅಜೇಯ 14 ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

6 / 6
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ

ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ

ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ

ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ

ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು

ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ