- Kannada News Photo gallery Cricket photos Indian Womens cricketer Veda Krishnamurthy gets engaged with Karnataka Ranji cricketer Arjun Hoysala see pics
ಕರ್ನಾಟಕ ರಣಜಿ ಕ್ರಿಕೆಟರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವೇದಾ ಕೃಷ್ಣಮೂರ್ತಿ; ಫೋಟೋ ನೋಡಿ
Veda Krishnamurthy-Arjun Hoysala: ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಪ್ರೇಮ ನಿವೇದನಾ ಪರ್ವ ಮುಗಿಸಿದ ವೇದ-ಅರ್ಜುನ್ ಈಗ ನಿಶ್ಚಿತಾರ್ಥವನ್ನು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನೆರವೇರಿಸಿಕೊಂಡಿದ್ದಾರೆ.
Updated on: Sep 25, 2022 | 3:46 PM

ಕೆಲ ದಿನಗಳ ಹಿಂದೆ ಕರ್ನಾಟಕದ ರಣಜಿ ತಂಡದ ಆಟಗಾರ ಅರ್ಜುನ್ ಹೊಯ್ಸಳ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಿರುವುದಾಗಿ ಟೀಂ ಇಂಡಿಯಾ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಹೇಳಿಕೊಂಡಿದ್ದರು. ಈ ಹಿಂದೆ ವೇದಾ ಅವರು ತಮ್ಮ ಗೆಳೆಯ ಮತ್ತು ಈಗ ನಿಶ್ಚಿತ ವರ ಅರ್ಜುನ್ ಹೊಯ್ಸಳ ಅವರೊಂದಿಗೆ ಕಾಣಿಸಿಕೊಂಡಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಅರ್ಜುನ್ ಮೊಣಕಾಲಿನ ಮೇಲೆ ಕುಳಿತು ತುಂಬಾ ರೋಮ್ಯಾಂಟಿಕ್ ಆಗಿ ವೇದಾಗೆ ಪ್ರಪೋಸ್ ಮಾಡುತ್ತಿರುವುದು ಕಂಡುಬಂದಿತ್ತು.

ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಪ್ರೇಮ ನಿವೇದನಾ ಪರ್ವ ಮುಗಿಸಿದ ವೇದ-ಅರ್ಜುನ್ ಈಗ ನಿಶ್ಚಿತಾರ್ಥವನ್ನು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನೆರವೇರಿಸಿಕೊಂಡಿದ್ದಾರೆ. ಈ ಪ್ರೇಮ ಪಕ್ಷಿಗಳು ಎಂಗೇಜ್ಮೆಂಟ್ ಮಾಡಿಕೊಂಡಿರುವ ಕೆಲವು ಫೋಟೋಗಳನ್ನು ಅರ್ಜುನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೇದಾ ಕೃಷ್ಣಮೂರ್ತಿ ಅವರೊಂದಿಗಿನ ನಿಶ್ಚಿತಾರ್ಥ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡ ಅರ್ಜುನ್, ಈ ಶುಭಾ ಸಮಾರಂಭಕ್ಕೆ ಶುಭಾಶಯ ಮತ್ತು ಆಶೀರ್ವಾದಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 18 ರಂದು (ಕಳೆದ ಭಾನುವಾರ) ವೇದಾ- ಅರ್ಜುನ್ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಕುಟುಂಬದ ಸಂಬಂಧಿಕರು ಮತ್ತು ಆಪ್ತರು ಭಾಗವಹಿಸಿದ್ದರು.

ವೇದಾ ಕೃಷ್ಣಮೂರ್ತಿಯವರಿಗೆ 2021ನೇ ಇಸವಿ ವೃತ್ತಿಜೀವನ ವಿಚಾರದಲ್ಲಿ ಅಷ್ಟಾಗಿ ಉತ್ತಮವಾಗಿರಲಿಲ್ಲ. ಕಳೆದ ವರ್ಷ ಕೇವಲ 2 ವಾರಗಳ ಅಂತರದಲ್ಲಿ ಕೊರೊನಾದಿಂದ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡರು. ಕೇವಲ 18 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವೇದಾ, ಭಾರತದ ಪರ 48 ODI ಮತ್ತು 76 T20 ಪಂದ್ಯಗಳನ್ನು ಆಡಿದ್ದಾರೆ. ಇದುವರೆಗೆ 10 ಅರ್ಧಶತಕಗಳನ್ನು ಬಾರಿಸಿರುವ ವೇದಾ ಒಂದೇ ಒಂದು ಶತಕವನ್ನು ಗಳಿಸಲು ಸಾಧ್ಯವಾಗಿಲ್ಲ.



















