AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಎಂತಹ ಆಟಗಾರ…ವಿರಾಟ್ ಕೊಹ್ಲಿಯ ಔಟ್​ ಅನ್ನು ಸಂಭ್ರಮಿಸಿದ ಗೌತಮ್ ಗಂಭೀರ್

IPL 2023 Kannada: ಈ ಹಿಂದೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ವೃದ್ಧಿಮಾನ್ ಸಾಹ ಅವರನ್ನು ಹೊಗಳಿ ವಿರಾಟ್ ಕೊಹ್ಲಿ ವಾಟ್ ಎ ಪ್ಲೇಯರ್​ ಎಂದು ಪೋಸ್ಟ್ ಹಾಕಿದ್ದರು.

TV9 Web
| Updated By: ಝಾಹಿರ್ ಯೂಸುಫ್

Updated on: May 10, 2023 | 3:56 PM

IPL 2023: ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಜಟಾಪಟಿ ಸದ್ಯಕ್ಕಂತು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. 2013 ರಲ್ಲಿ ಮೈದಾನದಲ್ಲೇ ಕಿತ್ತಾಡುವ ಮೂಲಕ ಶುರು ಹಚ್ಚಿಕೊಂಡಿದ್ದ ಈ ವಾಕ್ಸಮರವು 2023 ರಲ್ಲೂ ಮುಂದುವರೆದಿದೆ.

1 / 9
ಈ ಬಾರಿ ವಿರಾಟ್ ಕೊಹ್ಲಿ ಆಟಗಾರನಾಗಿದ್ದರೆ, ಗೌತಮ್ ಗಂಭೀರ್ ಮೆಂಟರ್​ ಸ್ಥಾನದಲ್ಲಿದ್ದಾರೆ. ಇದಾಗ್ಯೂ ಇಬ್ಬರ ನಡುವಣ ಕಿತ್ತಾಟವು ತಾರಕ್ಕೇರಿರುವುದು ವಿಶೇಷ.

2 / 9
ಏಪ್ರಿಲ್ 10 ರಂದು ಬೆಂಗಳೂರಿನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದ ಗೆಲುವಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಆಕ್ರೋಶಭರಿತರಾಗಿ ಸಂಭ್ರಮಿಸಿದ್ದರು. ಈ ಸಂಭ್ರಮದ ನಡುವೆ ಆರ್​ಸಿಬಿ ಅಭಿಮಾನಿಗಳನ್ನು ಬಾಯಿ ಮುಚ್ಚಿಕೊಂಡಿರುವಂತೆ ಸೂಚಿಸಿದ್ದರು.

3 / 9
ಇದಾದ ಬಳಿಕ ಲಕ್ನೋದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಸಂಭ್ರಮದ ಮೂಲಕ ತಿರುಗೇಟು ನೀಡಿದ್ದರು. ಇತ್ತ ಕೊಹ್ಲಿಯ ಸಂಭ್ರಮದಿಂದ ಕುಪಿತಗೊಂಡಿದ್ದ ಗಂಭೀರ್ ಪಂದ್ಯದ ಬಳಿಕ ಜಗಳಕ್ಕಿಳಿದಿದ್ದರು. ಇದಾದ ಬಳಿಕ ಇಬ್ಬರಿಗೂ ಬಿಸಿಸಿಐ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದ್ದರು.

4 / 9
ಈ ದಂಡದ ಬಳಿಕ ಎಲ್ಲವೂ ಮುಗಿಯಿತು ಅಂದುಕೊಳ್ಳುವಾಗಲೇ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ಆಟಗಾರರನ್ನು ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಡಿಹೊಗಳಿದ್ದರು.

5 / 9
ಇದೀಗ ಈ ಸೋಷಿಯಲ್ ಮೀಡಿಯಾ ಪೋಸ್ಟ್​​ಗೂ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟ್ ಆಗುತ್ತಿದ್ದಂತೆ ಗಂಭೀರ್ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದು ಹಾಕಿ ಸಂಭ್ರಮಿಸಿದ್ದರು. ಅದು ಕೂಡ ಥೇಟ್ ಕಿಂಗ್ ಕೊಹ್ಲಿ ಹಾಕಿದ ಪೋಸ್ಟ್ ಅನ್ನು ಹೋಲುವಂತೆ ಎಂಬುದೇ ವಿಶೇಷ.

6 / 9
ಹೌದು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೇಸನ್ ಬೆಹ್ರೆನ್​ಡಾರ್ಫ್ ಎಸೆದ ಮೊದಲ ಓವರ್​ನಲ್ಲೇ ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿ ಔಟಾಗಿದ್ದರು. ಇತ್ತ ಕೊಹ್ಲಿ ಔಟಾಗುತ್ತಿದ್ದಂತೆ ಅತ್ತ ಗಂಭೀರ್ ಇನ್​ಸ್ಟಾಗ್ರಾಮ್​ನಲ್ಲಿ ವಾಟ್ ಎ ಪ್ಲೇಯರ್ ಎಂದು ಜೇಸನ್ ಬೆಹ್ರೆನ್​ಡಾರ್ಫ್ ಅವರ ಫೋಟೋವನ್ನು ಸ್ಟೋರಿ ಹಾಕಿದ್ದರು.

7 / 9
ಈ ಕೌಂಟರ್ ಅಟ್ಯಾಕ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಗಂಭೀರ್ ಪೋಸ್ಟ್​ ಅನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗೌತಿಯ ಇನ್​ಸ್ಟಾ ಸ್ಟೋರಿಯ ಸ್ಕ್ರೀನ್ ಶಾಟ್​ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.

8 / 9
 ವಿಶೇಷ ಎಂದರೆ ಈ ಹಿಂದೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ವೃದ್ಧಿಮಾನ್ ಸಾಹ ಅವರನ್ನು ಹೊಗಳಿ ವಿರಾಟ್ ಕೊಹ್ಲಿ ವಾಟ್ ಎ ಪ್ಲೇಯರ್​ ಎಂದು ಪೋಸ್ಟ್ ಹಾಕಿದ್ದರು. ಇದೀಗ ಕೊಹ್ಲಿಯ ವಿಕೆಟ್​ ಅನ್ನು ಸಂಭ್ರಿಮಿಸುವ ಮೂಲಕ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.

9 / 9
Follow us
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ

ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ

ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ

ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?

ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ

ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ

ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?

‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ

ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?