AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sunil Narine: 7 ಓವರ್, 7 ಮೇಡನ್, 7 ವಿಕೆಟ್​: ಸುನಿಲ್ ನರೈನ್ ಮ್ಯಾಜಿಕ್..!

IPL 2023 Kannada: ಐಪಿಎಲ್​ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಸುನಿಲ್ ನರೈನ್ ಅವರ ಈ ಸ್ಪಿನ್​ ಮೋಡಿಯು ಇದೀಗ ಎಲ್ಲರು ನಿಬ್ಬೆರಗಾಗುವಂತೆ ಮಾಡಿದೆ.

TV9 Web
| Edited By: |

Updated on: Mar 20, 2023 | 8:31 PM

Share
7 ಓವರ್​ನಲ್ಲಿ ಒಂದೇ ಒಂದು ರನ್​ ನೀಡದೇ 7 ವಿಕೆಟ್ ಪಡೆಯಲು ಸಾಧ್ಯವೇ? ಕ್ರಿಕೆಟ್​ ಅಂಗಳದಲ್ಲಿ ಅಸಾಧ್ಯ ಎನಿಸುವ ಸಾಧನೆಯನ್ನು ಮಾಡಿ ತೋರಿಸಿದ್ದಾರೆ ವೆಸ್ಟ್ ಇಂಡೀಸ್​ನ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್.

1 / 6
ವೆಸ್ಟ್ ಇಂಡೀಸ್​ನ ಪೋರ್ಟ್-ಆಫ್-ಸ್ಪೇನ್‌ನಲ್ಲಿ ಟಿ ಅ್ಯಂಡ್ ಟಿ ಬೋರ್ಡ್​ ಪ್ರೀಮಿಯರ್‌ಶಿಪ್ ಡಿವಿಷನ್ I ಟೂರ್ನಿ ನಡೆಯುತ್ತಿದ್ದು,  ಈ ಟೂರ್ನಿಯಲ್ಲಿ ಕ್ವೀನ್ಸ್ ಪಾರ್ಕ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದ ಸುನಿಲ್ ನರೈನ್ ಏಳು ಮೇಡನ್ ಓವರ್‌ಗಳನ್ನು ಎಸೆದು 7 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

2 / 6
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ಲಾರ್ಕ್ ರೋಡ್ ಯುನೈಟೆಡ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ನಿರೀಕ್ಷೆಯಲ್ಲಿತ್ತು. ಆದರೆ ಸುನಿಲ್ ನರೈನ್ ದಾಳಿಗಿಳಿಯುತ್ತಿದ್ದಂತೆ ತಂಡದ ಲೆಕ್ಕಾಚಾರಗಳು ತಲೆಕೆಳಗಾದವು.

3 / 6
ಮೊದಲ ಓವರ್​ನಲ್ಲೇ ಜಾನ್ ರಸ್ ಜಗ್ಗೇಸರ್ ಮತ್ತು ಸಿಯಾನ್ ಹ್ಯಾಕೆಟ್ ವಿಕೆಟ್ ಪಡೆದ ನರೈನ್, ಆ ಬಳಿಕ ಡಿಜೋರ್ನ್ ಚಾರ್ಲ್ಸ್, ನಿಕೋಲಸ್ ಸೂಕ್‌ಡಿಯೋಸಿಂಗ್ ಮತ್ತು ಜೋಶುವಾ ಪರ್ಸಾಡ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಇದಾದ ಬಳಿಕ ಮತ್ತೆರಡು ವಿಕೆಟ್ ಉರುಳಿಸುವ ಮೂಲಕ 7 ಮೇಡನ್ ಓವರ್​ಗಳಲ್ಲಿ 7 ವಿಕೆಟ್​ಗಳ ಸಾಧನೆ ಮಾಡಿದರು.

4 / 6
ಸುನಿಲ್ ನರೈನ್ ಅವರ ಸ್ಪಿನ್ ಮೋಡಿಗೆ ತತ್ತರಿಸಿದ ಕ್ಲಾರ್ಕ್ ರೋಡ್ ಯುನೈಟೆಡ್ ತಂಡವು ಕೇವಲ 24 ಓವರ್‌ಗಳಲ್ಲಿ 76 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಈ ಏಳು ವಿಕೆಟ್​ಗಳ ಸಾಧನೆಯೊಂದಿಗೆ ಈ ಟೂರ್ನಿಯಲ್ಲಿ ಸತತ 4ನೇ ಬಾರಿಗೆ 5 ವಿಕೆಟ್​ಗಳನ್ನು ಪಡೆದ ವಿಶೇಷ ದಾಖಲೆಯನ್ನು ಕೂಡ ಸುನಿಲ್ ನರೈನ್ ನಿರ್ಮಿಸಿದ್ದಾರೆ.

5 / 6
ಐಪಿಎಲ್​ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಸುನಿಲ್ ನರೈನ್ ಅವರ ಈ ಸ್ಪಿನ್​ ಮೋಡಿಯು ಇದೀಗ ಎಲ್ಲರು ನಿಬ್ಬೆರಗಾಗುವಂತೆ ಮಾಡಿದೆ. ಏಕೆಂದರೆ ಈ ಬಾರಿ ಕೂಡ ನರೈನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದು, ಭಾರತೀಯ ಸ್ಪಿನ್ ಸ್ನೇಹಿ ಪಿಚ್​ಗಳಲ್ಲಿ ವಿಂಡೀಸ್ ಸ್ಪಿನ್ ಮಾಂತ್ರಿಕ ಮೋಡಿ ಮಾಡುವ ನಿರೀಕ್ಷೆಯಿದೆ.

6 / 6
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ

ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು

ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ

ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ

ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್

ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ

ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ

5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್

‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ