IPL 2023: ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಸಿಕ್ಸ್ ಹೊಡೆಸಿಕೊಂಡ ಬೌಲರ್ ಯಾರು ಗೊತ್ತಾ?

IPL 2023 Kannada: ಗೇಲ್ ಐಪಿಎಲ್​ನಲ್ಲಿ 357 ಸಿಕ್ಸ್​ಗಳನ್ನು ಬಾರಿಸಿ ದಾಖಲೆ ಬರೆದಿಟ್ಟಿದ್ದಾರೆ. ಮತ್ತೊಂದೆಡೆ ಐಪಿಎಲ್​ನಲ್ಲಿ ಅತೀ ಹೆಚ್ಚು ಸಿಕ್ಸ್​ ಹೊಡೆಸಿಕೊಂಡ ಕೆಲ ಬೌಲರ್​ಗಳಿದ್ದಾರೆ. ಆ ಬೌಲರ್​ಗಳು ಯಾರೆಂದರೆ...

TV9 Web
| Updated By: ಝಾಹಿರ್ ಯೂಸುಫ್

Updated on: Apr 19, 2023 | 11:35 PM

IPL 2023: ಐಪಿಎಲ್ ಶುರುವಾಗಿ 15 ವರ್ಷಗಳೇ ಕಳೆದಿವೆ. ಇದೀಗ 16ನೇ ಸೀಸನ್​ ಐಪಿಎಲ್ ಟೂರ್ನಿಯು ಭರದಿಂದ ಸಾಗುತ್ತಿದೆ. ಹೊಡಿಬಡಿ ಆಟವೆಂದೇ ಖ್ಯಾತಿ ಪಡೆದಿರುವ ಈ ಟೂರ್ನಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಹೀಗೆ ನಿರ್ಮಾಣವಾದ ದಾಖಲೆಗಳಲ್ಲಿ ಸಿಕ್ಸರ್​ಗಳ ದಾಖಲೆ ಪ್ರಮುಖವಾದವು.

1 / 7
ಇಲ್ಲಿ ಅತೀ ಹೆಚ್ಚು ಸಿಕ್ಸ್​ಗಳನ್ನು ಸಿಡಿಸಿದ ದಾಖಲೆ ಇರುವುದು ಕ್ರಿಸ್ ಗೇಲ್ ಹೆಸರಿನಲ್ಲಿ. ಗೇಲ್ ಐಪಿಎಲ್​ನಲ್ಲಿ 357 ಸಿಕ್ಸ್​ಗಳನ್ನು ಬಾರಿಸಿ ದಾಖಲೆ ಬರೆದಿಟ್ಟಿದ್ದಾರೆ. ಮತ್ತೊಂದೆಡೆ ಐಪಿಎಲ್​ನಲ್ಲಿ ಅತೀ ಹೆಚ್ಚು ಸಿಕ್ಸ್​ ಹೊಡೆಸಿಕೊಂಡ ಕೆಲ ಬೌಲರ್​ಗಳಿದ್ದಾರೆ. ಆ ಬೌಲರ್​ಗಳು ಯಾರೆಂದರೆ...

2 / 7
1- ಪಿಯೂಷ್ ಚಾವ್ಲಾ: ಐಪಿಎಲ್​ನಲ್ಲಿ 169 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಪಿಯೂಷ್ ಚಾವ್ಲಾ ಒಟ್ಟು 185 ಸಿಕ್ಸ್​ಗಳನ್ನು ಹೊಡೆಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್​ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸ್ ಚಚ್ಚಿಸಿಕೊಂಡ ಬೌಲರ್ ಎನಿಸಿಕೊಂಡಿದ್ದಾರೆ.

3 / 7
2- ಯುಜ್ವೇಂದ್ರ ಚಹಾಲ್: ಐಪಿಎಲ್​ನಲ್ಲಿ ಸಿಕ್ಸ್ ಹೊಡೆಸಿಕೊಂಡ ಬೌಲರ್​ಗಳ ಪಟ್ಟಿಯಲ್ಲಿ ಚಹಾಲ್ 2ನೇ ಸ್ಥಾನದಲ್ಲಿದ್ದಾರೆ. ಯುಜ್ವೇಂದ್ರ ಚಹಾಲ್ 135 ಇನಿಂಗ್ಸ್​ಗಳಲ್ಲಿ 182 ಸಿಕ್ಸ್ ಹೊಡೆಸಿಕೊಂಡಿದ್ದಾರೆ.

4 / 7
3- ರವೀಂದ್ರ ಜಡೇಜಾ: ಈ ಪಟ್ಟಿಯಲ್ಲಿ ಜಡೇಜಾ ಮೂರನೇ ಸ್ಥಾನದಲ್ಲಿದ್ದು, 186 ಇನಿಂಗ್ಸ್​ಗಳಲ್ಲಿ 180 ಸಿಕ್ಸ್​ಗಳನ್ನು ಚಚ್ಚಿಸಿಕೊಂಡಿದ್ದಾರೆ.

5 / 7
4- ಅಮಿತ್ ಮಿಶ್ರಾ: ಐಪಿಎಲ್​ನಲ್ಲಿ 156 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅಮಿತ್ ಮಿಶ್ರಾ 176 ಸಿಕ್ಸ್​ಗಳನ್ನು ಹೊಡೆಸಿಕೊಂಡಿದ್ದಾರೆ.

6 / 7
5- ರವಿಚಂದ್ರನ್ ಅಶ್ವಿನ್: 186 ಐಪಿಎಲ್​ ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್ ಒಟ್ಟು 173 ಸಿಕ್ಸ್​ಗಳನ್ನು ಹೊಡೆಸಿಕೊಂಡಿದ್ದಾರೆ.

7 / 7
Follow us