AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: KGF ತೂಫಾನ್: ಬರೋಬ್ಬರಿ 108 ರನ್​ಗಳು​..!

IPL 2023 Kannada: ಈ ಪಂದ್ಯದಲ್ಲಿ 4 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಟಾಪ್-5 ಆಟಗಾರರ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ.

TV9 Web
| Edited By: |

Updated on: Apr 10, 2023 | 11:33 PM

Share
IPL 2023 RCB vs LSG Highlights: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ KGF ಬಿರುಗಾಳಿ ಎಬ್ಬಿಸಿದ್ದಾರೆ. ಈ ಬಿರುಗಾಳಿಗೆ ಸಿಕ್ಸ್​ಗಳ ಸುರಿಮಳೆಯಾಗಿರುವುದು ವಿಶೇಷ.

1 / 8
ಹೌದು, ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಕನ್ನಡಿಗನ ನಿರ್ಧಾರ ತಪ್ಪು ಎಂಬುದನ್ನು ವಿರಾಟ್ ಕೊಹ್ಲಿ ಆರಂಭದಲ್ಲೇ ನಿರೂಪಿಸಿದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ ಆರ್​ಸಿಬಿಗೆ ಸ್ಪೋಟಕ ಆರಂಭ ಒದಗಿಸಿದರು.

2 / 8
ಪವರ್​ಪ್ಲೇನಲ್ಲೇ ಲಕ್ನೋ ಬೌಲರ್​ಗಳ ಬೆಂಡೆತ್ತಿದ ವಿರಾಟ್ ಕೊಹ್ಲಿ-ಫಾಫ್ ಡುಪ್ಲೆಸಿಸ್ ಜೋಡಿ 56 ರನ್​ ಕಲೆಹಾಕಿದ್ದರು. ಆ ಬಳಿಕ 44 ಎಸೆತಗಳಲ್ಲಿ 61 ರನ್​ ಬಾರಿಸಿ ಕೊಹ್ಲಿ ನಿರ್ಗಮಿಸಿದರು. ಇದಾದ ಬಳಿಕ ಜೊತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ 7 ಓವರ್​ಗಳಲ್ಲಿ 48 ರನ್​ ಕಲೆಹಾಕಿದರು.

3 / 8
ಇನ್ನು ಆರ್​ಸಿಬಿ ತಂಡದ ಅಸಲಿ ಆಟ ಶುರುವಾಗಿದ್ದೇ ಕೊನೆಯ 7 ಓವರ್​ಗಳಿರುವಾಗ..ಈ ಹಂತದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು.

4 / 8
ಪರಿಣಾಮ ಕೊನೆಯ 42 ಎಸೆತಗಳಲ್ಲಿ ಆರ್​ಸಿಬಿ ತಂಡ ಕಲೆಹಾಕಿದ್ದು ಬರೋಬ್ಬರಿ 108 ರನ್​ಗಳು. ಅಂದರೆ ಪ್ರತಿ ಓವರ್​ಗೆ 15.42 ಸರಾಸರಿಯಲ್ಲಿ ರನ್ ಬಾರಿಸಿದ್ದರು.

5 / 8
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 4 ಸಿಕ್ಸ್ ಸಿಡಿಸಿದರೆ, ಫಾಫ್ ಡುಪ್ಲೆಸಿಸ್ 5 ಸಿಕ್ಸ್ ಬಾರಿಸಿದರು. ಹಾಗೆಯೇ ಗ್ಲೆನ್ ಮ್ಯಾಕ್ಸ್​ವೆಲ್ 6 ಸಿಕ್ಸ್ ಸಿಡಿಸುವ ಮೂಲಕ ಒಂದೆಜ್ಜೆ ಮುಂದೆ ಹೋದರು.

6 / 8
K (ಕೊಹ್ಲಿ) G (ಗ್ಲೆನ್ ಮ್ಯಾಕ್ಸ್​ವೆಲ್) F (ಫಾಫ್ ಡುಪ್ಲೆಸಿಸ್)..ತ್ರಿಮೂರ್ತಿಗಳ ಈ ತೂಫಾನ್ ಬ್ಯಾಟಿಂಗ್ ಪರಿಣಾಮ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಆರ್​ಸಿಬಿ ​212 ರನ್ ಕಲೆಹಾಕಿತು.

7 / 8
ಇನ್ನು ಈ ಪಂದ್ಯದಲ್ಲಿ KGF 212 ರನ್​ ಬಾರಿಸಿದರೂ ಆರ್​ಸಿಬಿ ತಂಡಕ್ಕೆ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದೇ ವಿಪರ್ಯಾಸ.

8 / 8
Follow Us
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್

ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ

20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್

ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ

ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ

ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ

ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ

ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್

ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ

ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್