- Kannada News Photo gallery Cricket photos Kannada News | IPL 2023: Shubman Gill and Yashasvi Jaiswal Creates boundaries Record
IPL 2023: ಬರೋಬ್ಬರಿ 3298 ಬೌಂಡರಿಗಳು: ಅತೀ ಹೆಚ್ಚು ಸಿಕ್ಸ್-ಫೋರ್ ಬಾರಿಸಿದ್ದು ಯಾರು ಗೊತ್ತಾ?
IPL 2023 Records: ಇಬ್ಬರು ಯುವ ದಾಂಡಿಗರಿಗೆ ಐಪಿಎಲ್ನ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.
Updated on: May 31, 2023 | 9:21 PM

ಈ ಬಾರಿಯ ಐಪಿಎಲ್ನಲ್ಲಿ ಬ್ಯಾಟ್ಸ್ಮನ್ಗಳದ್ದೇ ಅಬ್ಬರ. ಇದಕ್ಕೆ ಸಾಕ್ಷಿಯೇ ಈ ಸಲ ದಾಖಲಾಗಿರುವ ಬೌಂಡರಿಗಳ ಸಂಖ್ಯೆ. ಅಂದರೆ ಈ ಬಾರಿಯ ಐಪಿಎಲ್ನ 74 ಪಂದ್ಯಗಳಲ್ಲಿ ಒಟ್ಟು 3298 ಬೌಂಡರಿಗಳು ಮೂಡಿಬಂದಿವೆ.

3298 ಬೌಂಡರಿಗಳಲ್ಲಿ 2174 ಫೋರ್ಗಳಿದ್ದರೆ, 1124 ಸಿಕ್ಸರ್ಗಳಿವೆ. ಇದು ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ದಾಖಲೆಯಾಗಿದೆ. ವಿಶೇಷ ಎಂದರೆ ಈ ಬಾರಿ ಅತಿರಥರನ್ನು ಹಿಂದಿಕ್ಕಿ ಇಬ್ಬರು ಯುವ ಆಟಗಾರರೇ ಬೌಂಡರಿ ಬಾರಿಸುವ ವಿಷಯದಲ್ಲಿ ಮುಂದಿದ್ದಾರೆ.

ಅಂದರೆ ಈ ಬಾರಿಯ ಐಪಿಎಲ್ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಶ್ರೇಯಸ್ಸು ಶುಭ್ಮನ್ ಗಿಲ್ಗೆ ಸಲ್ಲುತ್ತದೆ. ಗುಜರಾತ್ ಟೈಟಾನ್ಸ್ ಪರ ಆರಂಭಿಕರಾಗಿ ಆಡಿದ್ದ ಗಿಲ್ ಒಟ್ಟು 118 ಬೌಂಡರಿಗಳನ್ನು ಬಾರಿಸಿದ್ದಾರೆ. ಇದರಲ್ಲಿ 33 ಸಿಕ್ಸ್ ಹಾಗೂ 85 ಫೋರ್ಗಳು ಒಳಗೊಂಡಿವೆ.

ಇನ್ನು ದ್ವಿತೀಯ ಸ್ಥಾನದಲ್ಲಿರುವುದು ಯಶಸ್ವಿ ಜೈಸ್ವಾಲ್. ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಬ್ಯಾಟ್ ಬೀಸಿರುವ ಜೈಸ್ವಾಲ್ 26 ಸಿಕ್ಸ್ ಹಾಗೂ 82 ಫೋರ್ಗಳನ್ನು ಒಳಗೊಂಡಂತೆ ಒಟ್ಟು 108 ಬೌಂಡರಿಗಳನ್ನು ಬಾರಿಸಿದ್ದಾರೆ.

ಇದಾಗ್ಯೂ ಇಬ್ಬರು ಯುವ ದಾಂಡಿಗರಿಗೆ ಐಪಿಎಲ್ನ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ. ಅಂದರೆ ಐಪಿಎಲ್ ಇತಿಹಾಸದಲ್ಲೇ ಒಂದೇ ಸೀಸನ್ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ದಾಖಲೆ ಇರುವುದು ಜೋಸ್ ಬಟ್ಲರ್ ಹೆಸರಿನಲ್ಲಿ.

2022 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ಬ್ಯಾಟ್ ಬೀಸಿದ್ದ ಬಟ್ಲರ್ ಒಟ್ಟು 128 ಬೌಂಡರಿಗಳನ್ನು ಸಿಡಿಸಿದ್ದರು. ಈ ವೇಳೆ 45 ಸಿಕ್ಸ್ ಹಾಗೂ 83 ಫೋರ್ಗಳನ್ನು ಬಾರಿಸಿದ್ದರು.

ಇನ್ನು ಐಪಿಎಲ್ ಇತಿಹಾಸದಲ್ಲಿ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಬೌಂಡರಿ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016 ರಲ್ಲಿ ಕಿಂಗ್ ಕೊಹ್ಲಿ 38 ಸಿಕ್ಸ್ ಹಾಗೂ 83 ಫೋರ್ನೊಂದಿಗೆ ಒಟ್ಟು 121 ಬೌಂಡರಿಗಳನ್ನು ಬಾರಿಸಿದ್ದರು. ಇದೀಗ 118 ಬೌಂಡರಿಗಳನ್ನು ಬಾರಿಸಿರುವ ಶುಭ್ಮನ್ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.









