AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಈ ಬಾರಿ ಪ್ಲೇಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಸ್ಟೀವ್ ಸ್ಮಿತ್

IPL 2023 Kannada: ಐಪಿಎಲ್​ ಬಗ್ಗೆ ಪ್ರಕ್ರಿಯಿಸಿದ್ದ ಸ್ಟೀವ್ ಸ್ಮಿತ್, ಈ ಸಲ ಪ್ಲೇಆಫ್ ಹಂತಕ್ಕೇರುವ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳನ್ನೂ ಕೂಡ ನೀಡಿದ್ದಾರೆ.

TV9 Web
| Edited By: |

Updated on: Mar 30, 2023 | 11:09 PM

Share
ಐಪಿಎಲ್​ನ 16ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಈ ಬಾರಿ ಪ್ಲೇಆಫ್ ಪ್ರವೇಶಿಸುವ ನಾಲ್ಕು ತಂಡಗಳಾವುವು ಎಂಬ ಚರ್ಚೆ ಶುರುವಾಗಿದೆ. ಈ ಚರ್ಚೆಗಳ ನಡುವೆ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಸ್ಟೀವ್ ಸ್ಮಿತ್ ನುಡಿದಿರುವ ಭವಿಷ್ಯ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

1 / 7
ಐಪಿಎಲ್​ ಬಗ್ಗೆ ಪ್ರಕ್ರಿಯಿಸಿದ್ದ ಸ್ಟೀವ್ ಸ್ಮಿತ್, ಈ ಸಲ ಪ್ಲೇಆಫ್ ಹಂತಕ್ಕೇರುವ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳನ್ನೂ ಕೂಡ ನೀಡಿದ್ದಾರೆ. ಕುತೂಹಲಕಾರಿ ವಿಷಯ ಎಂದರೆ ಈ 4 ತಂಡಗಳಲ್ಲಿ ಆರ್​ಸಿಬಿ ಇಲ್ಲ ಎಂಬುದು. ಹಾಗಿದ್ರೆ ಸ್ಮಿತ್ ಹೆಸರಿಸಿದ ಆ ನಾಲ್ಕು ತಂಡಗಳಾವುವು...

2 / 7
ಚೆನ್ನೈ ಸೂಪರ್ ಕಿಂಗ್ಸ್: ಈ ಬಾರಿಯ ಐಪಿಎಲ್​ನಲ್ಲಿ ಸಿಎಸ್​ಕೆ ತಂಡವು ಪ್ಲೇಆಫ್ ಆಡುವುದು ಬಹುತೇಕ ಖಚಿತ ಎಂದಿದ್ದಾರೆ ಸ್ಮಿತ್. ಏಕೆಂದರೆ ಚೆನ್ನೈ ತಂಡವನ್ನು ಅನುಭವಿ ನಾಯಕ ಎಂಎಸ್ ಧೋನಿ ಮುನ್ನಡೆಸುತ್ತಿದ್ದಾರೆ. ಜೊತೆಗೆ ತಂಡದಲ್ಲಿ ರವೀಂದ್ರ ಜಡೇಜಾ , ಬೆನ್ ಸ್ಟೋಕ್ಸ್ ಮತ್ತು ಮೊಯಿನ್ ಅಲಿ ಅವರಂತಹ ಆಲ್​ರೌಂಡರ್​ಗಳಿದ್ದಾರೆ. ಹಾಗೆಯೇ ಉತ್ತಮ ಬೌಲರ್​ಗಳಾದ ದೀಪಕ್ ಚಹಾರ್ ಮತ್ತು ಮಹೇಶ್ ತೀಕ್ಷಣ ಅವರಂತಹವರನ್ನು ಒಳಗೊಂಡಿದೆ. ಹೀಗಾಗಿ ಸಿಎಸ್​ಕೆ ಪ್ಲೇಆಫ್ ಪ್ರವೇಶಿಸಲಿದೆ ಎಂದು ಸ್ಟೀವ್ ಸ್ಮಿತ್ ತಿಳಿಸಿದ್ದಾರೆ.

3 / 7
ಗುಜರಾತ್ ಟೈಟಾನ್ಸ್: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಕೂಡ ಬಲಿಷ್ಠ ಆಟಗಾರರನ್ನು ಹೊಂದಿದೆ. ತಂಡದಲ್ಲಿ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತಿವಾಠಿಯಾ ಹಾಗೂ ಮ್ಯಾಥ್ಯೂ ವೇಡ್​ನಂತಹ ಆಟಗಾರರಿದ್ದಾರೆ. ಜೊತೆಗೆ ಅತ್ಯುತ್ತಮ ಸ್ಪಿನ್ನರ್ ರಶೀದ್ ಖಾನ್ ಕೂಡ ಜಿಟಿ ತಂಡದಲ್ಲಿದ್ದಾರೆ. ಹೀಗಾಗಿ ಗುಜರಾತ್ ಟೈಟಾನ್ಸ್ ತಂಡವನ್ನು ಕೂಡ ಪ್ಲೇಆಫ್​ನಲ್ಲಿ ಎದುರು ನೋಡಬಹುದು ಎಂದು ಸ್ಮಿತ್ ಭವಿಷ್ಯ ನುಡಿದಿದ್ದಾರೆ.

4 / 7
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಕೂಡ ಪ್ಲೇಆಫ್ ಪ್ರವೇಶಿಸಲಿದೆ. ರಾಹುಲ್ ಅವರ ನಾಯಕತ್ವದಲ್ಲಿ ಮಾರ್ಕಸ್ ಸ್ಟೋಯಿನಿಸ್, ಕ್ವಿಂಟನ್ ಡಿಕಾಕ್, ದೀಪಕ್ ಹೂಡಾರಂತಹ ಮ್ಯಾಚ್​ ವಿನ್ನರ್ ಆಟಗಾರರ ದಂಡೇ ಇದೆ. ಹೀಗಾಗಿ ಲಕ್ನೋ ತಂಡ ಕೂಡ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ ಎಂದು ಸ್ಮಿತ್ ಹೇಳಿದರು.

5 / 7
ಸನ್​ರೈಸರ್ಸ್ ಹೈದರಾಬಾದ್: ಈ ಸಲ ಎಸ್​ಹೆಚ್ ತಂಡ ಕೂಡ ಪ್ಲೇಆಫ್ ಪ್ರವೇಶಿಸಲಿದೆ ಎಂದು ಸ್ಟೀವ್ ಸ್ಮಿತ್ ಭವಿಷ್ಯ ನುಡಿದಿದ್ದಾರೆ. ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಐಡೆನ್ ಮಾರ್ಕ್ರಾಮ್ ಎಸ್​ಆರ್​ಹೆಚ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಸನ್​ರೈಸರ್ಸ್ ಹೈದರಾಬಾದ್ ತಂಡ ಕೂಡ ಪ್ಲೇಆಫ್ ಪ್ರವೇಶಿಸಲಿದೆ ಎಂದು ಸ್ಟೀವ್ ಸ್ಮಿತ್ ಭವಿಷ್ಯ ನುಡಿದಿದ್ದಾರೆ.

6 / 7
ಈ ಹಿಂದೆ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಸ್ಟೀವ್ ಸ್ಮಿತ್ ಅವರ ಭವಿಷ್ಯವಾಣಿ ನಿಜವಾಗಲಿದೆಯಾ ಕಾದು ನೋಡಬೇಕಿದೆ.

7 / 7
Web contact
Web contact

TV9 Kannada

Read More
Follow Us
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ

Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​

ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ

ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ

ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್

ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು

‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು