IPL 2024: ‘ಮುಜುಗರ ತಂದಿದೆ’; ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಅಸಮಾಧಾನ

Updated on: Apr 04, 2024 | 5:02 PM

IPL 2024: ಕೆಕೆಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 106 ರನ್‌ಗಳ ಸೋಲಿನ ಬಗ್ಗೆ ಮಾತನಾಡಿರುವ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಬಹಿರಂಗವಾಗಿಯೇ ತಂಡದ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಈ ಬಗ್ಗೆ ತಂಡದ ಮೀಟಿಂಗ್​ನಲ್ಲಿ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.

1 / 6
ಕೆಕೆಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 106 ರನ್‌ಗಳ ಸೋಲಿನ ಬಗ್ಗೆ ಮಾತನಾಡಿರುವ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಬಹಿರಂಗವಾಗಿಯೇ ತಂಡದ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಈ ಬಗ್ಗೆ ತಂಡದ ಮೀಟಿಂಗ್​ನಲ್ಲಿ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.

ಕೆಕೆಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 106 ರನ್‌ಗಳ ಸೋಲಿನ ಬಗ್ಗೆ ಮಾತನಾಡಿರುವ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಬಹಿರಂಗವಾಗಿಯೇ ತಂಡದ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಈ ಬಗ್ಗೆ ತಂಡದ ಮೀಟಿಂಗ್​ನಲ್ಲಿ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.

2 / 6

ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಂಟಿಂಗ್, ಪಂದ್ಯದ ಮೊದಲಾರ್ಧದಲ್ಲಿ ತಮ್ಮ ತಂಡದ ಪ್ರದರ್ಶನವನ್ನು ನೋಡಿದ ನಂತರ ನನಗೆ ಮುಜುಗರವಾಯಿತು. ಸದ್ಯಕ್ಕೆ ತಂಡದ ಸೋಲಿನ ಬಗ್ಗೆ ವಿವರವಾಗಿ ಹೇಳುವುದು ಕಷ್ಟ. ಇಷ್ಟು ರನ್ ನೀಡುವುದು ಗ್ರಹಿಕೆಗೆ ನಿಲುಕದ್ದು.

3 / 6

ನಾವು ಈ ಪಂದ್ಯದಲ್ಲಿ ಬರೋಬ್ಬರಿ 17 ವೈಡ್‌ಗಳನ್ನು ಬೌಲ್ ಮಾಡಿದ್ದೇವೆ. ಹೀಗಾಗಿ ನಿಗದಿತ ಸಮಯಕ್ಕೆ ಓವರ್​ಗಳನ್ನು ಮುಗಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 20 ಓವರ್​ಗಳನ್ನು ಮುಗಿಸಲು ನಾವು ಎರಡು ಗಂಟೆಗಳನ್ನು ತೆಗೆದುಕೊಂಡಿದ್ದೇವೆ. ಪರಿಣಾಮವಾಗಿ, ನಾವು ಮತ್ತೆ ಎರಡು ಓವರ್‌ ಹಿಂದೆ ಉಳಿದೆವು. ಅಂದರೆ ಕೊನೆಯ ಎರಡು ಓವರ್‌ಗಳಲ್ಲಿ 30 ಯಾರ್ಡ್​ ಸರ್ಕಲ್​ನಿಂದ ಕೇವಲ ನಾಲ್ಕು ಫೀಲ್ಡರ್‌ಗಳು ಮಾತ್ರ ಫೀಲ್ಡಿಂಗ್ ಮಾಡಬೇಕಾಯಿತು.

4 / 6

ಈ ಪಂದ್ಯದಲ್ಲಿ ಸಾಕಷ್ಟು ತಪ್ಪುಗಳನ್ನು ನಮ್ಮ ತಂಡ ಮಾಡಿದೆ ಅದು ಸ್ವೀಕಾರಾರ್ಹವಲ್ಲ. ನಾವು ಇದನ್ನು ತಂಡದೊಳಗೆ ಚರ್ಚಿಸುತ್ತೇವೆ ಮತ್ತು ಶೀಘ್ರದಲ್ಲೇ ಸುಧಾರಿಸುತ್ತೇವೆ. ಮುಕ್ತವಾಗಿ ತಂಡದೊಂದಿಗೆ ಮಾತನಾಡುವುದು ನಡೆಸುವುದು ಮುಖ್ಯ. ಬೌಲಿಂಗ್‌, ಫೀಲ್ಡ್‌ ಪ್ಲೇಸ್‌ಮೆಂಟ್‌, ಎಲ್ಲದರ ಬಗ್ಗೆ ಚರ್ಚೆ ನಡೆಸಬೇಕಾಗುತ್ತದೆ ಎಂದರು.

5 / 6

ವಾಸ್ತವವಾಗಿ ಆಟಗಾರರ ಪ್ರದರ್ಶನದ ಬಗ್ಗೆ ಪಾಂಟಿಂಗ್ ಗರಂ ಆಗಲು ಕಾರಣಗಳಿವೆ. ಅದರಲ್ಲಿ ಪ್ರಮುಖವಾದದ್ದು, ನಾಯಕ ಪಂತ್ ಡಿಆರ್​ಎಸ್​ಗಳನ್ನು ಸರಿಯಾಗಿ ಬಳಸದೆ ಇರುವುದು. ಈ ಪಂದ್ಯದಲ್ಲಿ ಪಂತ್, ಸುನಿಲ್ ನರೈನ್ ಹಾಗೂ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಅವರ ವಿಕೆಟ್​ ಬಗ್ಗೆ ಬೌಲರ್​ಗಳು ಡಿಆರ್​ಎಸ್​ಗಾಗಿ ಮನವಿ ಮಾಡಿದರೂ ಪಂತ್, ಆ ಮನವಿಯನ್ನು ತಿರಸ್ಕರಿಸಿದರು.

6 / 6

ಇದು ತಂಡಕ್ಕೆ ತುಂಬಾ ದುಬಾರಿಯಾಯಿತು. ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡ ಸುನಿಲ್ ನರೈನ್ 85 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಅಯ್ಯರ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು.ಇದಲ್ಲದೆ ಪಂತ್ ಬೌಲರ್​ಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಹೀಗಾಗಿ ಕೆಕೆಆರ್ ತಂಡ ಸರಾಗವಾಗಿ ರನ್ ಕಲೆಹಾಕಿತು.

Published On - 5:01 pm, Thu, 4 April 24

Loading...
Unable to load recommendations.
Follow Us