AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

David Warner: ಪವರ್​ಪ್ಲೇನಲ್ಲಿ ಪವರ್​ಫುಲ್ ದಾಖಲೆ ಬರೆದ ವಾರ್ನರ್

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪವರ್​ಪ್ಲೇ ಓವರ್​ಗಳಲ್ಲಿ ನೂರಕ್ಕಿಂತ ಅಧಿಕ ಸಿಕ್ಸ್ ಬಾರಿಸಿರುವುದು ಇಬ್ಬರೇ ಇಬ್ಬರು ಬ್ಯಾಟರ್​ಗಳು. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಮೂಲಕ ವಾರ್ನರ್ ಐಪಿಎಲ್​ನಲ್ಲಿ ಈ ವಿಶೇಷ ಸಾಧನೆ ಮಾಡಿದ್ದಾರೆ.

TV9 Web
| Edited By: |

Updated on: Mar 30, 2024 | 10:07 AM

Share
ಜೈಪುರದ ಸವಾಯ್​ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ (IPL 2024) 9ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ (David Warner) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಆರಂಭಿಕನಾಗಿ ಕಣಕ್ಕಿಳಿದ ವಾರ್ನರ್ 34 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 49 ರನ್ ಬಾರಿಸಿ ಔಟಾಗಿದ್ದರು.

1 / 5
ಈ ವೇಳೆ ಸಿಡಿಸಿದ 3 ಸಿಕ್ಸ್​ಗಳೊಂದಿಗೆ ಡೇವಿಡ್ ವಾರ್ನರ್ ಹೊಸ ಮೈಲುಗಲ್ಲು ದಾಟಿದ್ದಾರೆ. ಅದು ಕೂಡ ಪವರ್​ಪ್ಲೇನಲ್ಲಿ ಸಿಕ್ಸ್ ಸಿಡಿಸುವ ಮೂಲಕ ಎಂಬುದು ವಿಶೇಷ. ಅಂದರೆ ಐಪಿಎಲ್​ ಇತಿಹಾಸದಲ್ಲಿ ಪವರ್​​ಪ್ಲೇನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ವಾರ್ನರ್ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

2 / 5
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್. ಐಪಿಎಲ್​ನಲ್ಲಿ 142	ಪಂದ್ಯಗಳನ್ನಾಡಿರುವ ಗೇಲ್ ಪವರ್​ಪ್ಲೇನಲ್ಲಿ ಒಟ್ಟು 143 ಸಿಕ್ಸ್​ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಐಪಿಎಲ್​ ಪಂದ್ಯಗಳ ಮೊದಲ 6 ಓವರ್​ಗಳಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

3 / 5
ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 3 ಸಿಕ್ಸ್​ ಸಿಡಿಸುವುದರೊಂದಿಗೆ ಡೇವಿಡ್ ವಾರ್ನರ್ ಐಪಿಎಲ್​ ಪವರ್​ಪ್ಲೇನಲ್ಲಿ 100 ಕ್ಕಿಂತ ಅಧಿಕ ಸಿಕ್ಸ್ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. 178 ಐಪಿಎಲ್ ಇನಿಂಗ್ಸ್ ಆಡಿರುವ ವಾರ್ನರ್ ಪವರ್​ಪ್ಲೇನಲ್ಲಿ ಇದುವರೆಗೆ 101 ಸಿಕ್ಸ್​ಗಳನ್ನು​ ಬಾರಿಸಿದ್ದಾರೆ.

4 / 5
ಈ ಮೂಲಕ ಕ್ರಿಸ್ ಗೇಲ್ ನಂತರ ಐಪಿಎಲ್ ಇತಿಹಾಸದಲ್ಲಿ ಪವರ್​ಪ್ಲೇನಲ್ಲಿ ನೂರು ಸಿಕ್ಸರ್​ಗಳನ್ನು ಸಿಡಿಸಿದ 2ನೇ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನು ಡೇವಿಡ್ ವಾರ್ನರ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಐಪಿಎಲ್​ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ದಾಖಲೆ ಕೂಡ ವಾರ್ನರ್ ಹೆಸರಿನಲ್ಲಿದೆ. ಡೇವಿಡ್ ವಾರ್ನರ್ ಇದುವರೆಗೆ 61 ಅರ್ಧಶತಕ ಬಾರಿಸಿದ್ದು, ಈ ದಾಖಲೆಯನ್ನು ಯಾರು ಮುರಿಯಲಿದ್ದಾರೆ ಕಾದು ನೋಡಬೇಕಿದೆ.

5 / 5
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ

ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ

ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ

ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ

ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!