AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಹೀಗಾದ್ರೆ RCB ಮತ್ತು CSK, ಎರಡೂ ತಂಡಗಳು ಪ್ಲೇಆಫ್​ಗೆ..!

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) 68ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಹೀಗಾಗಿ ಈ ಮ್ಯಾಚ್​ನಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಝಾಹಿರ್ ಯೂಸುಫ್
|

Updated on:May 16, 2024 | 1:47 PM

Share
ಐಪಿಎಲ್ (IPL 2024) ಸೀಸನ್ 17 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನು ಉಳಿದಿರುವುದು ಕೇವಲ 5 ಮ್ಯಾಚ್​ಗಳು ಮಾತ್ರ. ಈ ಐದು ಪಂದ್ಯಗಳಲ್ಲಿ ಪ್ಲೇಆಫ್ ಆಡಲಿರುವ 4 ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ. ಈಗಾಗಲೇ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್​ಗೆ ಎಂಟ್ರಿ ಕೊಟ್ಟಿದೆ. ಇನ್ನುಳಿದಿರುವ 2 ಸ್ಥಾನಗಳಿಗಾಗಿ 3 ತಂಡಗಳ ನಡುವೆ ನೇರ ಪೈಪೋಟಿ ಇದೆ.

1 / 7
ಇಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ 2 ಪಂದ್ಯಗಳಿದ್ದು, ಈ ಪಂದ್ಯಗಳಲ್ಲಿ ಒಂದು ಮ್ಯಾಚ್​ನಲ್ಲಿ ಜಯ ಸಾಧಿಸಿ 16 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶವಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯವು ಉಭಯ ತಂಡಗಳ ಪಾಲಿಗೆ ಪ್ಲೇಆಫ್ ಪ್ರವೇಶಿಸಲು ನಿರ್ಣಾಯಕವಾಗಿದೆ.

2 / 7
ಇಂಟ್ರೆಸ್ಟಿಂಗ್ ವಿಷಯ ಎಂದರೆ, ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ನಿರ್ಣಾಯಕ ಪಂದ್ಯವಾಡುತ್ತಿದ್ದರೂ ಉಭಯ ತಂಡಗಳಿಗೂ ಪ್ಲೇಆಫ್ ಪ್ರವೇಶಿಸಲು ಅವಕಾಶವಿದೆ. ಅಂದರೆ ಇಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಫಲಿತಾಂಶದ ಮೇಲೆ ಇದು ನಿರ್ಧಾರವಾಗಲಿದೆ.

3 / 7
ಸನ್​ರೈಸರ್ಸ್​ ಹೈದರಾಬಾದ್ ತಂಡವು ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ ಸೋತರೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಅದು ಹೇಗೆಂದರೆ...

4 / 7
+0.406 ನೆಟ್ ರನ್ ರೇಟ್ ಹೊಂದಿರುವ ಎಸ್​ಆರ್​ಹೆಚ್​ ತಂಡವು ಮುಂದಿನ 2 ಮ್ಯಾಚ್​ಗಳಲ್ಲಿ ಸೋತರೆ ನೆಟ್ ರನ್​ ರೇಟ್ ಕಡಿಮೆಯಾಗಲಿದೆ. ಇದೇ ವೇಳೆ +0.387 ನೆಟ್ ರನ್ ರೇಟ್ ಹೊಂದಿರುವ ಆರ್​ಸಿಬಿ ಸಿಎಸ್​ಕೆ ತಂಡವನ್ನು 11 ಎಸೆತಗಳು ಬಾಕಿಯಿರುವಂತೆ ಅಥವಾ 18 ರನ್​ಗಳಿಂದ ಮಣಿಸಿದರೆ ನೆಟ್ ರನ್​ ರೇಟ್​ +0.530 ಕ್ಕೇರಲಿದೆ. ಅತ್ತ ಸಿಎಸ್​ಕೆ ತಂಡ ಸೋತರೂ +0.400 ಪ್ಲಸ್ ನೆಟ್ ರನ್ ರೇಟ್ ಹೊಂದಿರಲಿದೆ.

5 / 7
ಇದರಿಂದ ಆರ್​ಸಿಬಿ ತಂಡವು ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಲಿದ್ದು, ಅತ್ತ ಸಿಎಸ್​ಕೆ ತಂಡವು 4ನೇ ಸ್ಥಾನ ಅಲಂಕರಿಸಲಿದೆ. ಇನ್ನು 2 ಮ್ಯಾಚ್​ಗಳಲ್ಲಿ ಸೋತರೆ ಎಸ್​ಆರ್​ಹೆಚ್ ತಂಡವು ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿಯಲಿದೆ. ಈ ಮೂಲಕ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಪ್ಲೇಆಫ್ ಪ್ರವೇಶಿಸಬಹುದು.

6 / 7
ಈ ಲೆಕ್ಕಾಚಾರದಂತೆ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಪ್ಲೇಆಫ್ ಪ್ರವೇಶಿಸಿದರೆ, ಎಲಿಮಿನೇಟರ್ ಪಂದ್ಯದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದೆ. ಏಕೆಂದರೆ ಪ್ಲೇಆಫ್ ನಿಯಮದ ಪ್ರಕಾರ ಅಂಕ ಪಟ್ಟಿಯಲ್ಲಿ 3ನೇ ಮತ್ತು 4ನೇ ಸ್ಥಾನಗಳಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯವಾಡಲಿದ್ದು, ಇದರಲ್ಲಿ ಗೆದ್ದ ತಂಡ 2ನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಲಿದೆ. ಅದರಂತೆ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಪ್ಲೇಆಫ್ ಪ್ರವೇಶಿಸಿ ಎಲಿಮಿನೇಟರ್​ ಪಂದ್ಯದಲ್ಲಿ ಮುಖಾಮುಖಿಯಾಗಲಿದೆಯಾ ಕಾದು ನೋಡಬೇಕಿದೆ.

7 / 7

Published On - 8:23 am, Thu, 16 May 24

Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ

ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು

ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್

SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು

ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್

ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ

ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು

ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ

ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ