AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ನಾನೇ ನಾಯಕ: ಮೊದಲ 12 ಓವರ್​ಗಳಲ್ಲಿ ಬುಮ್ರಾಗೆ ಒಂದೇ ಓವರ್ ನೀಡಿದ ಪಾಂಡ್ಯ..!

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​ 2024) 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವೇಗಿ ಜಸ್​ಪ್ರೀತ್ ಬುಮ್ರಾ ಮಿಂಚಿನ ದಾಳಿ ಮೂಲಕ ಮಿಂಚಿದ್ದಾರೆ. ಆದರೆ ಈ ಪಂದ್ಯದಲ್ಲಿ ಬುಮ್ರಾ ಮೊದಲ 12 ಓವರ್​ಗಳಲ್ಲಿ ಎಸೆದಿದ್ದು ಕೇವಲ 1 ಓವರ್ ಎಂಬುದೇ ಅಚ್ಚರಿ. ಅಂದರೆ ಐಪಿಎಲ್​ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಬುಮ್ರಾ ಅವರನ್ನು ಪವರ್​ಪ್ಲೇನಲ್ಲಿ ಬಳಸಿಕೊಳ್ಳದಿರುವುದು ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ.

TV9 Web
| Edited By: |

Updated on: Mar 25, 2024 | 10:03 AM

Share
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಮುಗ್ಗರಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡವನ್ನು 6 ರನ್​ಗಳಿಂದ ಮಣಿಸಿ ಗುಜರಾತ್ ಟೈಟಾನ್ಸ್ ತಂಡ ಶುಭಾರಂಭ ಮಾಡಿದೆ. ಈ ಸೋಲಿನ ಬೆನ್ನಲ್ಲೇ ಇದೀಗ ಹಾರ್ದಿಕ್ ಪಾಂಡ್ಯರ (Hardik Pandya) ನಾಯಕತ್ವದ ಬಗ್ಗೆ ಪ್ರಶ್ನೆಗಳೆದಿವೆ.

1 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಓವರ್​ ಎಸೆಯುವ ಮೂಲಕ ಪಾಂಡ್ಯ ಎಲ್ಲರ ಗಮನ ಸೆಳೆದರು. ಸಾಮಾನ್ಯವಾಗಿ ಮುಂಬೈ ಇಂಡಿಯನ್ಸ್ ಪರ ಜಸ್​ಪ್ರೀತ್ ಬುಮ್ರಾ ಪ್ರಥಮ ಓವರ್ ಎಸೆಯುವುದು ವಾಡಿಕೆ. ಇದಾಗ್ಯೂ ಮೊದಲ ಮೂರು ಓವರ್​ಗಳ ತನಕ ಕ್ಯಾಪ್ಟನ್ ಪಾಂಡ್ಯ, ಬುಮ್ರಾಗೆ ಚೆಂಡು ನೀಡಿರಲಿಲ್ಲ.

2 / 7
ಇನ್ನು ನಾಲ್ಕನೇ ಓವರ್​ನಲ್ಲಿ ದಾಳಿಗಿಳಿದ ಜಸ್​ಪ್ರೀತ್ ಆರಂಭಿಕ ಬ್ಯಾಟರ್ ಬುಮ್ರಾ ವೃದ್ಧಿಮಾನ್ ಸಾಹ (19) ಅವರನ್ನು ಕ್ಲೀನ್ ಬೌಲ್ಡ್ ಮಾಡಿ, ಮುಂಬೈ ಇಂಡಿಯನ್ಸ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಈ ಯಶಸ್ಸಿನ ಬಳಿಕ ಬುಮ್ರಾಗೆ ಮತ್ತೆ ಓವರ್ ನೀಡಿರಲಿಲ್ಲ ಎಂಬುದೇ ಅಚ್ಚರಿ.

3 / 7
ಅಲ್ಲದೆ 4ನೇ ಓವರ್​ ಮುಗಿಸಿದ ಬಳಿಕ ಮತ್ತೆ ಜಸ್​ಪ್ರೀತ್ ಬುಮ್ರಾ ಅವರನ್ನು ದಾಳಿಗಿಳಿಸಿದ್ದು 13ನೇ ಓವರ್​ನಲ್ಲಿ. ಅಂದರೆ ಇಲ್ಲಿ ಪವರ್​ಪ್ಲೇನಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಅನ್ನು ಬಳಸಿಕೊಳ್ಳಲು ಪಾಂಡ್ಯ ಮನಸ್ಸು ಮಾಡಲಿಲ್ಲ. ಇದರ ನಡುವೆ ಗುಜರಾತ್ ಟೈಟಾನ್ಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು.

4 / 7
ಇನ್ನು 17ನೇ ಓವರ್​ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಜಸ್​ಪ್ರೀತ್ ಬುಮ್ರಾ ಡೇಂಜರಸ್ ಡೇವಿಡ್ ಮಿಲ್ಲರ್ (12) ವಿಕೆಟ್ ಪಡೆದರು. ಇದೇ ಓವರ್​ನಲ್ಲೇ ಸಾಯಿ ಸುದರ್ಶನ್ (45) ಅವರನ್ನು ಸಹ ಔಟ್ ಮಾಡಿದರು. ಈ ಮೂಲಕ 4 ಓವರ್​ಗಳಲ್ಲಿ ಕೇವಲ 14 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.

5 / 7
ಇಲ್ಲಿ ಗುಜರಾತ್ ಟೈಟಾನ್ಸ್ ತಂಡವು ಪವರ್​ಪ್ಲೇನಲ್ಲಿ 47 ರನ್​ ಬಾರಿಸಿದರೆ, ಆ ಬಳಿಕ 12 ಓವರ್​ ಆಗುವಷ್ಟರಲ್ಲಿ 100 ರನ್​ಗಳ ಗಡಿದಾಟಿದ್ದರು. ಇದಾದ ಬಳಿಕವಷ್ಟೇ ಜಸ್​ಪ್ರೀತ್ ಬುಮ್ರಾ ಮತ್ತೆ ದಾಳಿಗಿಳಿದಿರುವುದು ಎಂಬುದು ಉಲ್ಲೇಖಾರ್ಹ. ಆ ಬಳಿಕ ವಿಕೆಟ್ ಕಳೆದುಕೊಂಡಿದ್ದಲ್ಲದೇ 8 ಓವರ್​ಗಳಲ್ಲಿ ಗಳಿಸಿದ್ದು ಕೇವಲ 64 ರನ್​ಗಳು ಮಾತ್ರ.

6 / 7
ಅಂದರೆ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವುದು ಮೊದಲ 12 ಓವರ್​ಗಳಲ್ಲಿ ಎಂಬುದು ಸ್ಪಷ್ಟ. ಈ ವೇಳೆ ಅನುಭವಿ ವೇಗಿ ಜಸ್​ಪ್ರೀತ್ ಬುಮ್ರಾರನ್ನು ಬೌಲಿಂಗ್​ನಿಂದ ದೂರವಿಟ್ಟಿದ್ದ ನಾಯಕ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿದೆ.

7 / 7
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ

ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ

ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?

ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ

ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು

ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?

ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ