- Kannada News Photo gallery Cricket photos IPL 2024: RCB registered an unwanted record to their name in T20
IPL 2024: ರನ್ ಹೊಡೆಸಿಕೊಳ್ಳುವುದರಲ್ಲೂ ವಿಶ್ವ ದಾಖಲೆ ಬರೆದ RCB
IPL 2024: ಐಪಿಎಲ್ 2024ರ 36ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರೋಚಕ ಜಯ ಸಾಧಿಸಿದೆ. ಆರ್ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 222 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 221 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಕೆಕೆಆರ್ 1 ರನ್ನಿಂದ ರೋಚಕ ಗೆಲುವು ದಾಖಲಿಸಿತು.
Updated on: Apr 22, 2024 | 1:52 PM

ಐಪಿಎಲ್ (IPL 2024) ಸೀಸನ್ 17 ರಲ್ಲಿ ಆರ್ಸಿಬಿ ತಂಡದ ಲೆಕ್ಕಾಚಾರಗಳು ತಲೆಕೆಳಗಾಗುತ್ತಿದೆ. ಆಡಿರುವ 8 ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. ಇನ್ನುಳಿದ 7 ಮ್ಯಾಚ್ಗಳಲ್ಲಿ ಸೋಲುನುಭವಿಸಿ ಇದೀಗ ಪಾಯಿಂಟ್ಸ್ ಟೇಬಲ್ನಲ್ಲಿ 10ನೇ ಸ್ಥಾನದಲ್ಲಿದೆ.

ಅಷ್ಟೇ ಅಲ್ಲದೆ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 222 ರನ್ ಹೊಡೆಸಿಕೊಳ್ಳುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಿ20 ಕ್ರಿಕೆಟ್‌ನಲ್ಲಿ ಅನಗತ್ಯ ದಾಖಲೆಯೊಂದನ್ನು ಬರೆದಿದೆ. ಅದು ಕೂಡ ವಿದೇಶಿ ತಂಡವೊಂದರ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಂದರೆ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ 2 ಬಾರಿ 200ಕ್ಕೂ ಅಧಿಕ ರನ್ ನೀಡಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 287 ರನ್ ಹೊಡೆಸಿಕೊಂಡಿದ್ದ ಆರ್ಸಿಬಿ ಬೌಲರ್ಗಳು, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 222 ರನ್ ನೀಡಿದೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ 200+ ರನ್ ನೀಡಿದ ತಂಡವೆಂಬ ಅಪಕೀರ್ತಿಗೆ ಒಳಗಾಗಿದೆ.

ಇದಕ್ಕೂ ಮುನ್ನ ಈ ಕಳಪೆ ದಾಖಲೆ ಇಂಗ್ಲೆಂಡ್ನ ಮಿಡ್ಲ್ಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ತಂಡದ ಹೆಸರಿನಲ್ಲಿತ್ತು. ಮಿಡ್ಲ್ಸೆಕ್ಸ್ ತಂಡವು ಟಿ20 ಕ್ರಿಕೆಟ್‌ನಲ್ಲಿ ಒಟ್ಟು 28 ಬಾರಿ 200+ ಸ್ಕೋರ್ ನೀಡಿ ಈ ಅನಗತ್ಯ ದಾಖಲೆಯನ್ನು ಬರೆದಿತ್ತು.

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ದಾಖಲೆಯನ್ನು ಮುರಿದಿದೆ. ಈ ಬಾರಿಯ ಐಪಿಎಲ್ನಲ್ಲಿ 2 ಬಾರಿ 200+ ರನ್ ನೀಡುವ ಮೂಲಕ ಆರ್ಸಿಬಿ ಒಟ್ಟು 29 ಬಾರಿ ಇನ್ನೂರಕ್ಕೂ ಅಧಿಕ ರನ್ ನೀಡಿ ತಂಡ ಎನಿಸಿಕೊಂಡಿದೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಬಾರಿ 200+ ರನ್ ಹೊಡೆಸಿಕೊಂಡ ಕಳಪೆ ದಾಖಲೆಯನ್ನು ಆರ್ಸಿಬಿ ತನ್ನದಾಗಿಸಿಕೊಂಡಿದೆ.




